ETV Bharat / state

ಬಹಿಷ್ಕಾರ ಪ್ರಕರಣ : ಮಾಧ್ಯಮಗಳ ಮುಂದೆ ಹೋಗಿದ್ದಕ್ಕೆ ಕುಟುಂಬದವರ ಮೇಲೆ ಹಲ್ಲೆ ನಡೆಸಿದ ಆರೋಪ

ಈ ಸಂಬಂಧ ಬಹಿಷ್ಕಾರಗೊಂಡ ಕುಟುಂಬಸ್ಥರು ನಿನ್ನೆ ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಆದ್ದರಿಂದ, ಕೋಪಗೊಂಡ ಗ್ರಾಮದ ಬಸವರಾಜು, ನಾಗೇಂದ್ರ, ಮೂರ್ತಿ ಹಾಗೂ ಶಂಕರ್ ಸಹಚರರು ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಬಹಿಷ್ಕಾರದ ಕುಟುಂಬದವರು ಆರೋಪಿಸಿದ್ದಾರೆ..

social-exclusion-family-assaulted-by-accused-in-mysore
ಮಾಧ್ಯಮಗಳ ಮುಂದೆ ಹೋಗಿದ್ದಕ್ಕೆ ಕುಟುಂಬದವರ ಮೇಲೆ ಹಲ್ಲೆ
author img

By

Published : Oct 27, 2021, 3:35 PM IST

Updated : Oct 27, 2021, 4:13 PM IST

ಮೈಸೂರು : ಸಾಮೂಹಿಕ ಬಹಿಷ್ಕಾರಕ್ಕೊಳಗಾಗಿದ್ದರಿಂದ ನ್ಯಾಯಕ್ಕಾಗಿ ಮಾಧ್ಯಮಗಳ ಮೊರೆ ಹೋದರೆಂದು ಸಂತ್ರಸ್ತ ಕುಟುಂಬ ಸದಸ್ಯರುಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ಇಂದು ಜಿಲ್ಲೆ ಟಿ. ನರಸಿಪುರ ತಾಲೂಕಿನ ಮೂಗೂರು ಗ್ರಾಮದಲ್ಲಿ ನಡೆದಿದೆ.

ಸಂತ್ರಸ್ತ ಕುಟುಂಬ ಸದಸ್ಯರುಗಳ ಮೇಲೆ ಹಲ್ಲೆ ಆರೋಪ

ಮಾಧ್ಯಮಗಳ ಮುಂದೆ ಹೋದರೆಂದು ಸಮುದಾಯದ ಮುಖಂಡರೇ ಸಂತ್ರಸ್ತರ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪ ಹೇಳಿ ಬಂದಿದೆ. ರಾಘವೇಂದ್ರ ಎಂಬುವರು ಹಾಗೂ ಅವರ ಸಂಬಂಧಿಯ ಮೇಲೆ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಸ್ಥಳೀಯರು ಗಾಯಗೊಂಡವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಮುಂದುವರಿಯದಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ಘಟನೆ‌ ಹಿನ್ನೆಲೆ : ತಮ್ಮ ಜಮೀನಿನಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಪ್ರಶ್ನೆ ಮಾಡಿದ್ದಕ್ಕಾಗಿ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ವಿಧಿಸಲಾಗಿತ್ತು.

ಅನ್ಯಾಯದ ಬಗ್ಗೆ ಪ್ರಶ್ನಿಸಿದ್ದಕ್ಕೆ ಬಹಿಷ್ಕಾರ

ತಮಗಾದ ಅನ್ಯಾಯದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕಾಗಿ ಗ್ರಾಮ ಪಂಚಾಯತ್‌ ಸದಸ್ಯೆಯೂ ಸೇರಿ‌ 12 ಕುಟುಂಬಗಳಿಗೆ ಸಾಮೂಹಿಕವಾಗಿ ಬಹಿಷ್ಕಾರ ಹಾಕಲಾಗಿತ್ತು. ಬಹಿಷ್ಕಾರಕ್ಕೊಳಗಾಗಿರುವ ಕುಟುಂಬ ಸದಸ್ಯರನ್ನು ಯಾರು ಮಾತನಾಡಿಸುವಂತಿಲ್ಲ. ಶುಭ ಸಮಾರಂಭಗಳಿಗೆ ಆಹ್ವಾನಿಸುವಂತಿಲ್ಲ, ನೆರವು ನೀಡುವಂತಿಲ್ಲ ಎಂದು ತಿಳಿಸಲಾಗಿತ್ತು.

ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡ ಕುಟುಂಬಸ್ಥರು

ಈ ಸಂಬಂಧ ಬಹಿಷ್ಕಾರಗೊಂಡ ಕುಟುಂಬಸ್ಥರು ನಿನ್ನೆ ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಆದ್ದರಿಂದ, ಕೋಪಗೊಂಡ ಗ್ರಾಮದ ಬಸವರಾಜು, ನಾಗೇಂದ್ರ, ಮೂರ್ತಿ ಹಾಗೂ ಶಂಕರ್ ಸಹಚರರು ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಬಹಿಷ್ಕಾರದ ಕುಟುಂಬದವರು ಆರೋಪಿಸಿದ್ದಾರೆ.

ಓದಿ: ನ್ಯಾಯ ಕೇಳಿದ್ದಕ್ಕೆ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ: 25 ಸಾವಿರ ರೂಪಾಯಿ ದಂಡ

Last Updated : Oct 27, 2021, 4:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.