ETV Bharat / state

ಮೋದಿ ರಾಮನಲ್ಲ, ಕೃಷ್ಣ: ಎಸ್​.ಎಲ್.ಬೈರಪ್ಪ ಹೀಗೆ ಹೇಳಿದ್ದು ಏಕೆ? - ಮೈಸೂರಿನಲ್ಲಿ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ

ಹಿಂಸೆಯ ಮಾರ್ಗದ ಮೂಲಕ ಕೆಟ್ಟದಾಗಿ ಮಾತನಾಡುವವರನ್ನು ಕೊಲ್ಲಬಹುದಿತ್ತು. ಆದರೆ ರಾಮ ಆ ರೀತಿ‌ ಮಾಡದೆ ಆದರ್ಶವಾಗಿ ನಡೆದುಕೊಂಡ‌. ಮೋದಿ ಅಧಿಕಾರಕ್ಕೆ ಬಂದಾಗಲೂ ಇದೇ ರೀತಿ ಜನಾಭಿಪ್ರಾಯ ರೂಪಿಸಿದರು. ಆದರೆ‌ ಮೋದಿ ರಾಮನಲ್ಲ ಕೃಷ್ಣ. ಅವರು ತಂತ್ರಗಳಿಗೆ ಪ್ರತಿ ತಂತ್ರ ಹೂಡುವವರು ಎಂದು ಸಾಹಿತಿ ಎಸ್​.ಎಲ್.ಬೈರಪ್ಪ ಹೇಳಿದ್ದಾರೆ.

SL Byarappa Statement about PM Modi
ಸಾಹಿತಿ ಎಸ್​.ಎಲ್​ ಬೈರಪ್ಪ
author img

By

Published : Jan 3, 2021, 10:40 PM IST

ಮೈಸೂರು: ಪ್ರಧಾನಿ ಮೋದಿ ರಾಮನಲ್ಲ, ಕೃಷ್ಣ. ತಂತ್ರಗಳಿಗೆ ಪ್ರತಿ ತಂತ್ರ ಹೂಡುತಿದ್ದಾರೆ ಎಂದು ಪದ್ಮಶ್ರೀ ಪುರಸ್ಕೃತ ಹಿರಿಯ ಸಾಹಿತಿ ಎಸ್.ಎಲ್‌ ಭೈರಪ್ಪ ಹೇಳಿದರು.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ವತಿಯಿಂದ ನಗರದ ಆರೆಸ್ಸೆಸ್​ ಕಚೇರಿಯಲ್ಲಿ ಏರ್ಪಡಿಸಿದ್ದ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಉತ್ತರಾಖಾಂಡ ಬರೆದ ನೀವು ನಿಧಿ ಸಂಗ್ರಹ ಸಭೆಗೆ ಯಾಕೆ ಹೋಗ್ತೀರಾ ಎಂದು ಕೆಲವರು ನನ್ನ ಕೇಳಿದ್ರು. ರಾಮ ಆದರ್ಶ ವ್ಯಕ್ತಿ ಈ ಕಾರಣಕ್ಕೆ ನಾನು ಬಂದೆ ಎಂದರು.

ಸಾಹಿತಿ ಎಸ್​.ಎಲ್​ ಬೈರಪ್ಪ

ರಾಮನ ಬಗ್ಗೆ ಆಗಲೇ ಜನಾಭಿಪ್ರಾಯ ಮಾಡಲು ಶುರು ಮಾಡಿದ್ರು. ವನವಾಸ ಮುಗಿಸಿ ಬರುವಾಗ ರಾಜ್ಯ ಕೆಟ್ಟುಹೋಗಿತ್ತು. ಈ ವೇಳೆ ತೆರಿಗೆ ಸಂಗ್ರಹ ಮಾಡಿ ರಾಜ್ಯ ಕಟ್ಟಲು ರಾಮ ಮುಂದಾದ. ಇದಕ್ಕೆ ಒಪ್ಪದ ಕೆಲವರು ಅವನ ವಿರುದ್ಧ ಅಪಪ್ರಚಾರ ಮಾಡಲು ಪ್ರಾರಂಭಿಸಿದರು. ಆದರೆ, ಅವನ ವಿರುದ್ಧ ಮಾತನಾಡಲು ಏನು‌ ಇಲ್ಲದ ಕಾರಣ ಸೀತೆಯ ವಿಚಾರ ಮಧ್ಯಕ್ಕೆ ಎಳೆದು ತಂದರು. ಸೀತೆ ಸಿಂಹಾಸನದಲ್ಲಿ ಕೂರಲು ಅರ್ಹಳಲ್ಲ, ಅವಳು ರಾವಣನ ವಶದಲ್ಲಿದ್ದಳು ಎಂದು ಮಾತನಾಡಿದರು. ಇದರಿಂದ ರಾಮ ರಾಜ್ಯದ ಜನರಿಗೆ ಅರ್ಥ ಮಾಡಿಸಲು ಸೀತೆಯನ್ನು ತ್ಯಜಿಸಿದ ಎಂದು ಹೇಳಿದರು.

ಓದಿ : ದೆಹಲಿಯಲ್ಲಿ ಪಂಜಾಬ್‌ನ ರೈತರು ಮಾತ್ರ ಪ್ರತಿಭಟನೆ ಮಾಡುತ್ತಿದ್ದಾರೆ: ಎಸ್.ಎಲ್.ಭೈರಪ್ಪ

ಹಿಂಸೆಯ ಮಾರ್ಗದ ಮೂಲಕ ಕೆಟ್ಟದಾಗಿ ಮಾತನಾಡುವವರನ್ನು ಕೊಲ್ಲಬಹುದಿತ್ತು. ಆದರೆ ರಾಮ ಆ ರೀತಿ‌ ಮಾಡದೆ ಆದರ್ಶವಾಗಿ ನಡೆದುಕೊಂಡ‌. ಮೋದಿ ಅಧಿಕಾರಕ್ಕೆ ಬಂದಾಗಲೂ ಇದೇ ರೀತಿ ಜನಾಭಿಪ್ರಾಯ ರೂಪಿಸಿದರು. ಆದರೆ‌ ಮೋದಿ ರಾಮನಲ್ಲ ಕೃಷ್ಣ , ಅವರು ತಂತ್ರಗಳಿಗೆ ಪ್ರತಿ ತಂತ್ರ ಹೂಡುವವರು. ರಾಮ ಅಹಿಂಸಾ ಮಾರ್ಗವನ್ನು ಹಿಡಿದಿದ್ದ, ಗಾಂಧಿ ಕೂಡ ಅದೇ ಮಾರ್ಗವನ್ನು ಅನುಸರಿಸಿ ಉಪವಾಸ ಸತ್ಯಗ್ರಹ ಮಾಡುತ್ತಿದ್ದರು. ಉಪವಾಸ ಮಾಡಿದಾಗ ಹಿಂದೂಗಳು ಅವರ ಮಾತುಗಳನ್ನು ಕೇಳುತ್ತಿದ್ದರು. ಆದರೆ ಮಹಮ್ಮದ್ ಅಲಿ ಜಿನ್ನಾ ಉಪವಾಸ ಮಾಡಿ ಸಾಯಲಿ ಎಂದು ಬಯಸುತ್ತಿದ್ದ ಎಂದರು.

ಇತರೆ ಧರ್ಮದ ದೇವರುಗಳು ಬಹಳ ಕೋಪಿಷ್ಟರು, ಅವರ ಬಗ್ಗೆ ಸಣ್ಣ ಟೀಕೆ ಮಾಡಿದ್ರೂ ಭಕ್ತರು ಹೊಡೆಯುತ್ತಾರೆ. ಆದರೆ, ಹಿಂದೂ ಧರ್ಮದಲ್ಲಿ ಆ ರೀತಿ ಇಲ್ಲ, ಹಿಂದೂ ಧರ್ಮದ ವೈಶಾಲ್ಯ ಬೇರೆ ಧರ್ಮಗಳಲ್ಲಿ ಇಲ್ಲ. ನಾವು ದೇವರನ್ನು ಬೈಯುತ್ತೇವೆ, ಟೀಕೆ ಮಾಡುತ್ತೇವೆ, ಅದನ್ನು ನಾವು ಒಪ್ಪಿಕೊಳ್ಳುತ್ತೇವೆ‌. ಆದರೆ ಬೇರೆ ಧರ್ಮದವರಿಗೆ ಈ ವೈಶಾಲ್ಯವನ್ನು ಹೇಳಿಕೊಡಬೇಕಿದೆ. ಇಲ್ಲದಿದ್ದರೆ ಹಿಂದೂ ಧರ್ಮದ ವೈಶಾಲ್ಯತೆಗೆ ಧಕ್ಕೆಯಾಗುತ್ತೆ ಎಂದು ಹೇಳಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.