ETV Bharat / state

ಮೈಸೂರು ಚಿನ್ನಾಭರಣ ಅಂಗಡಿ ದರೋಡೆ ಪ್ರಕರಣದಲ್ಲಿ 6 ಜನರ ಬಂಧನ : ಡಿಜಿಪಿ ಪ್ರವೀಣ್ ಸೂದ್ - Six arrested in Mysore jewelery shop robbery

ಡಕಾಯತಿಯಲ್ಲಿ ದೋಚಿದ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೆ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಬೇಕಾಗಿದೆ.‌‌ ಮೈಸೂರಿನಿಂದ 5 ಟೀಂ ದೇಶದ ಬೇರೆ ಬೇರೆ ಭಾಗಕ್ಕೆ ಹೋಗಿದ್ದವು. ಅವರು ಬಂಧಿತರನ್ನು ಸ್ಥಳೀಯ ಕೋರ್ಟ್​ಗಳಿಗೆ ಹಾಜರುಪಡಿಸಿ ಮೈಸೂರಿಗೆ ಕರೆ ತಂದ ನಂತರ, ಮತ್ತಷ್ಟು ಮಾಹಿತಿ ನೀಡುತ್ತೇವೆ ಎಂದು ತಿಳಿಸಿದ್ದಾರೆ. ದರೋಡೆ ಪ್ರಕರಣವನ್ನು ಪತ್ತೆ ಮಾಡಿದ ಮೈಸೂರು ಪೊಲೀಸರಿಗೆ ಗೃಹ ಸಚಿವರು 5 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದಾರೆ..

ಡಿಜಿ ಪ್ರವೀಣ್ ಸೂದ್
ಡಿಜಿ ಪ್ರವೀಣ್ ಸೂದ್
author img

By

Published : Aug 27, 2021, 6:32 PM IST

ಮೈಸೂರು : ಚಿನ್ನಾಭರಣ ಅಂಗಡಿಯ ದರೋಡೆ ಪ್ರಕರಣದಲ್ಲಿ ಆರು ಜನರನ್ನು ಬಂಧಿಸಲಾಗಿದೆ. ಇನ್ನೂ ಇಬ್ಬರ ಬಂಧನ ಆಗಬೇಕಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.

ಇಂದು ಗೃಹ ಸಚಿವರ ಜೊತೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಚಿನ್ನಾಭರಣ ದರೋಡೆ ಪ್ರಕರಣದಲ್ಲಿ ಒಟ್ಟು 8 ಜನ ಭಾಗಿಯಾಗಿದ್ದಾರೆ. ಅದರಲ್ಲಿ 6 ಜನರನ್ನು ಪಶ್ಚಿಮ ಬಂಗಾಳ, ಮುಂಬೈ, ರಾಜಸ್ಥಾನ ಹಾಗೂ ಜಮ್ಮು-ಕಾಶ್ಮೀರದಲ್ಲಿ ಬಂಧಿಸಲಾಗಿದೆ ಎಂದಿದ್ದಾರೆ.

ಈ ಪ್ರಕರಣದಲ್ಲಿ ಪ್ಲಾನ್ ಮಾಡಿದವರು ಸಿಕ್ಕಿದ್ದಾರೆ. ಈ ಪ್ಲಾನ್ ಮಾಡಿದವರು ಚಿನ್ನದ ಅಂಗಡಿ ಇಟ್ಟುಕೊಂಡಿದ್ದಾರೆ. ಒಬ್ಬ ಮೈಸೂರಿನವ, ಮತ್ತೊಬ್ಬ ಬೆಂಗಳೂರಿನವನನ್ನು ಅರೆಸ್ಟ್ ಮಾಡಲಾಗಿದೆ. ಒಟ್ಟು ದರೋಡೆ ಪ್ರಕರಣದಲ್ಲಿ 6 ಮಂದಿಯನ್ನು ಈವರೆಗೆ ಅರೆಸ್ಟ್ ಮಾಡಲಾಗಿದ್ದು, ಇಬ್ಬರನ್ನು ಬಂಧಿಸಬೇಕಾಗಿದೆ ಎಂದು ಹೇಳಿದ್ದಾರೆ.

ಓದಿ: ಮೈಸೂರು: ದರೋಡೆಕೋರರು ಹಾರಿಸಿದ ಗುಂಡಿಗೆ ಯುವಕ ಬಲಿ

ಡಕಾಯತಿಯಲ್ಲಿ ದೋಚಿದ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೆ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಬೇಕಾಗಿದೆ.‌‌ ಮೈಸೂರಿನಿಂದ 5 ಟೀಂ ದೇಶದ ಬೇರೆ ಬೇರೆ ಭಾಗಕ್ಕೆ ಹೋಗಿದ್ದವು. ಅವರು ಬಂಧಿತರನ್ನು ಸ್ಥಳೀಯ ಕೋರ್ಟ್​ಗಳಿಗೆ ಹಾಜರುಪಡಿಸಿ ಮೈಸೂರಿಗೆ ಕರೆ ತಂದ ನಂತರ, ಮತ್ತಷ್ಟು ಮಾಹಿತಿ ನೀಡುತ್ತೇವೆ ಎಂದು ತಿಳಿಸಿದ್ದಾರೆ. ದರೋಡೆ ಪ್ರಕರಣವನ್ನು ಪತ್ತೆ ಮಾಡಿದ ಮೈಸೂರು ಪೊಲೀಸರಿಗೆ ಗೃಹ ಸಚಿವರು 5 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದಾರೆ.

ಗ್ಯಾಂಗ್ ರೇಪ್ ಪ್ರಕರಣ ತುಂಬಾ ಸೂಕ್ಷ್ಮ : ಮೈಸೂರಿನ ಲಲಿತಾದ್ರಿಪುರದಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ತುಂಬಾ ಸೂಕ್ಷ್ಮವಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ತನಿಖೆ ಆರಂಭಿಸಿದೆ. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದು, ಸಂತ್ರಸ್ತೆ ಚೇತರಿಸಿಕೊಂಡ ಮೇಲೆ ಹೇಳಿಕೆ ಪಡೆಯುತ್ತೇವೆ.‌ ಇಲಾಖೆ ಈ ಪ್ರಕರಣವನ್ನು ತುಂಬಾ ಗಂಭೀರವಾಗಿ ಪರಿಗಣಿಸಿದೆ. ಗ್ಯಾಂಗ್ ರೇಪ್ ಪ್ರಕರಣದ ಸುಳಿವು ಸಿಕ್ಕರು ಈ ಬಗ್ಗೆ ಈಗ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಓದಿ: ಮೈಸೂರು: ಸ್ನೇಹಿತನ ಜೊತೆ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದ ವಿದ್ಯಾರ್ಥಿನಿ ಮೇಲೆ Gangrape

ETV Bharat Logo

Copyright © 2025 Ushodaya Enterprises Pvt. Ltd., All Rights Reserved.