ಮೈಸೂರು: ಸಿಡಿ ಪ್ರಕರಣದಲ್ಲಿ ಸ್ಕ್ರಿಪ್ಟ್ ರೈಟರ್, ಫೈನಾನ್ಸರ್ ಹಾಗೂ ಪ್ರೊಡ್ಯೂಸರ್ ಯಾರು ಮತ್ತು ಲೋಕೆಶನ್ ಯಾವುದು ಎಂಬುವುದು ಎಸ್ಐಟಿ ತನಿಖೆಯಲ್ಲಿ ಗೊತ್ತಾಗಲಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣವನ್ನು ಎಸ್ಐಟಿ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿ ಸ್ಕ್ರಿಪ್ಟ್ ರೈಟರ್, ಫೈನಾನ್ಸರ್ ಹಾಗೂ ಪ್ರೊಡ್ಯೂಸರ್ ಯಾರು ಮತ್ತು ಲೋಕೆಶನ್ ಯಾವುದು ಎಂಬುವುದು ತನಿಖೆಯಿಂದ ಗೊತ್ತಾಗಲಿದೆ. ಸಿಡಿ ಹಿಂದಿನ ಮಹಾನ್ ನಾಯಕ ಯಾರು ಎಂಬ ವಿಚಾರವೂ ಬೇಗನೇ ಬಹಿರಂಗ ಆಗಲಿದೆ ಎಂದರು.
ಓದಿ: ಸಿಡಿ ವಿವಾದ: ರಮೇಶ್ ಜಾರಕಿಹೊಳಿ ವಿರುದ್ಧ ಸಂಕೇತ್ ಏಣಗಿ ಟ್ವೀಟ್ ವಾರ್
ಸಂತ್ರಸ್ತ ಯುವತಿ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಹೇಳುತ್ತಿರುವುದು ಅಚ್ಚರಿ ಏನು ಇಲ್ಲ. ಏಕೆಂದರೆ ಸಾಮಾಜಿಕ ಜಾಲತಾಣದಲ್ಲಿ ಅವರ ಹೆಸರು ಹಾಗೂ ಅವರ ಭಾವಚಿತ್ರ ಹಿಂದೆಯೇ ಬರುತ್ತಿತ್ತು. ಸಂತ್ರಸ್ತ ಯುವತಿ ಪೊಲೀಸರ ರಕ್ಷಣೆ ಕೇಳುತ್ತಿದ್ದು, ಇದಕ್ಕೆ ಗೃಹ ಸಚಿವರೇ ರಕ್ಷಣೆ ಕೊಡಲು ಸಿದ್ಧ ಎಂದು ಹೇಳಿದ್ದಾರೆ ಎಂದರು.