ಮೈಸೂರು: ಪಾರ್ಸಲ್ ಬಂದಿದೆ ಎಂದು ಮನೆಗೆ ನುಗ್ಗಿ ಮಹಿಳೆಯನ್ನು ಕಟ್ಟಿಹಾಕಿ ಚಿನ್ನಾಭರಣ ದೋಚಿರುವ ಘಟನೆ ನಂಜನಗೂಡು ಪಟ್ಟಣದ ರಾಮಸ್ವಾಮಿ ಲೇಔಲ್ನಲ್ಲಿ ನಡೆದಿದೆ. ಲೇಔಟ್ನ ಒಂದನೇ ಬ್ಲಾಕ್ನಲ್ಲಿ ವಾಸವಿರುವ ಶಿಕ್ಷಕ ಶಂಭುಸ್ವಾಮಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಪಾರ್ಸೆಲ್ ಬಂದಿದೆ ಎಂದು ಮನೆಗೆ ನುಗ್ಗಿ ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಪಾರ್ಸೆಲ್ನಲ್ಲಿ ವಸ್ತು ಬಂದಿದೆ ಎಂದು ಬಂದ ಮೂವರು ಸರಗಳ್ಳರು ಮನೆಯಲ್ಲಿದ್ದ ದ್ರಾಕ್ಷಾಯಿಣಿ ಎಂಬ ಮಹಿಳೆಗೆ ಚಾಕುವಿನಿಂದ ಬೆದರಿಸಿ ಕೈಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಾಕಿ ಮನೆಯಲ್ಲಿದ್ದ 175 ಗ್ರಾಮ್ ಮಾಂಗಲ್ಯ ಸರ, ಬ್ರೆಸ್ಲೆಟ್, ಉಂಗುರ, ಕೈಬಳೆ ಸೇರಿದಂತೆ ಇತರ ಚಿನ್ನಾಭರಣವನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ.
ಮನೆಗೆ ಬಂದ ಮೂವರು ಸರಗಳ್ಳರು ಕನ್ನಡ, ತಮಿಳು, ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ನಂಜನಗೂಡು ಪೊಲೀಸರು ಆಗಮಿಸಿ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಸರಗಳ್ಳರ ಬಂಧನಕ್ಕೆ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಆಯತಪ್ಪಿ ಬೈಕ್ನಿಂದ ಬಿದ್ದ ಸವಾರ, ರಸ್ತೆಯಲ್ಲಿ ಚೆಲ್ಲಿದ ಮಾಂಸ: ಗೋಮಾಂಸ ಕಂಡು ಬೈಕ್ಗೆ ಬೆಂಕಿ ಇಟ್ಟ ಸ್ಥಳೀಯರು