ಮೈಸೂರು : ನಿವೃತ್ತ ಅಡ್ವೋಕೆಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಅವರ ಪುತ್ರ ಸರಳವಾಗಿ ಮಂತ್ರ ಮಾಂಗಲ್ಯ ವಿವಾಹವಾಗುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ನಗರದ ದಟ್ಟಗಳ್ಳಿಯಲ್ಲಿರುವ ಸಾ.ರಾ.ಕನ್ವೆನ್ಷನ್ ಹಾಲ್‌ನಲ್ಲಿ ಮದುವೆ ನಿಶ್ಚಯವಾಗಿತ್ತು. ಆದರೆ ಕೊರೊನಾ ವೈರಸ್ ಭೀತಿ ಹಿನ್ನೆಲೆ, ಮದುವೆ ಮಂಟಪದಲ್ಲಿ ಜನ ಹೆಚ್ಚಾಗಿ ಸೋಂಕು ಹರಡಲು ಕಾರಣವಾಗಬಹುದು ಎಂದು ಮುನ್ನೆಚ್ಚರಿಕೆ ಕ್ರಮವಾಗಿ ಮನೆಯಲ್ಲಿಯೇ ಕೆಲವೇ ಮಂದಿ ಸಂಬಂಧಿಗಳ ಸಮ್ಮುಖದಲ್ಲಿ ವಿವಾಹ ನೆರವೇರಿಸಲಾಗಿದೆ.
ಒಕ್ಕಲಿಗ ಸಮುದಾಯದ ನಿವೃತ್ತ ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಅವರ ಪುತ್ರ ಆರ್.ಅಭಿ ಮಂಡೇಲ ಹಾಗೂ ಲಿಂಗಾಯತ ಸಮುದಾಯದ ಬಿ.ರಮೇಶ್ ಎಂಬುವವರ ಪುತ್ರಿ ಆರ್.ನವ್ಯ ಮಂತ್ರ ಮಾಂಗಲ್ಯ ಪರಿಕಲ್ಪನೆಯಲ್ಲಿ ಪ್ರಮಾಣ ಸ್ವೀಕರಿಸಿದರು.
ಸಿಆರ್‌ಪಿಎಫ್ ನಿವೃತ್ತ ಐಜಿಪಿ ಕೆ. ಅರ್ಕೇಶ್ ಕುವೆಂಪು ಅವರ ʻಮಂತ್ರ ಮಾಂಗಲ್ಯʼ ಬೋಧಿಸಿದರು. ವಧು ವರರು ಅದನ್ನು ಪುನರುಚ್ಚರಿಸಿ ಹಾರ ಬದಲಿಸಿಕೊಂಡ ನಂತರ, ಮಾಂಗಲ್ಯ ಧಾರಣೆ ನಡೆಯಿತು.