ಮೈಸೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತಿಗೆ ಅವರ ಪಕ್ಷದ ಹೈಕಮಾಂಡ್ ಬೆಲೆ ಕೊಡ್ತಿಲ್ಲ. ಬಿಎಸ್ವೈ ಕೈಯನ್ನು ಆ ಪಕ್ಷದ ನಾಯಕರು ಕಟ್ಟಿಹಾಕಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಹೆಚ್.ಡಿ. ಕೋಟೆ ತಾಲೂಕಿನ ಮೊತ್ತ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಿಸಲು ಇನ್ನೂ ಆರು ಇಲಾಖೆಗಳು ಬಾಕಿ ಉಳಿದಿವೆ. ಅವರು ಅನುಮತಿಗಾಗಿ ದೆಹಲಿಗೆ ಹೋಗಿದ್ದರು. ಆದರೆ ಹೈಕಮಾಂಡ್ ಅವರಿಗೆ ಅನುಮತಿಯನ್ನ ನೀಡಿಲ್ಲ. ಯಡಿಯೂರಪ್ಪ ಅವರಿಗೆ ಸ್ವಾತಂತ್ರ್ಯ ಇಲ್ಲವೆಂದು ಮರುಕ ವ್ಯಕ್ತಪಡಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಸಂಪುಟ ಪುನರಾಚನೆ ಮಾಡುವಾಗ ಅಷ್ಟೊಂದು ಬಾರಿ ಹೈಕಮಾಂಡ್ ಕೇಳಿಲ್ಲ. ಆದರೆ ಯಡಿಯೂರಪ್ಪ ಸ್ಥಿತಿ ನೋಡಿ ಸಾರಿ ಅನ್ನಿಸುತ್ತಿದೆ ಎಂದರು. ಇಂದು ಸಂಪುಟ ವಿಸ್ತರಣೆಯಾಗಿರುವುದು ಖುಷಿಯಾಗಿಲ್ಲ. ಆದರೆ ಜನರಿಂದ ಆಯ್ಕೆಯಾಗಿದ್ದಾರೆ. ಒಳ್ಳೆಯ ಕೆಲಸ ಮಾಡಲಿ ಎಂದು ಆಶಿಸುವುದಾಗಿ ಸಿದ್ದರಾಮಯ್ಯ ಹೇಳಿದ್ರು.