ಮೈಸೂರು : ಮೂರು ದಿನಗಳ ಕಾಲ ತವರು ಜಿಲ್ಲೆಯ ಪ್ರವಾಸದಲ್ಲಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಬೆಳಗ್ಗೆ ಸ್ನೇಹಿತರ ಜೊತೆ ವಾಯು ವಿಹಾರ ನಡೆಸಿ , ತಮ್ಮ ಮನೆಯಲ್ಲಿ ಪಾಲಿಕೆ ಸದಸ್ಯರ ಸಭೆ ನಡೆಸಿದರು.
ಫೆ. 24 ರಂದು ಮೈಸೂರು ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ನಗರ ಪಾಲಿಕೆ ಸದಸ್ಯರು ಭೇಟಿ ಮಾಡಿ ಚರ್ಚಿಸಿದರು. ಪಾಲಿಕೆಯ ಕಾಂಗ್ರೆಸ್ ಪಕ್ಷದ ಸದಸ್ಯರ ಜೊತೆ ಸಿದ್ದರಾಮಯ್ಯ ಅವರು ಚರ್ಚೆ ನಡೆಸಿದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರೆಸುವ ಬಗ್ಗೆ ಪಾಲಿಕೆ ಸದಸ್ಯರ ಸಿದ್ದರಾಮಯ್ಯರಿಗೆ ಮನವಿ ಮಾಡಿದ್ದಾರೆ. ಈ ಹಿಂದೆ ಯಾರ ಜೊತೆಯೂ ಮೈತ್ರಿ ಇಲ್ಲ ಎಂದು ಸಿದ್ದರಾಮಯ್ಯನವರು ಹೇಳಿದ್ದರು. ಆದರೆ, ಮೈತ್ರಿ ಮುಂದುವರೆಸಲು ಶಾಸಕ ತನ್ವೀರ್ ಸೇಠ್ ಸೇರಿ ಸ್ಥಳೀಯ ಮುಖಂಡರು ಒಲವು ತೋರಿದ್ದಾರೆ.
ಈ ವೇಳೆ ಮಾಜಿ ಸಚಿವರಾದ ಜಮೀರ್ ಅಹಮ್ಮದ್, ಶಾಸಕರಾದ ತನ್ವೀರ್ ಸೇಠ್, ಧರ್ಮಸೇನ್, ಪಕ್ಷದ ಮೈಸೂರು ಘಟಕದ ಅಧ್ಯಕ್ಷ ಮೂರ್ತಿ ಮತ್ತಿತರರ ಉಪಸ್ಥಿತಿ ಇದ್ದರು.