ETV Bharat / state

ಮೈಸೂರು: ಮೊಮ್ಮಗನ ಜೊತೆ ಬಂದ ಸಿದ್ದರಾಮಯ್ಯ - karnataka politics

ದಿವಂಗತ ರಾಕೇಶ್ ಸಿದ್ದರಾಮಯ್ಯ ಅವರ ಮಗ ಧವನ್ ರಾಕೇಶ್, ತಾತ ಸಿದ್ದರಾಮಯ್ಯ ಜೊತೆ ಹೆಲಿಕಾಪ್ಟರ್​​ನಲ್ಲಿ ಜೊತೆಗೆ ಮೈಸೂರಿಗೆ ಬಂದಿದ್ದರು.

siddaramaiah-talks-about-v-sommanna-in-mysuru
ಮೈಸೂರು: ಮೊಮ್ಮಗನ ಜೊತೆ ಬಂದ ಸಿದ್ದರಾಮಯ್ಯ
author img

By

Published : Apr 18, 2023, 3:17 PM IST

Updated : Apr 18, 2023, 4:03 PM IST

ಸೋಮಣ್ಣನನ್ನು ಹರಕೆ ಕುರಿ ಮಾಡಲು ಬಿ.ಎಲ್‌.ಸಂತೋಷ್‌ ವರುಣಗೆ ಕಳಿಸಿದ್ದಾರೆ: ಸಿದ್ದರಾಮಯ್ಯ

ಮೈಸೂರು: ಬಿ.ಎಲ್​.ಸಂತೋಷ್ ಅವರು ಸೋಮಣ್ಣರನ್ನು ವರುಣದಲ್ಲಿ ನಿಲ್ಲಿಸಿ ಹರಕೆಯ ಕುರಿ ಮಾಡಿದ್ದಾರೆ. ನಾನು ವರುಣದಲ್ಲಿ ಗೆಲ್ಲುವುದು ಖಚಿತ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಮೈಸೂರಿನ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೆ ಸ್ವಲ್ಪ ಸೋಂಕು ಇತ್ತು. ಆದ್ದರಿಂದ ಜ್ವರ ಬಂದಿದೆ. ಎರಡು ಮೂರು ದಿನಗಳಲ್ಲಿ ಸರಿಯಾಗುತ್ತದೆ. ನಾನು ಎರಡು ಬಾರಿ ವರುಣದಿಂದ ಶಾಸಕನಾಗಿದ್ದೆ. ನನ್ನ ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡೇ ಮಾಡುತ್ತಾರೆ. ಆದರೆ ಬಿಜೆಪಿ ಅಭ್ಯರ್ಥಿ ಹೊರಗಿನವರು. ಅವರಿಗೆ ಜನ ಬೆಂಬಲ ಕೊಡುವುದಿಲ್ಲ ಎಂದರು.

ಬಿ.ಎಲ್.ಸಂತೋಷ್ ಕರ್ನಾಟಕದಲ್ಲಿ ಎಲ್ಲರ ಟಿಕೆಟ್​​ ತಪ್ಪಿಸುತ್ತಿದ್ದಾರೆ ಎಂಬ ಜಗದೀಶ್ ಶೆಟ್ಟರ್ ಮಾತು ಸರಿ ಇದೆ. ಕರ್ನಾಟಕದಲ್ಲಿ ಬಿಜೆಪಿ ಇವರ ಕಪಿಮುಷ್ಠಿಯಲ್ಲಿದೆ. ನನ್ನ ವಿರುದ್ಧ ಸೋಮಣ್ಣ ಸ್ಪರ್ಧೆ ಮಾಡಲು ಸಿದ್ದರಿರಲಿಲ್ಲ. ಬಿ.ಎಲ್.ಸಂತೋಷ್ ಅವರು ಸೋಮಣ್ಣರನ್ನು ಕರೆದುಕೊಂಡು ಬಂದು ನನ್ನ ವಿರುದ್ಧ ಸ್ಪರ್ಧೆ ಮಾಡಿಸಿ ಹರಿಕೆಯ ಕುರಿ ಮಾಡಿದ್ದಾರೆ. ಸೋಮಣ್ಣರ ಮಗನಿಗೆ ಗೊವಿಂದರಾಜನಗರದಿಂದ ಟಿಕೆಟ್​​​ ತಪ್ಪಿಸಿದ್ದಾರೆ ಎಂದು ಹೇಳಿದರು.

ರಾಮದಾಸ್ ಕಾಂಗ್ರೆಸ್​​ಗೆ ಬಂದರೆ ಸ್ವಾಗತ: ಮೈಸೂರಿನ ಕೆ.ಆರ್.ಕ್ಷೇತ್ರದ ಶಾಸಕ ರಾಮದಾಸ್ ಮೇಲೆ ಯಾವುದೇ ಆರೋಪ ಇರಲಿಲ್ಲ. ಅವರಿಗೂ ಟಿಕೆಟ್​​​ ನೀಡಿಲ್ಲ. ರಾಮದಾಸ್ ನಮ್ಮ ಪಕ್ಷದ ಸಿದ್ದಾಂತ ಒಪ್ಪಿ ಬಂದರೆ ಸ್ವಾಗತ ಎಂದು ಹೇಳಿದ ಸಿದ್ದರಾಮಯ್ಯ, ಮೈಸೂರಿನ ಮನೆಯಲ್ಲಿ ಸ್ಥಳೀಯ ಮುಖಂಡರ ಸಭೆ ನಡೆಸಿ ನಂತರ ನಾಳೆ ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.

ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ 60 ಸ್ಥಾನ ದಾಟುವುದಿಲ್ಲ. ನೂರಕ್ಕೆ ನೂರರಷ್ಟು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅದರಲ್ಲಿ ಬಸವರಾಜ ಬೊಮ್ಮಾಯಿ ನಂ.1 ಸುಳ್ಳುಗಾರ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಅಧಿಕಾರಕ್ಕೆ ಬಂದರೆ ವರುಣ ಕ್ಷೇತ್ರವನ್ನು ತಾಲೂಕು ಕೇಂದ್ರ ಮಾಡುತ್ತೇವೆ ಎಂದು ಸುಳ್ಳು ಭರವಸೆ ನೀಡುವ ಬಸವರಾಜ ಬೊಮ್ಮಾಯಿಗೆ ವರುಣ ಕ್ಷೇತ್ರದ ಜನರ ಬಗ್ಗೆ ಗೊತ್ತಿಲ್ಲ ಎಂದರು.

ಮೊಮ್ಮಗನ ಜೊತೆ ಬಂದ ಸಿದ್ದರಾಮಯ್ಯ

ಮೊಮ್ಮಗನ ಜೊತೆ ಬಂದ ಸಿದ್ದರಾಮಯ್ಯ: ದಿವಂಗತ ರಾಕೇಶ್ ಸಿದ್ದರಾಮಯ್ಯ ಅವರ 17 ವರ್ಷದ ಮಗ, ತಾತ ಸಿದ್ದರಾಮಯ್ಯ ಜೊತೆ ಹೆಲಿಕಾಪ್ಟರ್​​ನಲ್ಲಿ ಜೊತೆಗೆ ಬಂದಿದ್ದರು. ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಆತನ ಹೆಸರನ್ನೂ ಸಹ ಹೇಳದೇ, ಅವನಿಗಿನ್ನೂ 17 ವರ್ಷ. ನಾಳೆ ನಾನು ನಾಮಪತ್ರ ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿಯಲು ಬಂದಿದ್ದಾನೆ ಎಂದು ಮೊಮ್ಮಗ ಧವನ್ ರಾಕೇಶ್ ಬಗ್ಗೆ ಹೇಳಿದರು.

ಇದನ್ನೂ ಓದಿ: ಶೆಟ್ಟರ್ ನನ್ನ ಗುರುಗಳು, ನಾನು ಗುರುವಿನ ವಿರುದ್ಧವೇ ಸೆಡ್ಡು ಹೊಡೆದಿದ್ದೇನೆ: ಮಹೇಶ್​ ಟೆಂಗಿನಕಾಯಿ

Last Updated : Apr 18, 2023, 4:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.