ಮೈಸೂರು: ಇದು ನನ್ನ ಮನೆ ಅಲ್ಲ, ಸರ್ಕಾರಿ ಬಂಗಲೆ. ನಾನು ಸಿಎಂ ಆಗಿದ್ದಾಗ ಅಲ್ಲಿದ್ದೆ. ಈಗ ಅದನ್ನು ಕೇಳಿದರೆ ನಾನು ಬಿಟ್ಟುಕೊಡಲೇ ಬೇಕು. ಆದರೆ ಬೋಡ್೯ ತೆಗೆದು ಹಾಕಿದ್ದು ನನ್ನ ಗಮನಕ್ಕೆ ಬಂದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕಾವೇರಿ ಬಂಗಲೆಯಲ್ಲಿ ವಾಸ್ತವ್ಯವಿದ್ದ ಸಿದ್ದರಾಮಯ್ಯ ಅವರ ಹೆಸರಿನ ಫಲಕ ತೆಗೆದು ಹಾಕಿರುವುದಕ್ಕೆ ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನದಿಂದ ಹೋದ ನಂತರ ಜಾರ್ಜ್ ಅವರಿಗೆ ನೀಡಲಾಗಿತ್ತು. ನಂತರ ನಾನು ಅಲ್ಲಿರುತ್ತೇನೆ ಎಂದು ಕೇಳಿದಾಗ ಅವರು ಒಪ್ಪಿಗೆ ಸೂಚಿಸಿದ್ದರು. ಹಾಗಾಗಿ ನಾನು ಆ ಮನೆಯಲ್ಲಿ ವಾಸವಾಗಿದ್ದೆ. ಈಗ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಬಂದ ಮೇಲೆ ಆ ಮನೆಯನ್ನೇ ಕೊಡುವಂತೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ರು.