ಮೈಸೂರು: ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಿಂಚಿನ ಸಂಚಾರ ಮಾಡಿದ್ದಾರೆ. ಶುಕ್ರವಾರ ಶನಿವಾರ ಬೆಳಗ್ಗೆ ಸಂಜೆ ವರುಣಾ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು. ಆನಂತರ ಸಿದ್ದರಾಮನ ಹುಂಡಿಯಲ್ಲಿರುವ ತಮ್ಮ ಮನೆಯಲ್ಲಿ ಸ್ನೇಹಿತರು ಹಾಗೂ ಪಕ್ಷದ ಮುಖಂಡರೊಂದಿಗೆ ರಾಗಿ ಮುದ್ದೆ ಊಟ ಸವಿದರು.
ಸಿದ್ದರಾಮನಹುಂಡಿಯಲ್ಲಿ ನೂತನ ಹಾಲಿನ ಶಿಥಿಲೀಕರಣ ಘಟಕ, ಮರಳೂರು - ಗೊದ್ದನಪುರ ನೂತನ ಸೇತುವೆ ಉದ್ಘಾಟನೆ, ತಿ.ನರಸೀಪುರ ತಾಲ್ಲೂಕಿನ ಇಂಡುವಾಳು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟನೆ ಮಾಡಿದರು. ಸಿದ್ದರಾಮನ ಹುಂಡಿಯಲ್ಲಿರುವ ಸಿದ್ದರಾಮೇಶ್ವರ ದೇವರಿಗೆ ಸಿದ್ದರಾಮಯ್ಯ ವಿಶೇಷ ಪೂಜೆ ಸಲ್ಲಿಸಿದರು.
ವರುಣಾದಲ್ಲಿ ಸಿದ್ದರಾಮಯ್ಯಗೆ ಮೊಳಗಿದ ಜಯಕಾರ: ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ರೌಂಡ್ಸ್ ಹಾಕುತ್ತಿದ್ದಂತೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಜಯಕಾರ ಕೂಗಿದರು. ವಿಧಾನಸಭಾ ಚುನಾವಣೆ ವರುಣಾದಿಂದಲ್ಲೇ ಸ್ಪರ್ಧೆ ಮಾಡಬೇಕು ಎಂಬ ಧ್ವನಿ ಮೊಳಗಿದೆ.
ಈ ವೇಳೆ, ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿದ್ದರಾಮಯ್ಯ, ವರುಣಾ ಕ್ಷೇತ್ರದ ಸ್ಪರ್ಧೆಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಪುತ್ರ ಹಾಗೂ ಶಾಸಕರಾಗಿರುವ ಡಾ.ಯತೀಂದ್ರ, ತಮ್ಮ ಕ್ಷೇತ್ರ ಕೆಲಸ ಮಾಡಿರುವ ಜನರೇ ನೋಡಿದ್ದಾರೆ. ನಾನು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎನ್ನುವುದನ್ನ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದರು.
ಇದನ್ನೂ ಓದಿ: ಪುತ್ರನ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸಂಚಾರ: ಹೀಗಿದೆ ರಾಜಕೀಯ ಲೆಕ್ಕಾಚಾರ..