ETV Bharat / state

ಇಂಧನ ಬೆಲೆ ಗಗನಮುಖಿ.. 25 ರೂ. ಗೆ ಪೆಟ್ರೋಲ್​ ಹಾಕಿ ಸಿದ್ದರಾಮಯ್ಯ ವಿನೂತನ ಪ್ರತಿಭಟನೆ - opposition leader Siddaramaiah

ಮೈಸೂರಿನ ಚಿಕ್ಕಮ್ಮನಿಕೇತನ ಕಲ್ಯಾಣ ಮಂಟಪದ ಬಳಿಯ ಪೆಟ್ರೋಲ್ ಬಂಕ್​​​ನಲ್ಲಿ, 25 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ಹಾಕುವ ಮೂಲಕ, ಸಿದ್ದರಾಮಯ್ಯ ವಿನೂತನವಾಗಿ ಪ್ರತಿಭಟನೆ ನಡೆಸಿದರು.

Siddaramaiah condemns petrol price hike
ಪೆಟ್ರೋಲ್ ಬೆಲೆ ಏರಿಕೆಗೆ ಸಿದ್ದರಾಮಯ್ಯ ಖಂಡನೆ
author img

By

Published : Jun 19, 2020, 5:31 PM IST

ಮೈಸೂರು: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ, ಪ್ರತಿಪಕ್ಷ ಪಕ್ಷದ ನಾಯಕ ಸಿದ್ದರಾಮಯ್ಯ 25 ರೂಪಾಯಿಗೆ ಸ್ವತಃ ಪೆಟ್ರೋಲ್ ಹಾಕುವ ಮೂಲಕ ವಿನೂತನ‌ ಪ್ರತಿಭಟನೆ ನಡೆಸಿದರು.

ನಗರದ ಚಿಕ್ಕಮ್ಮನಿಕೇತನ ಕಲ್ಯಾಣ ಮಂಟಪದ ಬಳಿಯಿರುವ ಪೆಟ್ರೋಲ್ ಬಂಕ್​​​ನಲ್ಲಿ, 25 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ಹಾಕುವ ಮೂಲಕ ಸ್ವತಃ ಸಿದ್ದರಾಮಯ್ಯ ಪಂಪ್ ಹಿಡಿದು ಪೆಟ್ರೋಲ್ ಹಾಕಿದರು.

ಪೆಟ್ರೋಲ್ ಬೆಲೆ ಏರಿಕೆಗೆ ಸಿದ್ದರಾಮಯ್ಯ ಖಂಡನೆ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ, ಕೇಂದ್ರ ಸರ್ಕಾರ ಪ್ರತಿನಿತ್ಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ‌ ಮಾಡುತ್ತಿದೆ ಎಂದು ಆರೋಪಿಸಿದರು.

ಇದರಿಂದ ಬಡವರು, ರೈತರು, ವ್ಯಾಪಾರಸ್ಥರು ಹಾಗೂ ಜನ ಸಾಮಾನ್ಯರಿಗೆ ತೊಂದರೆಯಾಗಿದ್ದು, ಕೊರೊನಾದಂತಹ ಸಂಕಷ್ಟ ಸ್ಥಿತಿಯಲ್ಲಿ ಪ್ರತಿನಿತ್ಯ ಬೆಲೆ ಏರಿಕೆ ಮಾಡುವುದು ಸರಿಯಲ್ಲ. ಕೂಡಲೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕಸ್ಟಮ್​​​ ಇಳಿಸಬೇಕೆಂದು ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.