ETV Bharat / state

ಮಾಂಸದೂಟ ಮಾಡಿ ಸಿದ್ದರಾಮಯ್ಯ ಅಂಬಾರಿಗೆ ಪುಷ್ಪಾರ್ಚನೆ ಮಾಡಿದ್ದರು: ಮಾಜಿ ಮೇಯರ್ ರವಿ ಕುಮಾರ್

author img

By

Published : Aug 23, 2022, 9:33 AM IST

Updated : Aug 23, 2022, 10:21 AM IST

2017ರ ದಸರಾದಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರು ಮಾಂಸಹಾರ ಸೇವಿಸಿ ಅಂಬಾರಿಗೆ ಪುಷ್ಪಾರ್ಚನೆ ಮಾಡಿದ್ದರು ಎಂದು ಮಾಜಿ ಮೇಯರ್ ರವಿ ಕುಮಾರ್ ಹೇಳಿಕೆ ನೀಡಿದ್ದಾರೆ.

Ex mayor Ravi Kumar
ಮಾಜಿ ಮೇಯರ್ ರವಿಕುಮಾರ್

ಮೈಸೂರು: ಮಾಂಸದೂಟ ಮಾಡಿಯೇ ಸಿದ್ದರಾಮಯ್ಯ ದಸರಾ ಅಂಬಾರಿಗೆ ಪುಷ್ಪಾರ್ಚನೆ ಮಾಡಿದ್ದರು. ಈ ಕಾರಣಕ್ಕೆ ಅವರಿಗೆ ಮತ್ತೆ ಅಂಬಾರಿಗೆ ಪುಷ್ಟಾರ್ಚನೆ ಮಾಡುವ ಅವಕಾಶ ಸಿಗಲಿಲ್ಲ ಎಂದು ಇತ್ತೀಚೆಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಸ್ಫೋಟಕ ಆರೋಪ ಮಾಡಿದ್ದರು. ಇದೀಗ ಪ್ರತಾಪ್ ಸಿಂಹ ಹೇಳಿಕೆಗೆ ಪುಷ್ಠಿ ನೀಡುವಂತೆ ಜೆಡಿಎಸ್ ಮುಖಂಡ, ಮಾಜಿ ಮೇಯರ್ ರವಿ ಕುಮಾರ್ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, 2017ರ ದಸರಾ ಲಲಿತ್ ಮಹಲ್ ಹೋಟೆಲ್​​ನಲ್ಲಿ ಮಾಂಸಹಾರ, ಸಸ್ಯಹಾರದ ಊಟದ ವ್ಯವಸ್ಥೆ ಇತ್ತು. ಸಿದ್ದರಾಮಯ್ಯ ಮಾಂಸದೂಟ ಮಾಡಿದ್ದರು. ನಾನು ಊಟ ಮಾಡಲಿಲ್ಲ ಎಂದು ಹೇಳಿದ್ದಾರೆ.

ಮಾಜಿ ಮೇಯರ್ ರವಿ ಕುಮಾರ್ ಪ್ರತಿಕ್ರಿಯೆ

ದಸರಾ ಜಂಬೂ ಸವಾರಿ ಮೆರವಣಿಗೆಗೆ ಮುನ್ನ ಸಿಎಂ, ಉಸ್ತುವಾರಿ ಸಚಿವರು ಹಾಗೂ ಸಚಿವರಿಗೆ ಊಟ ಮಾಡಿಸುವುದು ಸಂಪ್ರದಾಯ. ಅಂದು ಸಿದ್ದರಾಮಯ್ಯ ನಾಟಿ ಕೋಳಿ ಊಟ ಮಾಡಿದರು. ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ನಾನು ಅಂದು ಊಟ ಮಾಡದೇ ಉಪವಾಸ ಇದ್ದೆ‌. ಪ್ರತಾಪ್​​ ಸಿಂಹ ಅವರು ಸಹ ಉಪವಾಸ ಇದ್ದರು ಎಂದು ತಿಳಿಸಿದರು.

ಇದನ್ನೂ ಓದಿ: ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದರೆ ತಪ್ಪೇನು : ಸಿದ್ದರಾಮಯ್ಯ ಪ್ರಶ್ನೆ

Last Updated : Aug 23, 2022, 10:21 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.