ETV Bharat / state

ಪ್ರಧಾನಿ ಮೋದಿ ಅವರಿಗೆ ಆಡಳಿತದಲ್ಲಿ ಅನುಭವದ ಕೊರತೆ ಇದೆ: ಆರ್.ಧ್ರುವನಾರಾಯಣ

author img

By

Published : Sep 1, 2020, 3:30 PM IST

ಕೋವಿಡ್ ಬೇರೆ ದೇಶದಿಂದ ಬಂದಿದೆ. ದಕ್ಷಿಣ ಕೊರಿಯಾ, ಜಪಾನ್ ಅದನ್ನು ಹೇಗೆ ನಿರ್ವಹಣೆ ಮಾಡಿವೆ. ಆದರೆ, ನಮ್ಮ ದೇಶ ಪ್ರಪಂಚದಲ್ಲಿಯೇ ಮೂರನೇ ಸ್ಥಾನದಲ್ಲಿದೆ. ಮುಂದೊಂದು ದಿನ ಪ್ರಥಮ ಸ್ಥಾನಕ್ಕೆ ಬರಲಿದೆ. ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಅವರು ಜನ ಮರಳು ಮಾಡುವ ಮಾತನಾಡುತ್ತಾರೆ..

ಮಾಜಿ ಸಂಸದ ಆರ್.ಧ್ರುವನಾರಾಯಣ
ಮಾಜಿ ಸಂಸದ ಆರ್.ಧ್ರುವನಾರಾಯಣ

ಮೈಸೂರು : ದೇಶವನ್ನು ಮುನ್ನೆಡಸಲು ಪ್ರಧಾನಿ ಅವರಿಗೆ ಆಡಳಿತದಲ್ಲಿ ಅನುಭವದ ಕೊರತೆ ಇರುವುದರಿಂದ ದೇಶ ಈ ದುಸ್ಥಿತಿಗೆ ಬಂದಿದೆ ಎಂದು ಮಾಜಿ ಸಂಸದ ಆರ್‌ ಧ್ರುವನಾರಾಯಣ ಹೇಳಿದರು.

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಕಾಂಗ್ರೆಸ್ ಭವನದಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಿ ಅವರು, ಪ್ರಚೋದನಕಾರಿ ಭಾಷಣ ಮಾಡ್ತಾರೆ. ದೇಶದ ಜನರ ಭಾವನೆಗಳ ಮೇಲೆ ಮಾತು ಆಡುತ್ತಾರೆ. ಆದರೆ, ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಹರಿಹಾಯ್ದರು.

ಪ್ರಧಾನಿ ವಿರುದ್ಧ ಮಾಜಿ ಸಂಸದ ಆರ್.ಧ್ರುವನಾರಾಯಣ ವಾಗ್ದಾಳಿ

ಕೋವಿಡ್ ಬೇರೆ ದೇಶದಿಂದ ಬಂದಿದೆ. ದಕ್ಷಿಣ ಕೊರಿಯಾ, ಜಪಾನ್ ಅದನ್ನು ಹೇಗೆ ನಿರ್ವಹಣೆ ಮಾಡಿವೆ. ಆದರೆ, ನಮ್ಮ ದೇಶ ಪ್ರಪಂಚದಲ್ಲಿಯೇ ಮೂರನೇ ಸ್ಥಾನದಲ್ಲಿದೆ. ಮುಂದೊಂದು ದಿನ ಪ್ರಥಮ ಸ್ಥಾನಕ್ಕೆ ಬರಲಿದೆ. ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಅವರು ಜನ ಮರಳು ಮಾಡುವ ಮಾತನಾಡುತ್ತಾರೆ. ದೇಶದ ಪರಿಸ್ಥಿತಿ ಬಗ್ಗೆ ಮಾತನಾಡುವುದಿಲ್ಲವೆಂದರು.

ದೇಶದ ಆರ್ಥಿಕ ಪರಿಸ್ಥಿತಿ ತುಂಬ ಕುಸಿದಿದೆ. ನೋಟು ಅಮಾನ್ಯೀಕರಣ ಮಾಡಿದಾಗ ಮಾಜಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಹೇಳಿದರು, ದೇಶ ಆರ್ಥಿಕತೆಯಲ್ಲಿ ಕುಸಿಯಲಿದೆ ಎಂದು. ಆದರೆ, ಆಗ ಆರ್ಥಿಕ ತಜ್ಞರ ಮಾತು ಕೇಳಲಿಲ್ಲ. ಕೊರೊನಾ ಸಂದರ್ಭದಲ್ಲಿ ದೇಶ ಆರ್ಥಿಕತೆಯಲ್ಲಿ ನೆಲ ಕಚ್ಚಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.