ಮೈಸೂರು : ರೈತರ ಸಮಸ್ಯೆ ಶೋಭಾ ಅವರಿಗೆ ಹೇಗೆ ಗೊತ್ತು. ಅವರು ಬಿಜೆಪಿ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸಂಸದೆ ಶೋಭಾ ಕರಂದ್ಲಾಜೆ ಬಗ್ಗೆ ಟೀಕೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಶೋಭಾ ಕುಮಾರಸ್ವಾಮಿ ಆಲೂಗಡ್ಡೆಯಿಂದ ಶ್ರೀಮಂತರಾದವರು. ರೈತರ ಸಮಸ್ಯೆ ಬಗ್ಗೆ ನನಗಿಂತ ಅವರಿಗೆ ಹೆಚ್ಚು ಗೊತ್ತಿದೆ ಎನ್ನುವ ಮೂಲಕ ತಿರುಗೇಟು ನೀಡಿದರು.
ಇಂದು ಅರಮನೆಯ ಆವರಣದಲ್ಲಿರುವ ಮಾವುತರ ಮತ್ತು ಕಾವಾಡಿಗಳ ಕುಟುಂಬದವರಿಗೆ ಸ್ವತಃ ಉಪಹಾರ ಕೂಟ ಏರ್ಪಡಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೊತೆ ಮಾತನಾಡಿದ ಅವರು ಕಾವಾಡಿಗರು ಮತ್ತು ಮಾವುತರಿಗೆ ಸಿಗುವಂತಹ ಎಲ್ಲ ಭತ್ಯೆಗಳು ಸಿಗಲಿವೆ. ಈ ಬಗ್ಗೆ ಸರ್ಕಾರದ ಜೊತೆ ಮಾತನಾಡುತ್ತೇನೆ. ನೆರೆ ಸಂತ್ರಸ್ತರಿಗೆ ಮಧ್ಯಂತರ ಪರಿಹಾರ ಜೊತೆಗೆ ಅವರಿಗೆ ಶಾಶ್ವತ ಸೂರು ನಿರ್ಮಾಣ ಮಾಡಲಾಗುವುದು. ಅಲ್ಲದೆ ಕೇಂದ್ರದಿಂದ ಮತ್ತಷ್ಟು ಪರಿಹಾರ ಸಿಗಲಿದೆ ಎಂದರು.
ಬಳಿಕ ಹೆಚ್.ಡಿ.ಕುಮಾರಸ್ವಾಮಿ ಟೀಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಏನು ಅನ್ನುವುದನ್ನು ಕಳೆದ ಒಂದು ವರ್ಷದಲ್ಲಿ ತೋರಿಸಿದ್ದಾರೆ. ಹಾಗಾಗಿ ರೈತರ ಕಷ್ಟ ಏನು ಎನ್ನುವುದನ್ನು ನನಗೆ ಗೊತ್ತಿಲ್ಲ ಎಂದರೆ ಅವರಿಗೆ ಹೆಚ್ಚಾಗಿ ಗೊತ್ತಿರಬಹುದು. ಏಕೆಂದರೆ ಅವರು ಆಲೂಗೆಡ್ಡೆಯಿಂದ ಶ್ರೀಮಂತರಾದವರು, ನಾನು ಹೆಚ್ಚು ಕಮೆಂಟ್ ಮಾಡಲು ಹೋಗುವುದಿಲ್ಲ. ನಮ್ಮ ಊರನ್ನು ಒಮ್ಮೆ ಬಂದು ನೋಡಲಿ, ಕರಂದ್ಲಾಜೆ ಎಲ್ಲಿದೆ?, ಚರ್ವಾಕಾ ಎಲ್ಲಿದೆ ಎಂಬುದನ್ನು ನೋಡಿದಾಗ ಅವರಿಗೆ ತಿಳಿಯುತ್ತೆ.. ಯಾರು ರೈತರು ಯಾರು ರೈತರಲ್ಲ ಅನ್ನೋದು ತಿಳಿಯುತ್ತೆ ಎನ್ನುವ ಮೂಲಕ ತಿರುಗೇಟು ನೀಡಿದರು.