ಮೈಸೂರು: ನಿಜವಾಗಲೂ ಬ್ರಾಹ್ಮಣರ ವಿರೋಧಿ ಸಂಸದ ಪ್ರತಾಪ ಸಿಂಹ, ಆದರೆ ಬ್ರಾಹ್ಮಣರ ಪ್ರತಿಭಟನೆ ವೇಳೆ ಅಲ್ಲಿಗೆ ಹೋಗುವ ಮೂಲಕ ಪ್ರತಾಪ್ ಸಿಂಹ ಅವರು ಬೃಹನ್ನಳೆಯಂತೆ ನಡೆದುಕೊಂಡಿದ್ದಾರೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಹೇಳಿದರು.
ಮೈಸೂರಿನ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆ.ಆರ್. ಕ್ಷೇತ್ರ ಶಾಸಕ ರಾಮದಾಸ್ ಅವರು ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಅವರನ್ನು ರಾಜಕೀಯವಾಗಿ ಮುಗಿಸಲು, ಮೈಸೂರು ನಂಜನಗೂಡು ಬಸ್ ತಂಗುದಾಣ ವಿವಾದವನ್ನು ಪ್ರತಾಪ ಸಿಂಹ ಬೇಕಂತಲೇ ಮಾಡಿದ್ದು ಎಂದು ಆರೋಪಿಸಿದರು.
ಮೈಸೂರಿನಲ್ಲಿ ಶಾಸಕ ರಾಮದಾಸ್ ಅವರೇ ಬ್ರಾಹ್ಮಣರು ರಾಜಕೀಯವಾಗಿ ಮುಗಿಸಲು ಪ್ರತಾಪ್ ಸಿಂಹ ಅವರು ಸಂಚು ರೂಪಿಸಿದ್ದಾರೆ. ಅವರು ಅದಕ್ಕಾಗಿ ರಾಮದಾಸ್ ವಿರುದ್ಧ ಜನರನ್ನು ಎತ್ತಿ ಕಟ್ಟುತ್ತಿದ್ದಾರೆ. ಅದರಿಂದ ಪ್ರತಾಪ ಸಿಂಹ ಬ್ರಾಹ್ಮಣರ ವಿರೋಧಿ ಎಂದರು.
ಬ್ರಾಹ್ಮಣರ ವಿರೋಧಿಯಾಗಿರುವ ಪ್ರತಾಪ ಸಿಂಹ ಪ್ರತಿಭಟನೆಯಲ್ಲಿ ಭಾಗವಹಿಸಬಾರದಿತ್ತು. ಆದರೆ, ಗೋಮುಖ ವ್ಯಾಘ್ರನಂತೆ ಹೋಗಿದ್ದಾರೆ. ಅಲ್ಲಿ ರಾಮದಾಸ್ ಆಶೀರ್ವಾದ ಪಡೆಯಲು ಕಾಲಿಗೆ ನಮಸ್ಕಾರ ಮಾಡಿಲ್ಲ, ಬದಲಾಗಿ ಅವರ ಕಾಲು ಎಳೆಯಲು ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು. ಪ್ರಗತಿಪರ ಚಿಂತಕ ಪ.ಮಲ್ಲೇಶ್ ಅವರು ಬ್ರಾಹ್ಮಣರ ಬಗ್ಗೆ ಮಾತನಾಡಿ ಕ್ಷಮೆ ಕೇಳಿದ್ದಾರೆ. ಆದರೆ ಬ್ರಾಹ್ಮಣ ಸಮುದಾಯದವರು ಪ್ರತಿಭಟನೆ ಮಾಡಬಾರದಿತ್ತು ಎಂದರು.
ಇದನ್ನೂ ಓದಿ: ವಿವಾದಿತ ಬಸ್ ನಿಲ್ದಾಣದಲ್ಲಿ ಸುತ್ತೂರು ಶ್ರೀ, ಬೊಮ್ಮಾಯಿ, ಮೋದಿ ಫೋಟೋ.. ಪೊಲೀಸರಿಂದ ಭದ್ರತೆ