ETV Bharat / state

ಮೈಸೂರು: ಡಿಆರ್‌ಎಂ ಹುದ್ದೆಗೇರಿದ 2ನೇ ಮಹಿಳೆ 'ಶಿಲ್ಪಿ ಅಗರ್ವಾಲ್‌' - ಡಿವಿಷನಲ್‌ ರೈಲ್ವೆ ಮ್ಯಾನೇಜರ್‌

ಶಿಲ್ಪಿ ಅಗರ್ವಾಲ್ ಅವರು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ(ಡಿಆರ್‌ಎಂ)ರಾಗಿ ನೇಮಕಗೊಂಡಿದ್ದಾರೆ.

Shilpi Agarwal
ರೈಲ್ವೆ ಡಿಆರ್‌ಎಂ ಹುದ್ದೆಗೇರಿದ 2ನೇ ಮಹಿಳೆ ಶಿಲ್ಪಿ ಅಗರ್ವಾಲ್‌
author img

By

Published : Mar 11, 2023, 7:49 PM IST

ಮೈಸೂರು: ಶಿಲ್ಪಿ ಅಗರ್ವಾಲ್‌ ನೈಋತ್ಯ ರೈಲ್ವೆಯ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಹುದ್ದೆಯನ್ನು ಅಲಂಕರಿಸಿದ 2ನೇ ಮಹಿಳೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಹೌದು, ಹಿಂದೆ ಡಿಆರ್‌ಎಂ ಹುದ್ದೆಗೆ ರಾಹುಲ್ ಅಗರ್ವಾಲ್ ಬರುವ ಮುನ್ನ ಅಪರ್ಣಾ ಗಾರ್ಗ್ ಡಿಆರ್‌ಎಂ ಹುದ್ದೆ ನಿಭಾಯಿಸಿದ್ದರು. ಆ ಮೂಲಕ ಮೈಸೂರು ರೈಲ್ವೆ ವಿಭಾಗೀಯ ಡಿಆರ್‌ಎಂ (ಡಿವಿಷನಲ್‌ ರೈಲ್ವೆ ಮ್ಯಾನೇಜರ್‌) ಹುದ್ದೆಗೆ ಏರಿದ ಮೊದಲ ಮಹಿಳೆಯಾಗಿದ್ದರು. ಈಗ ಅದೇ ಹುದ್ದೆಗೆ ಮಹಿಳೆಯನ್ನೇ ನೇಮಕ ಮಾಡಲಾಗಿದೆ.

ನೈಋತ್ಯ ರೈಲ್ವೆಯ ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ಶಿಲ್ಪಿ ಅಗರ್ವಾಲ್‌ ಅವರು ರಾಹುಲ್ ಅಗರ್ವಾಲ್ ಅವರಿಂದ ಅಧಿಕಾರ ವಹಿಸಿಕೊಂಡರು. ಶಿಲ್ಪಿ ಅಗರ್ವಾಲ್‌ ಅವರು, ಇದಕ್ಕೂ ಮೊದಲು ರೈಲ್ವೆ ಸಚಿವಾಲಯದ ನಿರ್ಮಾಣ ವಿಭಾಗವಾದ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (ಆರ್‌ವಿಎನ್‌ಎಲ್)ನ ಯೋಜನೆಯ ಅನುಷ್ಠಾನ ಮತ್ತು ಸಾರಿಗೆ ಮೂಲಸೌಕರ್ಯ ಅಭಿವೃದ್ಧಿ (ಹಣಕಾಸು) ವಿಭಾಗದಲ್ಲಿ ಸಮೂಹ ಪ್ರಧಾನ ವ್ಯವಸ್ಥಾಪಕರಾಗಿದ್ದರು.

Shilpi Agarwal
ನಿರ್ಗಮಿತ ಡಿಆರ್‌ಎಂ ರಾಹುಲ್ ಅಗರ್ವಾಲ್ ರಿಂದ ಶಿಲ್ಪಿ ಅಗರ್ವಾಲ್‌ ಅಧಿಕಾರ ಸ್ವೀಕರಿಸುತ್ತಿರುವುದು..

ವಿವಿಧ ಹುದ್ದೆಗಳಲ್ಲಿ ಸೇವೆ: ಇವರು ಭಾರತೀಯ ರೈಲ್ವೆ ವಿತ್ತೀಯ ಸೇವೆಯ(ಐಆರ್‌ಎಎಸ್) 1993ರ ಬ್ಯಾಚ್‌ಗೆ ಸೇರಿದವರು. ಲಕ್ನೋ ವಿಶ್ವ ವಿದ್ಯಾಲಯದಿಂದ ಕಲೆಯಲ್ಲಿ ಸ್ನಾತಕೋತ್ತರ ಪದವಿ ಮತ್ತು ಸಮಾಜ ಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಜತೆಗೆ ಭಾರತೀಯ ರೈಲ್ವೆಯಲ್ಲಿ ಸುಮಾರು ಮೂರು ದಶಕಗಳ ಅನುಭವವನ್ನು ಹೊಂದಿದ್ದಾರೆ. ಉತ್ತರ ರೈಲ್ವೆ ಮತ್ತು ರೈಲ್ವೆ ಮಂಡಳಿಯ ಹಲವಾರು ಇಲಾಖೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಸುದೀರ್ಘ ಮತ್ತು ಉತ್ತಮ ವೃತ್ತಿ ಜೀವನದ ಅವಧಿಯಲ್ಲಿ ಅವರು, ಭಾರತೀಯ ರೈಲ್ವೆಯ ಬಹುತೇಕ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ನಿರ್ಮಾಣ, ಸಂಚಾರ, ಭಂಡಾರ, ಸಿಬ್ಬಂದಿ ಮತ್ತು ಆಡಳಿತ ಕ್ಷೇತ್ರಗಳಲ್ಲಿ ವಿತ್ತೀಯ ಖಾತೆಯ ವ್ಯಾಪಕ ಅನುಭವವನ್ನು ಹೊಂದಿದ್ದಾರೆ.

ಈವರೆಗೆ ಅವರು ರೈಲ್ ವಿಕಾಸ್ ನಿಗಮ್ ಲಿಮಿಟೆಡ್‌ನಲ್ಲಿ ಸಮೂಹ ಪ್ರಧಾನ ವ್ಯವಸ್ಥಾಪಕ (ಹಣಕಾಸು)ರಾಗಿದ್ದರು ಮತ್ತು ಉತ್ತರಾಖಂಡದ ಋಷಿಕೇಶ ಕರಣ್ ಪ್ರಯಾಗ ಯೋಜನೆ (ಚಾರ್ ಧಾಮ್ ಯೋಜನೆ) ನಂತಹ ಸಂಕೀರ್ಣ ಮೂಲಸೌಕರ್ಯ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ತಂಡಗಳಲ್ಲಿ ಅವಿಭಾಜ್ಯ ಅಂಗವಾಗಿದ್ದರು. ಅನೇಕ ಹಳಿ ದ್ವಿಪಥ ಮತ್ತು ರೈಲ್ವೆ ವಿದ್ಯುದ್ದೀಕರಣ ಯೋಜನೆಗಳಲ್ಲಿ ಸಲಹೆ ನೀಡಿದ್ದಾರೆ. ಜತೆಗೆ ಆರ್‌ವಿಎನ್‌ಎಲ್ ವ್ಯವಹಾರವನ್ನು ದೇಶದ ಹೊರಗೆ, ವಿಶೇಷವಾಗಿ ಮಾಲ್ಡೀವ್ಸ್​​ನಲ್ಲಿ ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ರೈಲ್ವೆ ಸಚಿವರ ಪ್ರಶಸ್ತಿ: 2010ರಲ್ಲಿ ಅತ್ಯುತ್ತಮ ಕೆಲಸಕ್ಕಾಗಿ ರೈಲ್ವೆ ಸಚಿವರ ಪ್ರಶಸ್ತಿಗೆ ಭಾಜನರಾಗಿದ್ದ ಶಿಲ್ಪಿ ಅಗರ್ವಾಲ್‌ ಊಟಿಯಲ್ಲಿ ನಡೆಸಿದ ಅಂತರರಾಷ್ಟ್ರೀಯ ಹಣಕಾಸು ವರದಿ ಮಾನದಂಡಗಳಲ್ಲಿ ತರಬೇತಿಯನ್ನು ಪಡೆದಿದ್ದಾರೆ. ಅಲ್ಲದೆ ಮಲೇಷ್ಯಾದ ಐಸಿಎಲ್ಐಎಫ್ ಸಂಸ್ಥೆಯಲ್ಲಿ ನಾಯಕತ್ವದ ವ್ಯವಹಾರ ನವೀನತೆ ಮತ್ತು ಸನ್ನಿವೇಶ ಕಾರ್ಯಕ್ರಮದಲ್ಲಿ, ಸಿಂಗಾಪುರದ ಐಎನ್‌ಎಸ್‌ಇಎಡಿ ಈ ಸಂಸ್ಥೆಯಲ್ಲಿ ಭಾರತೀಯ ರೈಲ್ವೆಯಲ್ಲಿ ಸುಧಾರಿತ ನಿರ್ವಹಣಾ ಕಾರ್ಯಕ್ರಮ ಗ್ರಾಹಕ ತಂತ್ರಗಳ ಮಾಡ್ಯೂಲ್​​ನಲ್ಲಿ ಮತ್ತು ಲಂಡನ್ ಮತ್ತು ಪ್ಯಾರಿಸ್‌ನ ಇಎಸ್‌ಸಿಪಿ (ಯುರೋಪ್ ಬ್ಯುಸಿನೆಸ್ ಸ್ಕೂಲ್)ನಲ್ಲಿ ಹಣಕಾಸು ಮತ್ತು ಖಾತೆಗಳ ತಾಂತ್ರಿಕ ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಅವುಗಳ ಜತೆಗೆ ಫೆಬ್ರವರಿ 201ರಲ್ಲಿ ಲಕ್ನೋದ ಐಐಎಂನಲ್ಲಿ ಹಣಕಾಸು ಕ್ಷೇತ್ರದಲ್ಲಿ ಎಂಡಿಪಿ ಕಾರ್ಯಕ್ರಮದಲ್ಲಿ ಸಹ ಭಾಗವಹಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ನಡುವೆಯೂ ರೈಲ್ವೆ ಸೇವೆ ಯಥಾಸ್ಥಿತಿಗೆ : ರಾಹುಲ್ ಅಗರ್​ವಾಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.