ETV Bharat / state

ಮೈಸೂರಿನಲ್ಲಿ ವಿವಿಧ ಯೋಜನೆಗಳ ಮೂಲಕ 'ಸೂರು' ವಿತರಣೆ - ಮೈಸೂರು ಸುದ್ದಿ

ಮೈಸೂರು ಮಹಾನಗರ ಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಕೊಳಚೆ ನಿರ್ಮೂಲನ ಮಂಡಳಿಗಳಿಂದ ಬಡವರಿಗೆ, ಮನೆ ಇಲ್ಲದವರೆಗೆ ಮನೆ ಕಟ್ಟುವ ಕೆಲಸ ಮಾಡಲಾಗುತ್ತಿದೆ.

ನಿರ್ಗತಿಕರಿಗೆ 'ಸೂರು' ವಿತರಣೆ
ನಿರ್ಗತಿಕರಿಗೆ 'ಸೂರು' ವಿತರಣೆ
author img

By

Published : Oct 1, 2020, 12:11 PM IST

Updated : Oct 1, 2020, 1:02 PM IST

ಮೈಸೂರು: ಸ್ವಚ್ಛನಗರಿ, ಬಯಲು ಶೌಚಾಲಯ ಮುಕ್ತ ನಗರಿ, ಗುಡಿಸಲು ಮುಕ್ತ ನಗರಿ ಎಂಬ ಖ್ಯಾತಿಗೊಳಪಟ್ಟಿರುವ ಮೈಸೂರು ನಗರದಲ್ಲಿ 18 ಲಕ್ಷ ಜನಸಂಖ್ಯೆಯಿದೆ. ಇನ್ನು ಮೈಸೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಈ ನಗರದಲ್ಲಿ ಮಹಾನಗರ ಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಕೊಳಚೆ ನಿರ್ಮೂಲನ ಮಂಡಳಿಗಳಿಂದ ಬಡವರಿಗೆ, ಮನೆ ಇಲ್ಲದವರೆಗೆ ಮನೆ ಕಟ್ಟುವ ಕೆಲಸ ಮಾಡಲಾಗುತ್ತಿದೆ.

ನಿರ್ಗತಿಕರಿಗೆ 'ಸೂರು' ವಿತರಣೆ

ಕಳೆದ 10 ವರ್ಷಗಳಿಂದ ನಗರದಲ್ಲಿ ಮೈಸೂರು ಮಹಾನಗರ ಪಾಲಿಕೆ ವಿವಿಧ ಸರ್ಕಾರಿ ಆಶ್ರಯ ಯೋಜನೆಗಳ ಮೂಲಕ ಬಡವರಿಗೆ, ಹಿಂದುಳಿದವರಿಗೆ ಮನೆ ನಿರ್ಮಾಣ ಮಾಡಿಕೊಟ್ಟಿದೆ. 10 ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ನರ್ಮ್ ಯೋಜನೆ ಮೂಲಕ ನಗರದ ಹೊರವಲಯ ಹಾಗೂ ಬಡವರು ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ ಸುಮಾರು 230 ಕೋಟಿ ರೂಪಾಯಿ ವೆಚ್ಚದಲ್ಲಿ 10000 ಗುಂಪು ಮನೆಗಳನ್ನು ನಿರ್ಮಾಣ ಮಾಡಲಾಗಿತ್ತು. ಜೊತೆಗೆ ಸ್ಥಳೀಯ ಶಾಸಕರ ಅನುದಾನದಿಂದಲೂ ಸಹ ಪಾಲಿಕೆ ಆಶ್ರಯ ಯೋಜನೆ ಅಡಿ ಮನೆ ನಿರ್ಮಾಣ ಮಾಡಿ ಕೊಟ್ಟಿದೆ. ಇದರ ಜೊತೆಗೆ ಕೊಳಚೆ ಪ್ರದೇಶದಲ್ಲಿ ವಾಸ ಮಾಡುವ ಜನರಿಗೆ ಕೊಳಚೆ ನಿರ್ಮೂಲನ ಮಂಡಳಿ ಸಹ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದು , ಈಗ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವೂ ನಗರದ ಒಳಗೆ ಇರುವ ಮುಡಾ ಜಾಗದಲ್ಲಿ ಬಡವರಿಗಾಗಿ ಗುಂಪು ಮನೆಗಳನ್ನು ನಿರ್ಮಾಣ ಮಾಡಲು ಈಗಾಗಲೇ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಈ ಬಗ್ಗೆ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

ನಗರದ ಹೊರವಲಯದ ಪಾಲಿಕೆ ಜಾಗದಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಯೋಜನೆ ಅಡಿ ಬಡವರಿಗಾಗಿ ಮನೆಗಳನ್ನು ನಿರ್ಮಿಸುವ ಕೆಲಸ ಪ್ರಾರಂಭಿಸುತ್ತೇವೆ ಎಂದು ಪಾಲಿಕೆ ಆಯುಕ್ತ ಗುರುದತ್ತ್ ಹೆಗಡೆ ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದರು.

Last Updated : Oct 1, 2020, 1:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.