ಮೈಸೂರು : ಕೆ ಆರ್ ಆಸ್ಪತ್ರೆಯಲ್ಲಿ ಮದ್ಯ ಸೇವಿಸಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಗಾಡ್೯ಗಳಿಗೆ ವೈದ್ಯಕೀಯ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ಸಂಕಷ್ಟದ ನಡುವೆ ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಸೆಕ್ಯುರಿಟಿಗಳು ಕಳ್ಳಾಟವಾಡುತ್ತಿದೆ. ರಾತ್ರಿ ವೇಳೆ ಮದ್ಯ ಸೇವಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾತ್ರಿ ವೇಳೆ ಬರುವ ರೋಗಿಗಳಿಗೆ ಸಹಾಯ ಮಾಡದೇ ಅಡಗಿ ಮಲಗುತ್ತಿದ್ದರು.
ಸೆಕ್ಯೂರಿಟಿಗಳ ಈ ವರ್ತನೆಯಿಂದ ಬೇಸತ್ತ ವೈದ್ಯ ಡಾ.ಸಾಯಿಕುಮಾರ್ ಅವರ ನೇತೃತ್ವದ ಸಿಬ್ಬಂದಿ ಡ್ರಿಂಕ್ಸ್ ಟೆಸ್ಟ್ ಮಾಡಿಸಿ, ದುರ್ವರ್ತನೆ ತೋರಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಸ್ಪತ್ರೆಯ ಮುಖ್ಯ ಅಧೀಕ್ಷಕರಿಗೆ ಶಿಫಾರಸು ಮಾಡಲಾಗಿದೆ.