ಮೈಸೂರು: ಡಿ.ಜೆ. ಹಳ್ಳಿ ಗಲಭೆಗೆ ಪೋಲಿಸರ ವೈಫಲ್ಯ ಕಾರಣ, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಹೇಳಿದರು.
ಈಟಿವಿ ಭಾರತ್ ಜೊತೆ ಮಾತನಾಡಿ, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸೋದರಳಿಯ ನವೀನ್ ಪ್ರವಾದಿಯವರ ಬಗ್ಗೆ ಸಾಮಾಜಿಕ ಜಾಲತಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಸಮುದಾಯದ ಜನರು ಡಿ.ಜೆ ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಎರಡು ಗಂಟೆ ಕೊಡಿ ಎಂದು ಹೇಳಿ ಪೊಲೀಸರು ಹೇಳಿದ್ದರು. ಹೀಗಾಗಿ, ಜನರು ಆಕ್ರೋಶಿತರಾಗಿದ್ದಾರೆ ಎಂದರು.
ನಿನ್ನೆಯ ಪ್ರಕರಣದ ಮಧ್ಯೆ ಎಸ್ಡಿಪಿಐಯನ್ನು ಎಳೆದು ತರುವುದು ಸರಿಯಲ್ಲ. ನಮ್ಮದು ಜವಾಬ್ದಾರಿಯುತ ಪಕ್ಷ. ನಾವು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿದ್ದೇವೆ. ಮುಜಾಮಿಲ್ ಪಾಷ ಮನವಿ ಮಾಡಲು ಮೈಕ್ ಮೂಲಕ ಮನವಿ ಮಾಡಿದ್ದಾನೆ ವಿನಹಃ, ಯಾವುದೇ ಗಲಾಟೆಗೆ ಪ್ರಚೋದನೆ ನೀಡಿಲ್ಲ. ಆದರೂ, ಆತನನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಆತ ಪ್ರಚೋದನೆ ನೀಡಿದ ಅಥವಾ ಕಲ್ಲು ಹೊಡೆದ ವಿಡಿಯೋ ಇದ್ದರೆ ಬಹಿರಂಗಪಡಿಸಿ ಎಂದು ಹೇಳಿದರು.
ಬಿಜೆಪಿ ಸರ್ಕಾರವನ್ನು ತೃಪ್ತಿಪಡಿಸಲು ಪೊಲೀಸರು ಪ್ರಕರಣವನ್ನು ತಿರುಚುತ್ತಿದ್ದಾರೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು ಎಂದರು.