ETV Bharat / state

ವಿಜ್ಞಾನಿ ಪ್ರೊ. ಕೆ ಎಸ್ ರಂಗಪ್ಪಗೆ ದಿ ವರ್ಲ್ಡ್ ಆಕಾಡೆಮಿ ಆಫ್ ಸೈಂಟಿಸ್ಟ್ ಫೆಲೋಶಿಪ್ ಗೌರವ

ವಿಜ್ಞಾನ ಕ್ಷೇತ್ರದಲ್ಲಿ ಕಳೆದ 40 ವರ್ಷಗಳಿಂದ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಯುನೆಸ್ಕೋ ಅಂಗ ಸಂಸ್ಥೆಯಾದ ದಿ ವರ್ಲ್ಡ್ ಅಕಾಡೆಮಿ ಆಫ್ ಸೈನ್ಸ್​ 2022 ಸಾಲಿನ ಫೆಲೋಶಿಪ್ ನೀಡಿದ್ದು, ಈ ಮನ್ನಣೆ ಪಡೆದ ಮೊದಲ ಭಾರತೀಯ ಎಂಬುದು ವಿಶೇಷ.

author img

By

Published : Dec 3, 2022, 4:50 PM IST

scientist-prof-ks-rangappa-was-awarded-the-world-academy-of-scientists-fellowship
ವಿಜ್ಞಾನಿ ಪ್ರೊ. ಕೆ ಎಸ್ ರಂಗಪ್ಪನವರಿಗೆ ದಿ ವರ್ಲ್ಡ್ ಆಕಾಡೆಮಿ ಆಫ್ ಸೈಂಟಿಸ್ಟ್ ಫೆಲೋಶಿಪ್ ಗೌರವ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಹಾಗೂ ಪ್ರಸಿದ್ಧ ವಿಜ್ಞಾನಿಗಳು ಆಗಿರುವ ಪ್ರೊ. ಕೆ ಎಸ್ ರಂಗಪ್ಪ ಕಳೆದ 40 ವರ್ಷಗಳಿಂದ ವಿಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಆದ ಸಂಶೋಧನೆಗಳನ್ನು ಮಾಡಿದ್ದಾರೆ ಜೊತೆಗೆ ವಿಶ್ರಾಂತ ಕುಲಪತಿಗಳು ಸಹ ಆಗಿದ್ದು 2022ನೇ ಸಾಲಿನ ದೀ ವರ್ಲ್ಡ್ ಆಕಾಡೆಮಿ ಆಫ್ ಸೈನ್ಸಸ್ ಫೆಲೋಶಿಪ್ ಪಡೆದ ಏಕೈಕ ಭಾರತೀಯರಾಗಿದ್ದಾರೆ.

ಕನ್ನಡ ನಾಡಿನ ಯುವ ವಿಜ್ಞಾನಿಗಳು ಅಧ್ಯಯನಕ್ಕೆ ಶಿಫಾರಸು ಮಾಡುವ ಹಾಗೂ ವೈಜ್ಞಾನಿಕ ಸಂಶೋಧನೆ ನಡೆಸಲು ಯುವ ವಿಜ್ಞಾನಿಗಳಿಗೆ ಶಿಫಾರಸ್ಸು ಮಾಡಲು ಈ ಫೆಲೋಶಿಪ್ ಸಹಕಾರಿ ಆಗುತ್ತದೆ ಎಂದು ಪ್ರೊ.ರಂಗಪ್ಪ ಮಾಹಿತಿ ನೀಡಿದರು.

ದೀ ವರ್ಲ್ಡ್ ಅಕಾಡೆಮಿ ಆಫ್ ಸೈನ್ಸಸ್ ಬಗ್ಗೆ ಮಾಹಿತಿ: ದೀ ವರ್ಲ್ಡ್ ಆಕಾಡೆಮಿ ಆಫ್ ಸೈನ್ಸಸ್ (TWAS) ಬಗ್ಗೆ ಹೇಳುವುದಾದರೆ ಈ ಸಂಸ್ಥೆಯು 1983ರಲ್ಲಿ ಸ್ಥಾಪನೆಯಾಯಿತು, ಇದನ್ನು ಪ್ರಪಂಚದ ಕೆಲವು ವಿಶಿಷ್ಟ ವಿಜ್ಞಾನಿಗಳು ಸ್ಥಾಪನೆ ಮಾಡಿದರು, ಇದು 1296 ಚುನಾಯಿತ ಫೆಲೋಗಳನ್ನ ಹೊಂದಿದೆ.

ಯುನೆಸ್ಕೋ ಕಾರ್ಯಕ್ರಮದ ಘಟಕ: ವಿಶ್ವದ ಅತ್ಯಂತ ನಿಪುಣ ವಿಜ್ಞಾನಿಗಳು ನೂರಕ್ಕೂ ಹೆಚ್ಚು ದೇಶಗಳನ್ನು ಪ್ರತಿನಿಧಿಸುತ್ತಿದ್ದಾರೆ, ಅವರಲ್ಲಿ 11 ಮಂದಿ ನೊಬೆಲ್ ಪ್ರಶಸ್ತಿ ಪುರಸ್ಕೃತರು. ಈ ಸಂಸ್ಥೆಯ ಮುಖ್ಯ ಉದ್ದೇಶ ಅಭಿವೃದ್ಧಿಶೀಲಾ ರಾಷ್ಟ್ರಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ವೈಜ್ಞಾನಿಕ ರೀತಿಯಲ್ಲಿ ಬಗೆಹರಿಸುವುದು. ಈ ಸಂಸ್ಥೆಯ ಪ್ರಧಾನ ಕಚೇರಿ ಇಟಲಿಯ ಟ್ರೈಸ್ಟೆ ಎಂಬುಲ್ಲಿದೆ. ಇದು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ (ಯುನೆಸ್ಕೋ) ಕಾರ್ಯಕ್ರಮ ಘಟಕವಾಗಿದೆ.

ಇದನ್ನೂ ಓದಿ: ಮೈಸೂರಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶ್ರೀಕಂಠಯ್ಯ ಇನ್ನಿಲ್ಲ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.