ಮೈಸೂರು: ಸಂಸದೆ ಸುಮಲತಾ ಅಂಬರೀಶ್ ಅವರ ಬಗ್ಗೆ ಮಾತನಾಡುವಷ್ಟು ಯೋಗ್ಯತೆ ನಮಗಾಗಲಿ, ನಮ್ಮ ಪಕ್ಷದವರಿಗಾಗಲಿ ಇಲ್ಲ ಎಂದು ಸಾರಾ ಮಹೇಶ್ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣ ಮುಂಭಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರು ಅಂಬರೀಶ್ ಅಣ್ಣನವರ ಧರ್ಮಪತ್ನಿ, ನಮ್ಮ ಕ್ಷೇತ್ರದ ಸಂಸದೆ. ಕೋವಿಡ್ ಆರಂಭವಾದ ನಂತರ ನನ್ನ ಕ್ಷೇತ್ರವು ಸೇರಿ ಎಲ್ಲಾ ಗ್ರಾಮಕ್ಕೂ ಭೇಟಿ ಕೊಟ್ಟು ಕೆಲಸ ಮಾಡುವ ಮೂಲಕ ಅವರು ಬ್ಯುಸಿಯಾಗಿದ್ದಾರೆ. ಅದಕ್ಕಾಗಿ ಅವರ ಅವರ ಬಗ್ಗೆ ಮಾತನಾಡಬೇಡಿ ಎಂದು ಕುಮಾರಣ್ಣನಲ್ಲಿ ಮನವಿ ಮಾಡಿದ್ದೇನೆ ಎಂದರು.
ಕೆಆರ್ಎಸ್ ಬಿರುಕು ಬಿಟ್ಟಿದೆ ಎಂದು ಮಾಹಿತಿ ನೀಡಿದಾಗ ಸುಮಾಲತಾ ಅವರು ಒಮ್ಮೆ ಹೋಗಿ ಅದನ್ನು ಪರಶೀಲನೆ ಮಾಡಬೇಕಿತ್ತು. ಯಾರದ್ದೋ ಮಾತು ಕೇಳಿ ಮಾತನಾಡಿದ್ದಾರೆ. ಕನ್ನಂಬಾಡಿ ಕೇವಲ ಕಟ್ಟೆ ಅಲ್ಲ, ಅದು ಮೈಸೂರು, ಮಂಡ್ಯ ಜಿಲ್ಲೆ ದಿನನಿತ್ಯದ ಜೀವನಾಡಿ ಎಂದರು.
ಇದನ್ನೂ ಓದಿ: ಕೆಆರ್ಎಸ್ ಬಿರುಕಿನ ವಿಚಾರವಾಗಿ ರಂಪಾಟ ನಡೆಯುತ್ತಿದೆ, ಈ ಸರ್ಕಾರ ಸತ್ಹೋಗಿದೆಯಾ?: ಹೆಚ್.ವಿಶ್ವನಾಥ್