ETV Bharat / state

ಸ್ಯಾಂಟ್ರೋ ರವಿ ಪ್ರಕರಣ: ಸಿಐಡಿ ತನಿಖೆಗೆ ವರ್ಗಾಯಿಸಿದ ರಾಜ್ಯ ಸರ್ಕಾರ

ವಂಚಕ ಸ್ಯಾಂಟ್ರೋ ರವಿ ಪ್ರಕರಣವನ್ನು ರಾಜ್ಯ ಸರ್ಕಾರ ಸೋಮವಾರ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ವರ್ಗಾಯಿಸಿ ಸೂಚನೆ ನೀಡಿದೆ. ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.

Santro Ravi Case: State govt transfers probe to CID

author img

By

Published : Jan 16, 2023, 2:45 PM IST

Updated : Jan 16, 2023, 4:50 PM IST

ಮೈಸೂರು: ಅತ್ಯಾಚಾರ, ವೇಶ್ಯಾವಾಟಿಕೆ, ವಂಚನೆ, ಜಾತಿ ನಿಂದನೆ, ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ ಮಂಜುನಾಥ್ ಕೆ‌.ಎಸ್. ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧದ ದೂರುಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಸಿಐಡಿ ಪೊಲೀಸರಿಗೆ ನಿರ್ದೇಶನ ನೀಡಿದೆ.

ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸೋಮವಾರ ಮಾಹಿತಿ ನೀಡಿದ್ದಾರೆ. ಸ್ಯಾಂಟ್ರೋ ರವಿ ವಿರುದ್ಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಆತನ ಎರಡನೇ ಪತ್ನಿ ನೀಡಿರುವ ದೂರಿನ ಅನ್ವಯ ಜನೇವರಿ 2 ರಂದು ಪ್ರಕರಣ ದಾಖಲಾಗಿತ್ತು. ಸದ್ಯ ಮೈಸೂರಿನ ಪೊಲೀಸರು ತನಿಖೆ ನಡೆಸುತ್ತಿದ್ದು, ಇದೀಗ ಡಿಜಿ - ಐಜಿಪಿ ಆದೇಶದ ಬಳಿಕ ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಸ್ಯಾಂಟ್ರೋ ರವಿ ಪರ ವಕೀಲ ಚೇತನ್ ಪ್ರತಿಕ್ರಿಯೆ: ಇದು ಸಿಐಡಿಗೆ ವರ್ಗಾಯಿಸುವ ಪ್ರಕರಣ ಅಲ್ಲ. ಇದು 498A ಮತ್ತು 376 ಪ್ರಕರಣ ಉಳ್ಳದ್ದಾಗಿದೆ. ಹಣ ವರ್ಗಾವಣೆ ಸೇರಿದಂತೆ ಕೆಲವು ಪ್ರಕರಣಗಳಲ್ಲಿ ಆರೋಪ ಮಾಡಿದ್ದಾರೆ ಹೊರತು ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಅಲ್ಲದೇ ಯಾವುದೇ ದೂರುದಾರರೂ ಸಹ ಈ ಪ್ರಕರಣದಲ್ಲಿ ಇಲ್ಲ. ಸಿಐಡಿಗೆ ವರ್ಗಾಯಿಸುವಂತಹ ಅಥವಾ ತನಿಖೆ ನಡೆಸುವಂತಹ ಅವಶ್ಯಕತೆ ಇಲ್ಲ. ಹಾಗಾಗಿ ನಾವು ನಮ್ಮ ಅಬ್ಜೆಕ್ಸನ್ ಹಾಕಿದ್ದೇವೆ. ನಮ್ಮ ಆರೋಪಿಯನ್ನು 25ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನಮಗೆ ಸಿಐಡಿಗೆ ವಹಿಸಿರುವ ಕಾಪಿ ಸಿಕ್ಕ ತಕ್ಷಣ ನಾವು ಸಹ ಹೈಕೋರ್ಟ್​ನಲ್ಲಿ ಅಬ್ಜೆಕ್ಷನ್ ಹಾಕುತ್ತೇವೆ ಎಂದು ಸ್ಯಾಂಟ್ರೋ ರವಿ ಪರ ವಕೀಲ ಚೇತನ್ ಪ್ರತಿಕ್ರಿಯೆ ನೀಡಿದ್ದಾರೆ.

ಸ್ಯಾಂಟ್ರೋ ರವಿಯನ್ನ ನ್ಯಾಯಾಂಗ ಬಂಧನದಿಂದ ಇಂದು ನಗರದ ಆರನೇಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿತ್ತು. ಈ ಸಂದರ್ಭದಲ್ಲಿ ಸರ್ಕಾರಿ ಪರ ವಕೀಲರು ಸ್ಯಾಂಟ್ರೋ ರವಿ ಪ್ರಕರಣವನ್ನ ಸಿಐಡಿಗೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ. ಇವರ ಮಾತು ಆಲಿಸಿದ ಆರನೇಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯದೀಶರಾದ ಗುರುರಾಜ್ ಅವರು ಜನವರಿ 25ರ ವರೆಗೆ ಸ್ಯಾಂಟ್ರೊ ರವಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮತ್ತೆ ವಿಚಾರಣೆಯನ್ನು ಜನವರಿ 18ಕ್ಕೆ ಮುಂದೂಡಿ ಆದೇಶ ನೀಡಿದರು.

ಇದಕ್ಕೂ ಮುನ್ನ ಸ್ಯಾಂಟ್ರೋ ರವಿ ಪರ ವಕೀಲರುಗಳಾದ ಚೇತನ್ ಹಾಗೂ ಹರೀಶ್ ಅವರು ನಮ್ಮ ಆರೋಪಿಯ ವಿರುದ್ಧ ಅತ್ಯಾಚಾರ, ಜಾತಿ ನಿಂದನೆ, ವಂಚನೆ ಮಾಡಿದ್ದಾರೆಂದು ಆರೋಪ ಮಾಡುವ ಆತನ ಹೆಂಡತಿ ಅಂತ ಹೇಳಿಕೊಳ್ಳುವ ದೂರುದಾರೇ ಆರೋಪಿಸಿ ಸ್ಥಾನಲ್ಲಿದ್ದಾರೆ. ಅದನ್ನ ಬಿಟ್ಟರೆ ಬೇರೆ ಯಾವುದೇ ವರ್ಗಾವಣೆ ಪ್ರಕರಣ ಸೇರಿದಂತೆ ಬೇರೆ ಯಾವುದೇ ಪ್ರಕರಣ ಇಲ್ಲ ಎಂದು ವಾದ ಮಾಡಿಸಿದರು. ನ್ಯಾಯಾಧೀಶರು ಪ್ರಕರಣವನ್ನ ಮತ್ತೆ ವಿಚಾರಣೆಗೆ ಜನವರಿ 18ಕ್ಕೆ ಮುಂದೂಡಿದರು.

ಇದನ್ನೂ ಓದಿ: ನಾಲ್ಕು ವರ್ಷದಲ್ಲಿ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಅವರಿಗೆ 90 ಲಕ್ಷ ಕಮಿಷನ್ ಕೊಟ್ಟಿದ್ದೇನೆ: ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್ ಮಂಜುನಾಥ್​

Last Updated : Jan 16, 2023, 4:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.