ETV Bharat / state

ಮೈಸೂರಲ್ಲಿ ಶ್ರೀಗಂಧ ಮರಗಳ್ಳರ ಬಂಧನ : 35 ಲಕ್ಷ ರೂ. ಮೌಲ್ಯದ ಶ್ರೀಗಂಧ ವಶ - ಶ್ರೀಗಂಧ ಮರಗಳ್ಳರು

ಶ್ರೀಗಂಧದ ಮರಗಳನ್ನು ಕಡಿದು ಸಾಗಿಸಲು ಯತ್ನಿಸಿದ ನಾಲ್ವರನ್ನು ಮೇಟಗಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

sandalwood tree
ಶ್ರೀಗಂಧ ವಶ
author img

By

Published : Jan 18, 2021, 12:22 PM IST

ಮೈಸೂರು: ಶ್ರೀಗಂಧದ ಮರಗಳ್ಳರನ್ನು ಬಂಧಿಸಿ, ಬಂಧಿತರಿಂದ 35 ಲಕ್ಷ ರೂ. ಮೌಲ್ಯದ ಶ್ರೀಗಂಧದ ಮರವನ್ನು ಮೇಟಗಳ್ಳಿ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೈಸೂರು ತಾಲೂಕು ಇಲವಾಲದ ರಘು (46), ಮಂಜುನಾಥ (22), ಕಲ್ಯಾಣಿಗಿರಿಯ ಸೈಯದ್‌ ಗೌಸ್‌ ಮೊಹಿದ್ದೀನ್‌ (50), ಲಷ್ಕರ್ ಮೊಹಲ್ಲಾದ ಮಕ್ಬುಲ್‌ ಷರೀಫ್‌ (58) ಬಂಧಿತರು.

thefts
ಬಂಧಿತರು

ಬೆಲವತ್ತ ರಿಂಗ್‌ ರೋಡ್​ ಪಕ್ಕದಲ್ಲಿರುವ ಭಾರತೀಯ ನೋಟು ಮುದ್ರಣ ಘಟಕದ ಕಾಂಪೌಂಡ್‌ನಿಂದ ಒಳಗೆ ನುಸುಳಿ ಅಲ್ಲಿರುವ ಕಾಡಿನೊಳಗೆ ಬೆಳೆದಿದ್ದ ಶ್ರೀಗಂಧದ ಮರಗಳನ್ನು ಕಡಿದು ಸಾಗಿಸಲು ಯತ್ನಿಸಿದ್ದರು. ಆರ್‌ಬಿಐ ಭದ್ರತಾ ಸಿಬ್ಬಂದಿ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಪೊಲೀಸರು ರೆಡ್‌ಹ್ಯಾಂಡ್‌ ಆಗಿ ಸೆರೆ ಹಿಡಿದಿದ್ದಾರೆ.

ಬಂಧಿತರಿಂದ 35 ಲಕ್ಷ ರೂ. ಮೌಲ್ಯದ 230 ಕೆ.ಜಿ. ತೂಕದ ಶ್ರೀಗಂಧ ಹಾಗೂ ಕೃತ್ಯಕ್ಕೆ ಬಳಸಿದ್ದ ಮಚ್ಚು, ಕೊಡಲಿ, ಗರಗಸ, ಬೈಕ್‌, ತೂಕದ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಘು ಮತ್ತು ಮಂಜುನಾಥ್‌ ಆರೋಪಿಗಳು ಕಳ್ಳತನ ಮಾಡಿದ ಶ್ರೀಗಂಧದ ತುಂಡುಗಳನ್ನು ಮಕ್ಬುಲ್‌ ಷರೀಫನಿಗೆ ಮಾರಾಟ ಮಾಡುತ್ತಿದ್ದರು. ಈತ ಅದನ್ನು ಸೈಯದ್‌ಗೆ ಮಾರುತ್ತಿದ್ದ ಎನ್ನಲಾಗ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.