ಮೈಸೂರು: ನಮ್ಮ ಬಳಿ ಸಿಸಿಟಿವಿ ಕ್ಯಾಮರಾ ಇದೆ ಅದನ್ನು ನಾವು ನೋಡುತ್ತಿದ್ದೇವೆ, ಕಾರ್ಯಕ್ರಮಕ್ಕೆ ಬಂದವರು ಹಲ್ಲೆ ಮಾಡಲು ಬಂದಿಲ್ಲ ಎಂದು ಅಭಿಮಾನಿ ವಿರುದ್ದ ದಾಖಲಾದ ಎಫ್.ಐ.ಆರ್ ಬಗ್ಗೆ ನಟ ದರ್ಶನ್ ಮಾಧ್ಯಮಗಳೊಂದಿಗೆ ಉತ್ತರಿಸಿದರು.
ಇಂದು ಹೋಟೆಲ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಂತರ ಮಾಧ್ಯಮಗಳ ಜೊತೆ ಮಾತನಾಡಿ ಹುಟ್ಟು ಹಬ್ಬದ ಸಂದರ್ಭದಲ್ಲಿ ತಮ್ಮ ಅಭಿಮಾನಿ ಪೇದೆಯೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಎಫ್.ಐ.ಆರ್ ದಾಖಲಾಗಿರುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಎಲ್ಲಿ ಏನನ್ನು ಕೇಳಬೇಕು ಎಂದು ನಿಮಗೆ ಗೊತ್ತಿಲ್ವಾ ಎಂದು ಗರಂ ಆಗಿ ನಮ್ಮಲ್ಲಿ ಸಹ ಸಿಸಿಟಿವಿ ಕ್ಯಾಮರಾ ಇದೆ ಅದನ್ನು ನೋಡುತ್ತಿದ್ದೇವೆ ಎಂದರು.
ನಂತರ ಮಾತನಾಡಿದ ಅವರು, ಹುಟ್ಟುಹಬ್ಬಕೆ ಬಂದವರು ಅದನ್ನು ಮಾಡೋಕೆ ಬಂದಿಲ್ಲ, ಏನಾಗಿದೆ ಎಂದು ಸಿಸಿ ಕ್ಯಾಮರಾ ನೋಡಬೇಕು ಎಂದರು, ರಾಬರ್ಟ್ ಸಿನಿಮಾ ಯಾವಾಗ ರಿಲೀಸ್ ಎಂಬ ಮಾಧ್ಯಮದವರ ಪ್ರಶ್ನೆಗೆ, ಹೋಟೆಲ್ ಉದ್ಘಾಟನೆ ಬಗ್ಗೆ ಕೇಳಿ ಎಂದರೆ ಏನೇನೂ ಕೇಳುತ್ತಿರಲ್ವಾ ಎಂದು ಹೊರಟು ಹೋದರು.