ETV Bharat / state

ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತ: ನಿವೃತ್ತಿಗೆ ಒಂದು ದಿನ ಇರುವಾಗಲೇ ಪಿಎಸ್​ಐ ಸಾವು - ಸಾಲಿಗ್ರಾಮ ಠಾಣೆ ಪಿಎಸ್​ಐ ಹೃದಯಾಘಾತದಿಂದ ಸಾವು

ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮ ಠಾಣೆ ಪಿಎಸ್​ಐ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

saligrama-psi-died-by-heart-attack
ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತ: ನಿವೃತ್ತಿಗೆ ಒಂದು ದಿನವಿರುವಾಗಲೇ ಪಿಎಸ್​ಐ ಸಾವು
author img

By

Published : Jun 29, 2022, 9:07 AM IST

ಮೈಸೂರು: ಜಿಲ್ಲೆಯ ಸಾಲಿಗ್ರಾಮ ಪೊಲೀಸ್​ ಠಾಣೆ ಪಿಎಸ್​​ಐ ದೊಡ್ಡೇಗೌಡ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ದೊಡ್ಡೇಗೌಡ ಅವರು ನಿವೃತ್ತಿಗೆ ಒಂದು ದಿನ ಇರುವಾಗಲೇ ಇಹಲೋಕ ತ್ಯಜಿಸಿದ್ದಾರೆ.

ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮ ಠಾಣೆಯಲ್ಲಿ ಪಿಎಸ್​ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ದೊಡ್ಡೇಗೌಡ ಸೋಮವಾರ ರಾತ್ರಿ ಗಸ್ತಿನಲ್ಲಿದ್ದ ವೇಳೆ ಅಸ್ವಸ್ಥಗೊಂಡಿದ್ದರು. ಬಳಿಕ ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಬುಧವಾರ ಬೆಳಗಿನ ಜಾವ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಖಚಿತಪಡಿಸಿವೆ. ಪಿಎಸ್​ಐ ನಾಳೆ ನಿವೃತ್ತರಾಗಬೇಕಿತ್ತು.

ಇದನ್ನೂ ಓದಿ: ಡಿಜಿಪಿ ಫೋಟೋವನ್ನೇ ವಾಟ್ಸ್‌ಆ್ಯಪ್‌​ ಡಿಪಿಯಾಗಿ ಬಳಸಿ ಹಣ ಪೀಕುತ್ತಿರುವ ಸೈಬರ್​ ಕಳ್ಳರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.