ETV Bharat / state

ಸಂಬಳ ಕಡಿತಕ್ಕೆ ಕಾರ್ಮಿಕರ ವಿರೋಧ ... ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರು

ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ಎಟಿ ಆ್ಯಂಡ್ ಎಸ್ ಕಾರ್ಖಾನೆಯಲ್ಲಿ 1,000 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಮಾಲೀಕರು ಲಾಕ್​ಡೌನ್​​ನ ನಂತರ ಕಾರ್ಖಾನೆಯನ್ನು ಪುನಾರಂಭಿಸಿ ವೇತನದಲ್ಲಿ 40 ರಷ್ಟು ಕಡಿತಗೊಳಿಸಿದ್ದಾರೆ ಎಂದು ಆರೋಪಿಸಿ ಕಾರ್ಮಿಕರು ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗಿದ್ದಾರೆ.

Workers protesting against wearing a black belt
ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದ ಕಾರ್ಮಿಕರು
author img

By

Published : Sep 11, 2020, 1:49 PM IST

ಮೈಸೂರು: ಲಾಕ್​ಡೌನ್​​ ನಂತರ ಹೇಳದೆ‌ ಕೇಳದೆ ಕಾರ್ಮಿಕರ ಸಂಬಳವನ್ನು ಕಡಿತಗೊಳಿಸಿದ್ದನ್ನು ವಿರೋಧಿಸಿ ಕಾರ್ಮಿಕರು ಕಪ್ಪು ಪಟ್ಟಿ‌ ಧರಿಸಿ ಕೆಲಸಕ್ಕೆ ಹಾಜರಾಗಿರುವ ಘಟನೆ ನಂಜನಗೂಡಿನ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ನಡೆದಿದೆ.

ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾದ ಕಾರ್ಮಿಕರು

ಜಿಲ್ಲೆಯ ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ಎಟಿ ಆ್ಯಂಡ್ ಎಸ್ ಕಾರ್ಖಾನೆಯಲ್ಲಿ 1,000 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಕಾರ್ಖಾನೆಯ ಮಾಲೀಕರು ಲಾಕ್​ಡೌನ್​​ನ ನಂತರ ಕಾರ್ಖಾನೆಯನ್ನು ಪುನಾರಂಭಿಸಿದ್ದಾರೆ. ಆದ್ರೆ ವೇತನದಲ್ಲಿ ಶೇ.40 ರಷ್ಟು ಕಡಿತಗೊಳಿಸಿದ್ದರ ಪರಿಣಾಮ ಕಾರ್ಮಿಕರು ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಕಾನೂನು ಸಲಹೆಗಾರ ಶೇಷಾದ್ರಿ, ಇಂದು ಕಾರ್ಖಾನೆಯಲ್ಲಿ ಡಿ.ಎಲ್.ಸಿ‌ ಸಭೆ ಇರುವುದರಿಂದ ಕಾರ್ಮಿಕರ ಸಂಬಳ ಹಾಗೂ ಇನ್ನಿತರ ಸೌಲಭ್ಯ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಕಾರ್ಖಾನೆ ಮಾಲೀಕರು ತಿಳಿಸಿದ್ದಾರೆ. ಒಂದು ವೇಳೆ ಪೂರ್ತಿ ಸಂಬಳ‌ ನೀಡದಿದ್ದರೆ ಕಾನೂನು ಹೋರಾಟ ಮುಂದುವರೆಸುವುದಾಗಿ ಎಚ್ಚರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.