ETV Bharat / state

ಮೈಸೂರಿನಲ್ಲಿ ಚಿನ್ನದಂಗಡಿ ದರೋಡೆ, ಹತ್ಯೆ ಪ್ರಕರಣ : ಖದೀಮರ ಸುಳಿವು ನೀಡಿದವರಿಗೆ ₹5 ಲಕ್ಷ ಬಹುಮಾನ - ಮೈಸೂರಿನಲ್ಲಿ ಚಿನ್ನದಂಗಡಿ ದರೋಡೆ, ಹತ್ಯೆ ಪ್ರಕರಣ

ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿಡಲಾಗುವುದು. ಆದ್ದರಿಂದ ಸಾರ್ವಜನಿಕರು ತಮ್ಮ ಮಾಹಿತಿಯನ್ನು ಯಾವ ಸಮಯದಲ್ಲಾದರೂ ಈ ಕೆಳಕಂಡ ಮೊಬೈಲ್ ಸಂಖ್ಯೆಗೆ 9480802200 ಕರೆ ಮಾಡಿ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ..

Gold shop robbery and murder case in Mysore
ಮೈಸೂರಿನಲ್ಲಿ ಚಿನ್ನಾಭರಣ ಅಂಗಡಿ ದರೋಡೆಕೋರರ ಮಾಹಿತಿ ನೀಡಿದವರಿಗೆ ಬಹುಮಾನ
author img

By

Published : Aug 24, 2021, 7:17 PM IST

ಮೈಸೂರು : ವಿದ್ಯಾರಣ್ಯಪುರಂನ ಪ್ರಮುಖ ರಸ್ತೆಯಲ್ಲಿರುವ ಚಿನ್ನಾಭರಣ ಅಂಗಡಿ ದರೋಡೆ ಮಾಡಿ ಓರ್ವನ ಹತ್ಯೆಗೆ ಕಾರಣರಾದ ದರೋಡೆಕೋರರ ಮಾಹಿತಿ ನೀಡಿದವರಿಗೆ ಮೈಸೂರು ಪೊಲೀಸ್ ಇಲಾಖೆ ₹5 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದೆ.

ಆ‌.23ರಂದು ಜ್ಯುವೆಲ್ಲರಿ ಶಾಪ್‍ಗೆ ನಾಲ್ಕು ಜನರು ನುಗ್ಗಿ ಮಾರಕಾಸ್ತ್ರದಿಂದ ಬೆದರಿಸಿ ದರೋಡೆ ನಡೆಸಿದ್ದರು. ಈ ಸಂದರ್ಭದಲ್ಲಿ ಅಮಾಯಕನೊಬ್ಬ ಗುಂಡಿಗೆ ಬಲಿಯಾಗಿರುತ್ತಾನೆ. ಈ ಪ್ರಕರಣವನ್ನು ನಗರ ಪೊಲೀಸ್ ಇಲಾಖೆಯು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ಪತ್ತೆಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.

Gold shop robbery and murder case in Mysore
ಮೈಸೂರು ಪೊಲೀಸ್ ಇಲಾಖೆ ಪ್ರಕಟಣೆ

ಸುಮಾರು 25 ಪೊಲೀಸ್ ಅಧಿಕಾರಿಗಳು ಮತ್ತು 80 ಜನ ಪೊಲೀಸ್ ಸಿಬ್ಬಂದಿಯನ್ನೊಳಗೊಂಡ ವಿವಿಧ ತಂಡಗಳು ಈ ಪ್ರಕರಣವನ್ನು ಬೇಧಿಸಲು ನಿರಂತರವಾಗಿ ಪ್ರಯತ್ನಿಸುತ್ತಿವೆ. ಯಾವುದೇ ಸಾರ್ವಜನಿಕರು ಈ ಪ್ರಕರಣದ ಪತ್ತೆ ಬಗ್ಗೆ ಉಪಯುಕ್ತ ಮಾಹಿತಿ ನೀಡಿ ಈ ಪ್ರಕರಣ ಬೇಧಿಸಲು ಸಹಕರಿಸಿದಲ್ಲಿ ಅಂತಹವರಿಗೆ ಪೊಲೀಸ್ ಇಲಾಖೆಯಿಂದ ₹5 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದು ಪೊಲೀಸ್ ಇಲಾಖೆ ಹೇಳಿದೆ.

ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿಡಲಾಗುವುದು. ಆದ್ದರಿಂದ ಸಾರ್ವಜನಿಕರು ತಮ್ಮ ಮಾಹಿತಿಯನ್ನು ಯಾವ ಸಮಯದಲ್ಲಾದರೂ ಈ ಕೆಳಕಂಡ ಮೊಬೈಲ್ ಸಂಖ್ಯೆಗೆ 9480802200 ಕರೆ ಮಾಡಿ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

ಓದಿ: ಚಿನ್ನದಂಗಡಿ ದರೋಡೆ, ಹತ್ಯೆ ಪ್ರಕರಣ : ಆರೋಪಿಗಳು ರಸ್ತೆಯಲ್ಲಿ ಓಡಾಡುತ್ತಿರುವ ದೃಶ್ಯ ಸೆರೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.