ETV Bharat / state

ಚಾಮುಂಡಿ ಬೆಟ್ಟಕ್ಕೆ ರೋಪ್ ವೇ: ಪರಿಸರವಾದಿಗಳ ವಿರೋಧ, ಹೋರಾಟದ ಎಚ್ಚರಿಕೆ - ETV Bharat kannada News

ಚಾಮುಂಡಿ ಬೆಟ್ಟಕ್ಕೆ ತೆರಳಲು ಮೆಟ್ಟಿಲುಗಳೂ ಸೇರಿದಂತೆ ನಾಲ್ಕು ಕಡೆ ವಿಶಾಲ ರಸ್ತೆಗಳಿವೆ. ಹಾಗಿದ್ದರೆ, ರೋಪ್ ವೇ ಏತಕ್ಕೆ? ಪರಿಸರವಾದಿಗಳ ಅಂಬೋಣವೇನು?.ನೋಡೋಣ.

Chamundi Hill
ಚಾಮುಂಡಿ ಬೆಟ್ಟ
author img

By

Published : Feb 12, 2023, 6:49 AM IST

ಮೈಸೂರು : ಧಾರ್ಮಿಕ‌ ಹಾಗೂ‌ ನೈಸರ್ಗಿಕವಾದ ಹಲವಾರು ಜೀವ ವೈವಿಧ್ಯಗಳಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಈ ಯೋಜನೆಯನ್ನು ಪುನರ್‌ಪರಿಶೀಲನೆ ನಡೆಸಿ ಕೈ ಬಿಡುವಂತೆ ಪರಿಸರವಾದಿಗಳು ಮನವಿ ಮಾಡಿದ್ದಾರೆ. ಇಲ್ಲದೇ ಇದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.

ವಿರೋಧವೇಕೆ?: ನಾಡ ಅಧಿದೇವತೆ ನೆಲೆಸಿರುವ ಚಾಮುಂಡಿ ಬೆಟ್ಟ ಸಾಂಸ್ಕೃತಿಕ ನಗರಿ ಹಾಗೂ ಇಡೀ ಕರುನಾಡಿಗೆ ಕಿರೀಟ ಕಳಸವಿದ್ದಂತೆ. ಬೆಟ್ಟವು 1,673 ಎಕರೆ ವಿಸ್ತೀರ್ಣ ಹೊಂದಿದ್ದು, ಪ್ರಾಕೃತಿಕ ಜೀವ ವೈವಿಧ್ಯತೆಯ ತಾಣ. ಸ್ವಾಭಾವಿಕ ರೀತಿಯ ಬೆಟ್ಟ. ಈ ಬೆಟ್ಟಕ್ಕೆ ಹೋಗಲು ಮೆಟ್ಟಿಲುಗಳೂ ಸೇರಿದಂತೆ ನಾಲ್ಕು ಕಡೆ ವಿಶಾಲವಾದ ರಸ್ತೆಗಳಿವೆ. ಹೀಗಾಗಿ, ರೋಪ್ ವೇ ಏಕೆ ಬೇಕು ಎಂಬುದು ಪರಿಸರವಾದಿಗಳ ಪ್ರಶ್ನೆ. ರೋಪ್ ವೇ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ. ಇದು ಮೈಸೂರಿನ ಪರಿಸರ ಪ್ರೇಮಿಗಳು ಹಾಗೂ "ಚಾಮುಂಡಿ ಬೆಟ್ಟ ಉಳಿಸಿ" ಹೋರಾಟ ಸಮಿತಿಯ ವಿರೋಧಕ್ಕೆ ಕಾರಣವಾಗಿದೆ.

ಕಳೆದ ವರ್ಷ ರಾಜ್ಯ ಬಜೆಟ್​ನಲ್ಲಿ ಯೋಜನೆಯ ಬಗ್ಗೆ ಪ್ರಸ್ತಾಪ ಆಗುತ್ತಿದ್ದಂತೆ ಇಲ್ಲಿನ ಪರಿಸರ ಪ್ರೇಮಿಗಳು, ವನ್ಯಜೀವಿ ತಜ್ಞರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಬೆಟ್ಟಕ್ಕೆ ರೋಪ್ ವೇ ಬಂದರೆ ಅಪಾಯ ಎಂದು ಸಹಿ ಸಂಗ್ರಹ ಚಳವಳಿ ಆರಂಭಿಸಿದ್ದರು. ಸುಮಾರು 70 ಸಾವಿರ ಆನ್‌ಲೈನ್ ಸಹಿ ಸಂಗ್ರಹಿಸಿ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಇಲ್ಲದೆಯೇ ಹೆಚ್ಚು ಜನರು ಭೇಟಿ ನೀಡುತ್ತಾರೆ. ಉತ್ತಮ ರಸ್ತೆಗಳಿವೆ‌. ಆದ್ದರಿಂದ ರೋಪ್ ವೇ ಅವಶ್ಯಕತೆ ಇಲ್ಲ ಎಂದಿದ್ದರು. ಪ್ರಧಾನಿಗೂ ಪತ್ರ ಬರೆದು ವಿರೋಧ ವ್ಯಕ್ತಪಡಿಸಿದ್ದರು.

ಜೀವ ವೈವಿಧ್ಯತೆಯ ತಾಣ: ಚಾಮುಂಡಿ ಬೆಟ್ಟ ಕೇವಲ ಭಕ್ತಿಯ ಕೇಂದ್ರ ಅಲ್ಲ, ಜೀವ ವೈವಿಧ್ಯತೆಯ ಆಶ್ರಯ ತಾಣ ಹಾಗೂ ನಗರದೊಳಗಿರುವ ಏಕೈಕ ಮೀಸಲು ಅರಣ್ಯ ಪ್ರದೇಶ ಹೊಂದಿರುವ ಪ್ರದೇಶವಾಗಿದೆ. 550 ಸಸ್ಯ ಪ್ರಭೇದ ಹಾಗೂ ಗಿಡ ಮೂಲಿಕೆಗಳ ಸಸ್ಯಗಳು ಇಲ್ಲಿವೆ. 105 ಜಾತಿಯ ಚಿಟ್ಟೆಗಳು, 100 ಜಾತಿಯ ಪಕ್ಷಿಗಳು ಹಾಗೂ ಬೆಟ್ಟದ ಸುತ್ತ 20 ಕೆರೆಗಳಿವೆ. ರೋಪ್ ವೇ ಅಳವಡಿಕೆಯಿಂದ ಜೀವ ಸಂಕುಲಗಳಿಗೆ ತೊಂದರೆ ಆಗುತ್ತದೆ ಎನ್ನುತ್ತಾರೆ ಪರಿಸರ ತಜ್ಞ ರವಿಕುಮಾರ್.

ರಾಜಕಾರಣಿಗಳ ಹೇಳಿಕೆ: ಚಾಮುಂಡಿ ಬೆಟ್ಟ ಧಾರ್ಮಿಕ ಹಾಗೂ ನೈಸರ್ಗಿಕ ಬೆಟ್ಟ ಪ್ರದೇಶ. ಇದು ಲಾಭಕ್ಕಾಗಿ ಪ್ರವಾಸೋದ್ಯಮ ಮಾಡುವ ಸ್ಥಳ ಅಲ್ಲ. ರೋಪ್ ವೇಯಿಂದ ಪರಿಸರಕ್ಕೆ ಹಾನಿ ಆಗುತ್ತದೆ. ಈ ಯೋಜನೆಯನ್ನು ಕೈ ಬಿಡುವುದೇ ಒಳಿತು ಎಂದು ಸಂಸದ ಶ್ರೀನಿವಾಸ ಪ್ರಸಾದ್ ಹೇಳಿದರು. ಸ್ಥಳೀಯ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೆಗೌಡ ಅವರು, ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಜಾರಿ ಮಾಡಲು ಅವಕಾಶ ಕೊಡುವುದಿಲ್ಲ ಎಂದಿದ್ದಾರೆ. ಕಳೆದ ವರ್ಷ ರೋಪ್ ವೇ ಯೋಜನೆ ಬಗ್ಗೆ ಪ್ರಸ್ತಾಪ ಬಂದಾಗ ಸ್ಥಳೀಯ ಪರಿಸರವಾದಿಗಳು ಚಾಮುಂಡಿ ಬೆಟ್ಟ ಉಳಿಸಿ ಎಂಬ ಸಮಿತಿ ರಚಿಸಿಕೊಂಡು ಹೋರಾಟ ನಡೆಸಿದ್ದರು. ಅದೇ ರೀತಿಯ ಹೋರಾಟವನ್ನು ನಡೆಸಲು ಈ‌ ಬಾರಿಯೂ ಸಿದ್ಧತೆಯನ್ನು ಚಾಮುಂಡಿ ಬೆಟ್ಟ ಉಳಿಸಿ ಹೋರಾಟ ಸಮಿತಿ ರೂಪಿಸಿದ್ದು, ಮುಂದಿನ ಮಂಗಳವಾರ ಸಭೆ ಸಹ ಹಮ್ಮಿಕೊಂಡಿದೆ.

ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ 'ಪ್ರಸಾದ್​'.. ತಜ್ಞರ ಅಭಿಪ್ರಾಯ ಪಡೆಯುವಂತೆ ಜಿಟಿ ದೇವೇಗೌಡ ಪತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.