ಮೈಸೂರು: ಇದೇ ಮೊದಲ ಬಾರಿ ದಸರಾಗೆ ಹೆಜ್ಜೆ ಹಾಕುವ ಮೂಲಕ 'ರೋಹಿತ್ 'ತನ್ನ ಚಾಪು ಮೂಡಿಸಲಿದ್ದಾನೆ ಎಂಬ ಸಾಕಷ್ಟು ನಿರೀಕ್ಷೆಯನ್ನು ಮಾವುತ ಹಾಗೂ ಕಾವಾಡಿ ಇಟ್ಟುಕೊಂಡಿದ್ದರು. ಆದರೀಗ ಅದು ಗಗನ ಕುಸುಮವಾಗಿದೆ.
ಹೌದು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ರಾಂಪುರ ಆನೆ ಶಿಬಿರದಿಂದ 'ರೋಹಿತ್' ಆನೆಯನ್ನು ಇದೇ ಮೊದಲ ಬಾರಿಗೆ ದಸರಾ ಮೆರವಣಿಗೆಗೆ ಆಯ್ಕೆ ಮಾಡಲಾಗಿತ್ತು. ಕ್ಯಾಪ್ಟನ್ ಅರ್ಜುನ ನೇತೃತ್ವದ ಆರು ಆನೆಗಳು ಗಜಪಯಣದೊಂದಿಗೆ ಆಗಮಿಸಿದ ನಂತರ ಎರಡನೇ ತಂಡದಲ್ಲಿ ರೋಹಿತ್ನ ಹೆಸರು ಇದ್ದಿದ್ದರಿಂದ , ಇದನ್ನು ಬಂಡೀಪುರಕ್ಕೆ ಕರೆದುಕೊಂಡು ಬರಲಾಗಿತ್ತು.
ಆದರೆ ಬಂಡೀಪುರ ಸಫಾರಿ ಕೌಂಟರ್ ಮುಂದೆ ಕಾರಿನ ಮುಂಭಾಗ ಜಖಂ ಮಾಡಿ ರಂಪಾಟ ಮಾಡಿದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಯಾಗಿದೆ.
ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಳ್ಳುವುದರಿಂದ ಏನಾದರು ಅನಾಹುತ ಆದರೆ ಯಾರು ಹೊಣೆ ಎಂಬ ಆಲೋಚನೆಯಿಂದ ಎಚ್ಚೆತ ಅಧಿಕಾರಿಗಳು ರೋಹಿತ್ನಿಗೆ ಕೊಕ್ ನೀಡಿದ್ದಾರೆ.
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಮೈಸೂರು ವಲಯದ ಸಿಎಫ್ ಆದ ಟಿ.ಹೀರಲಾಲ್ ಹಾಗೂ ಡಿಸಿಎಫ್ ಅಲೆಗ್ಸಾಂಡರ್ ಮಾತನಾಡಿ ವಿವರಣೆ ನೀಡಿದರು.