ಮೈಸೂರು : ಹೆದ್ದಾರಿಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮೇಟಗಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಫೆಬ್ರವರಿ 22 ರಂದು ಸಿದ್ದಲಿಂಗಪುರದ ಬಳಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಕಾರಿಗೆ ಉದ್ದೇಶಪೂರ್ವಕವಾಗಿ ಹಿಂಭಾಗದಿಂದ ಡಿಕ್ಕಿ ಹೊಡೆದು, ಬಳಿಕ ಆತನಿಂದ 20 ಸಾವಿರ ರೂ. ಹಣ ಕಿತ್ತುಕೊಂಡಿದ್ದರು. ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಕೈಗೊಂಡ ಮೇಟಗಳ್ಳಿ ಪೊಲೀಸರು ತಾಂತ್ರಿಕ ಸಾಕ್ಷ್ಯಾಧಾರಗಳು ಮತ್ತು ದೂರುದಾರರ ಮಾಹಿತಿ ಮೇರೆಗೆ ಆರೋಪಿಗಳಾದ ಜಮೀಲ್ ಖಾನ್ , ಶಂಕರ್ ಎಂಬವರನ್ನು ಮಾರ್ಚ್ 17 ರಂದು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು.
ಇದನ್ನೂ ಓದಿ : 2 ಕೋಟಿ ನಗದು, 30 ಸಾವಿರ ಸೆಟ್ ಟಾಪ್ ಬಾಕ್ಸ್ ವಶಕ್ಕೆ ಪಡೆದ ಚುನಾವಣಾಧಿಕಾರಿಗಳು!
13 ಪ್ರಕರಣಗಳಲ್ಲಿ ಭಾಗಿ: ವಿಚಾರಣೆ ವೇಳೆ, 2017 ರಿಂದ ಇದುವರೆಗೆ ಮೈಸೂರು ನಗರದ ವಿವಿ ಪುರಂ, ಕುವೆಂಪು ನಗರ, ಜಯಲಕ್ಷ್ಮಿಪುರಂ, ಸರಸ್ವತಿ ಪುರಂ, ನರಸಿಂಹರಾಜ , ಇಲವಾಲ, ಮಂಡ್ಯ ಜಿಲ್ಲೆಯ ಮದ್ದೂರು , ಶ್ರೀರಂಗಪಟ್ಟಣ ಗ್ರಾಮಾಂತರ ಹಾಗೂ ನಗರ, ಬೆಂಗಳೂರಿನ ಚಾಮರಾಜಪೇಟೆ, ಕುಂಬಳಗೂಡು ಹಾಗೂ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಂದೊಂದು ಪ್ರಕರಣಗಳಂತೆ 12 ದರೋಡೆ 1 ಕಳ್ಳತನ ಪ್ರಕರಣ ಸೇರಿ 13 ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಗಳಿಂದ 20 ಸಾವಿರ ನಗದು, 1 ಬೈಕ್ ಮತ್ತು 2 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.