ETV Bharat / state

ಮನೆಗೆ ನುಗ್ಗಿ, ವೃದ್ಧ ದಂಪತಿ ಬೆದರಿಸಿ ದರೋಡೆ ನಡೆಸಿದ್ದ ಆರೋಪಿಗಳ ಬಂಧನ

author img

By

Published : Aug 1, 2021, 10:47 PM IST

ಮನೆಗೆ ನುಗ್ಗಿ ವೃದ್ಧ ದಂಪತಿಯನ್ನು ಕಟ್ಟಿ ಹಾಕಿ ಮನೆಯಲ್ಲಿದ್ದ 6 ಲಕ್ಷ ರೂ.ನಗದು, 500 ಗ್ರಾಂ ಚಿನ್ನ,ಮನೆಯಲ್ಲಿದ್ದ ಡಿಬಿಬಿಎಲ್ ಬಂದೂಕನ್ನು ಕದ್ದೊಯ್ದಿದ್ದ ಆರೋಪಿಗಳನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.

robbers arrested in mysore
ಮೈಸೂರು ಎಸ್​ಪಿ ಸುದ್ದಿಗೋಷ್ಟಿ

ಮೈಸೂರು: ಹುಣಸೂರಿನಲ್ಲಿ ಮನೆಗೆ ನುಗ್ಗಿ ವೃದ್ಧ ದಂಪತಿಯ ಕೈ-ಕಾಲು ಕಟ್ಟಿ ಹಾಕಿ, ದರೋಡೆ ಮಾಡಿ ಪರಾರಿಯಾಗಿದ್ದ ದರೋಡೆಕೋರರನ್ನು ಐದು ದಿನಗಳಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೈಸೂರು ಎಸ್​ಪಿ ಸುದ್ದಿಗೋಷ್ಠಿ

ಪಿರಿಯಾಪಟ್ಟಣ ತಾಲೂಕಿನ ಕುಂಬಾರ ಬೀದಿ ನಿವಾಸಿ ಮೋಸಿನ್, ಹುಣಸೂರು ಪಟ್ಟಣದ ಇಮ್ರಾನ್, ಕುಶಾಲನಗರದ ಆಫ್ರಿನ್, ಮಡಿಕೇರಿ ತಾಲೂಕಿನ ಎಂ.ಎಚ್.ಆಶೀಕ್ ಹುಸೇನ್, ಮಡಿಕೇರಿ ಪಟ್ಟಣದ ಮಹಮ್ಮದ್ ಅಜರುದ್ದೀನ್, ಹುಣಸೂರು ಪಟ್ಟಣದ ಖಾಜಿ ಮೊಹಲ್ಲಾದ ಮೀರ್ಜಾ ತನ್ವೀರ್ ಬೇಗ್ ಬಂಧಿತ ದರೋಡೆಕೋರರು.

ಜುಲೈ 26ರ ಸಂಜೆ 7.15ರ ಸಮಯದಲ್ಲಿ ಹುಣಸೂರು ಪಟ್ಟಣದ ವಾಸಿ ಗಜಾಲಾ ತರಾನಮ್ ಮತ್ತು ಕುಟುಂಬದವರು ಮನೆಯಲ್ಲಿದ್ದಾಗ ಕಾಲಿಂಗ್ ಬೆಲ್ ಆಗಿದ್ದು, ಗಜಾಲಾ ತರಾನಮ್ ತಾಯಿ ಬಾಗಿಲು ತೆಗೆದಾಗ, ಐವರು ದರೋಡೆಕೋರರು ಮನೆಗೆ ನುಗ್ಗಿ ವೃದ್ಧ ದಂಪತಿಯ ಕೈ-ಕಾಲು ಕಟ್ಟಿ, ಮನೆಯಲ್ಲಿದ್ದ 6 ಲಕ್ಷ ರೂ.ನಗದು, 500 ಗ್ರಾಂ ಚಿನ್ನ,ಮನೆಯಲ್ಲಿದ್ದ ಡಿಬಿಬಿಎಲ್ ಬಂದೂಕನ್ನು ತೆಗೆದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಗಜಾಲಾ ತರಾನಮ್ ಹುಣಸೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣ ಕೈಗೆತ್ತಿಗೊಂಡ ಪೊಲೀಸರು, ಮೇಲ್ಕಂಡ ಆರೋಪಿಗಳನ್ನ ಆ. 31ರಂದು ಬಂಧಿಸಿದ್ದಾರೆ. ಬಂಧಿತರಿಂದ 72 ಸಾವಿರ ರೂ.ನಗದು, ಒಂದು ಬೈಕ್ ಹಾಗೂ ಒಂದು ಸ್ಯಾಂಟ್ರೋ ಕಾರನ್ನು ವಶಪಡಿಸಿಕೊಂಡಿದ್ದಾರೆ‌.

ಮಿರ್ಜಾ ತನ್ವೀರ್ ಬೇಗ್, ಹುಣಸೂರಿನ ವಿದ್ಯಾರ್ಥಿಗಳ ಜೋಡಿ ಕೊಲೆ ಹಾಗೂ ಹುಣಸೂರಿನ ತ್ಯಾಗರಾಜ ಪಿಳ್ಳೈ ಕೊಲೆ ಪ್ರಕರಣ ಆರೋಪಿಯಾಗಿದ್ದಾನೆ. ಆಫ್ರಿನ್ ಎಂಬಾತ ಕುಶಾಲನಗರದ ಪ್ರವೀಣ್ ಪೂಜಾರಿ ಕೊಲೆ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಆರ್.ಚೇತನ್ ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.