ETV Bharat / state

ನಿಂಬೆಹಣ್ಣಿನ ರಹಸ್ಯ ಬಿಚ್ಚಿಟ್ಟ ಸಚಿವ ರೇವಣ್ಣ... ಏನದು!? - ನಿಂಬೆಹಣ್ಣು

ನಾನು ನಿಂಬೆಹಣ್ಣನ್ನು ಹೆಚ್ಚು ಇಟ್ಟುಕೊಳ್ಳಲು ಹೋಗುವುದಿಲ್ಲ. ನನ್ನ ಹತ್ತಿರ ಇಟ್ಟುಕೊಳ್ಳುವುದು ಒಂದೇ. ಅದು ನಮ್ಮ ಕುಲ ದೇವರು ಈಶ್ವರ ಹಾಗೂ ಶೃಂಗೇರಿ ಗುರುಗಳ ಬಳಿಯ ನಿಂಬೆಹಣ್ಣು ಬಿಟ್ಟರೆ ಇನ್ಯಾವುದನ್ನು ಇಟ್ಟುಕೊಳ್ಳಲು ಹೋಗುವುದಿಲ್ಲ ಎಂದರು.

ಹೆಚ್.ಡಿ. ರೇವಣ್ಣ
author img

By

Published : Apr 11, 2019, 8:25 PM IST

ಮೈಸೂರು: ಮಾಟ-ಮಂತ್ರ ತಟ್ಟದೇ ಇರಲಿ ಎಂದು ನಾನು ನಿಂಬೆಹಣ್ಣನ್ನು ಇಟ್ಟುಕೊಳ್ಳುತ್ತೇನೆ ಎಂದು ನಿಂಬೆಹಣ್ಣಿನ ರಹಸ್ಯವನ್ನು ಸಚಿವ ಹೆಚ್.ಡಿ.ರೇವಣ್ಣ ಬಿಚ್ಚಿಟ್ಟಿದ್ದಾರೆ.

ಪತ್ರಕರ್ತರು ಸಚಿವ ರೆವಣ್ಣನವರಿಗೆ ನೀವು ಏಕೆ ನಿಂಬೆಹಣ್ಣನ್ನು ಇಟ್ಟುಕೊಳ್ಳುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ರೇವಣ್ಣ, ಮಾಟ-ಮಂತ್ರ ತಟ್ಟದೇ ಇರಲಿ. ಜೊತೆಗೆ ರಾಜಕೀಯದಲ್ಲಿ ಕೆಲವರು ಕಳ್ಳರಿದ್ದಾರೆ. ಅವರನ್ನು ಎದುರಿಸಬೇಕಾದರೆ ನಿಂಬೆಹಣ್ಣನ್ನು ಇಟ್ಟುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

ಹೆಚ್.ಡಿ. ರೇವಣ್ಣ

ನಾನು ನಿಂಬೆಹಣ್ಣನ್ನು ಹೆಚ್ಚು ಇಟ್ಟುಕೊಳ್ಳಲು ಹೋಗುವುದಿಲ್ಲ. ನನ್ನ ಹತ್ತಿರ ಇಟ್ಟುಕೊಳ್ಳುವುದು ಒಂದೇ. ಅದು ನಮ್ಮ ಕುಲ ದೇವರು ಈಶ್ವರ ಹಾಗೂ ಶೃಂಗೇರಿ ಗುರುಗಳ ಬಳಿಯ ನಿಂಬೆಹಣ್ಣು ಬಿಟ್ಟರೆ ಇನ್ಯಾವುದನ್ನು ಇಟ್ಟುಕೊಳ್ಳಲು ಹೋಗುವುದಿಲ್ಲ ಎಂದರು.

ಪ್ರಚಾರಕ್ಕೆ ಹೋದಾಗ ಅಲ್ಲಿ ನಿಂಬೆಹಣ್ಣನ್ನು ಕೊಡುತ್ತಾರೆ. ಆಗ ಬೇಡ ಎಂದು ಹೇಳುವುದಕ್ಕೆ ಆಗುತ್ತದೆಯೇ? ಅದ್ದರಿಂದ ಇಟ್ಟುಕೊಳ್ಳುತ್ತೇನೆ. ಅದರಲ್ಲಿ ಏನಿದೆ ಎಂದರು.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.