ETV Bharat / state

ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ; ಮೈಸೂರಿನಲ್ಲಿ 6 ಯುವತಿಯರ ರಕ್ಷಣೆ

ಮೈಸೂರು ನಗರದಲ್ಲಿ ಸಿಸಿಬಿ ಪೊಲೀಸರು ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ ಮೇಲೆ ದಾಳಿ ನಡೆಸಿದ್ದಾರೆ.

Prostitution
ವೇಶ್ಯಾವಾಟಿಕೆ
author img

By

Published : Apr 18, 2023, 10:40 PM IST

ಮೈಸೂರು : ವೇಶ್ಯಾವಾಟಿಕೆ ದಂದೆ ನಡೆಸುತ್ತಿದ್ದ ಮನೆಯೊಂದರ ಮೇಲೆ ಇಂದು ನಗರದ ಸಿಸಿಬಿ ಪೊಲೀಸರು ದಿಢೀರ್​ ದಾಳಿ ಮಾಡಿದ್ದಾರೆ. ಇಬ್ಬರು ಆರೋಪಿತರನ್ನು ಬಂಧಿಸಿದ್ದು, 6 ಜನ ಯುವತಿಯರನ್ನು ರಕ್ಷಣೆ ಮಾಡಿ, 9,150 ರೂ. ಹಣವನ್ನು ಆರೋಪಿಗಳಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ನಗರದ ವಿ.ವಿ.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಕಾಳಿದಾಸ ರಸ್ತೆ, 8 ನೇ ಕ್ರಾಸ್‍ನಲ್ಲಿರುವ ಮನೆಯೊಂದರ ಮಹಡಿಯ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಸ್ಥಳೀಯ ಯುವತಿಯರಿಗೆ ಹಣದ ಆಮಿಷವೊಡ್ಡಿ ಕರೆಸಿಕೊಂಡು ವೇಶ್ಯಾವಾಟಿಕೆಗೆ ತಳ್ಳಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ
ಇಬ್ಬರು ಪುರುಷ ಗಿರಾಕಿಗಳೂ ಸಹ ಹಾಜರಿದ್ದು ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ವೇಶ್ಯಾವಾಟಿಕೆ ದಂಧೆ: ಠಾಣೆ ಎದುರೇ ಬೆಂಕಿ ಹಂಚಿಕೊಳ್ಳುವ ಬೆದರಿಕೆಯೊಡ್ಡಿದ ತೃತೀಯ ಲಿಂಗಿಗಳು

ಡಿಸಿಪಿ ಎಸ್.ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ಹಾಗೂ ಸಿಸಿಬಿ ಘಟಕದ ಎಸಿಪಿ ಎಸ್.ಎನ್.ಸಂದೇಶ್ ಕುಮಾರ್ ನೇತೃತ್ವದಲ್ಲಿ ಸಿಸಿಬಿ ಘಟಕದ ಪೊಲೀಸ್ ಇನ್ಸ್ಪೆಕ್ಟರ್​ ಅನೂಪ್ ಮಾದಪ್ಪ, ಪಿ.ಎಸ್.ಐಗಳಾದ ಪ್ರತಿಭಾ ಜಂಗವಾಡ, ರಾಜು ಕೋನಕೇರಿ, ಎ.ಎಸ್.ಐ ರಾಜು.ಆರ್ ಹಾಗೂ ಇನ್ನಿತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ : ಹನೂರು: ಚುನಾವಣಾ ತರಬೇತಿ ವೇಳೆ‌ ಹೃದಯಾಘಾತದಿಂದ ವ್ಯಕ್ತಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.