ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸಫಾರಿ ಶುಲ್ಕ ಹಾಗೂ ಕ್ಯಾಮೆರಾ ಶುಲ್ಕವನ್ನು ಕಡಿಮೆಗೊಳಿಸುವಂತೆ ಮನವಿ ಸಲ್ಲಿಸಲಾಗಿದೆ.
ನಾಗರಹೊಳೆ ಅರಣ್ಯ ಇಲಾಖೆ ವ್ಯಾಪ್ತಿಯ ಮೂರು ಸಫಾರಿ ಕೇಂದ್ರಗಳಲ್ಲಿ ಸಫಾರಿ ಶುಲ್ಕ ಹಾಗೂ ಸಫಾರಿಯಲ್ಲಿ ಹೋಗುವ ವನ್ಯಜೀವಿ ಛಾಯಾಗ್ರಾಹಕರು ಬಳಸುವ ಕ್ಯಾಮರಾಗಳಿಗೆ ಶುಲ್ಕವನ್ನು ದುಪ್ಪಟ್ಟು ಮಾಡಲಾಗಿದ್ದು ಬೇರೆ ಪ್ರದೇಶಗಳಿಗೆ ಹೋಲಿಸಿದರೆ ಈ ಶುಲ್ಕ ಅತ್ಯಂತ ದುಬಾರಿಯಾಗಿದೆ.
ಈ ಹಿನ್ನೆಲೆಯಲ್ಲಿ ವನ್ಯಜೀವಿ ಛಾಯಾಗ್ರಾಹಕರು ಬಳಸುವ ಕ್ಯಾಮೆರಾದ ದರವನ್ನು ಕಡಿತಗೊಳಿಸುವಂತೆ ಮೈಸೂರಿನ ಅರಣ್ಯಭವನಕ್ಕೆ ವನ್ಯಜೀವಿ ಛಾಯಾಗ್ರಾಹಕರು ಭೇಟಿ ನೀಡಿ ಮನವಿ ಸಲ್ಲಿಸಿದ್ದಾರೆ.