ಮೈಸೂರು: ವಿಚ್ಛೇದನ ಪಡೆದಿದ್ದ ದಂಪತಿ ಜೀವನಾಂಶಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದು, ಈ ಸಂದರ್ಭದಲ್ಲಿ ನ್ಯಾಯಾಧೀಶರು ಲೋಕ ಅದಾಲತ್ನಲ್ಲಿ ಅವರಿಗೆ ಮರು ಮದುವೆ ಮಾಡಿಸಿದ ಘಟನೆ ಇಂದು ನಡೆಯಿತು.
ಮೈಸೂರಿನಲ್ಲಿ ಕಳೆದ ಕೆಲವು ದಿನಗಳಿಂದ ಲೋಕ ಅದಾಲತ್ ನಡೆಯುತ್ತಿದ್ದು, ಇಲ್ಲಿಯವರೆಗೆ 12 ಸಾವಿರ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲಾಗಿದೆ. ಅದರಲ್ಲಿ 19 ವಿಚ್ಛೇದನ ಪ್ರಕರಣಗಳು ರಾಜಿ ಮೂಲಕ ಬಗೆಹರಿದಿವೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ ನ್ಯಾಯಾಧೀಶರಾದ ಎಮ್.ಎಲ್.ರಘುನಾಥ್ ಸುದ್ದಿಗೋಷ್ಠಿಯಲ್ಲಿ ಮೆಗಾ ಲೋಕ ಅದಾಲತ್ನಲ್ಲಿ ವಿವರಿಸಿದರು.
ವಿಚ್ಛೇದನ ಪಡೆದ ದಂಪತಿಗೆ ಮರು ಮದುವೆ:
25 ವರ್ಷ ದಾಂಪತ್ಯ ಜೀವನ ನಡೆಸಿ ಕ್ಷುಲ್ಲಕ ಕಾರಣಕ್ಕಾಗಿ ಕಳೆದ 5 ವರ್ಷದ ಹಿಂದೆ ವಿಚ್ಛೇದನ ಪಡೆದಿದ್ದ ಮೈಸೂರು ನಗರದ ದಂಪತಿ ಜೀವನಾಂಶಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಇವರಿಗೆ ಒಂದು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದು, ಈ ದಂಪತಿಯ ಮನವೊಲಿಸಿ ಸುದ್ದಿಗೋಷ್ಠಿ ವೇಳೆಯಲ್ಲೇ ಅಕ್ಷತೆ ಹಾಕಿ ಹಾರ ಬದಲಾಯಿಸುವ ಮೂಲಕ ವಿಚ್ಛೇದನ ಪಡೆದಿದ್ದ ದಂಪತಿಗೆ ಮರು ಮದುವೆ ಮಾಡಿಸಿದರು.