ETV Bharat / state

ಮೈಸೂರು ರೈಲ್ವೆ ವಿಭಾಗದಿಂದ ದಾಖಲೆಯ ಸರಕು ಸಾಗಣೆ : ವಿವರ ಹೀಗಿದೆ

ಮೈಸೂರು ರೈಲ್ವೆ ವಿಭಾಗವು ಕಳೆದ ಎಂಟು ತಿಂಗಳ ಅವಧಿಯಲ್ಲಿ 7.242 ದಶಲಕ್ಷ ಟನ್ ಸರಕು ಸಾಗಣೆ ಮಾಡಿ ದಾಖಲೆ ನಿರ್ಮಿಸಿದೆ.

author img

By ETV Bharat Karnataka Team

Published : Dec 2, 2023, 7:06 PM IST

record-freight-dispatch-from-mysore-railway-division
ಮೈಸೂರು ರೈಲ್ವೆ ವಿಭಾಗದಿಂದ ದಾಖಲೆಯ ಸರಕು ಸಾಗಣೆ : ವಿವರ ಹೀಗಿದೆ

ಮೈಸೂರು : ಮೈಸೂರು ರೈಲ್ವೆ ವಿಭಾಗವು ಕಳೆದ ಎಂಟು ತಿಂಗಳ ಅವಧಿಯಲ್ಲಿ ಒಟ್ಟು 7.242 ದಶಲಕ್ಷ ಟನ್ ಸರಕು ಸಾಗಣೆ ಮಾಡಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. 2023ರ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಒಟ್ಟು 7.242 ದಶಲಕ್ಷ ಟನ್‌ (MT)ಗಳಷ್ಟು ಸರಕನ್ನು ವಿಭಾಗದ ವ್ಯಾಪ್ತಿಯಲ್ಲಿ ಸಾಗಾಟ ಮಾಡಿದೆ. ಇದು ಕಳೆದ ವರ್ಷಕ್ಕಿಂತ 1.700 ದಶಲಕ್ಷ ಟನ್​ ಹೆಚ್ಚು ಎಂದು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಸರಕು ಸಾಗಣೆಯಲ್ಲಿ ಗಣನೀಯ ಹೆಚ್ಚಳ : ಮೈಸೂರು ವಿಭಾಗವು ಪ್ರಸ್ತುತ ವರ್ಷ ಸರಕು ಸಾಗಣೆಯಲ್ಲಿ 1.700 ದಶಲಕ್ಷ ಟನ್​ ಹೆಚ್ಚಳವನ್ನು ದಾಖಲಿಸಿದೆ. ಇದು ಕಳೆದ 2022ರ ನವೆಂಬರ್ ತಿಂಗಳವರೆಗಿನ ಸರಕು ಸಾಗಾಟಕ್ಕಿಂತ ಶೇ.30.68ರಷ್ಟು ಹೆಚ್ಚಳ ದಾಖಲಿಸಿದೆ.

ಆದಾಯದಲ್ಲೂ ಹೆಚ್ಚಳ : ವಿಭಾಗವು 2023ರ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಸರಕು ಸಾಗಣೆಯಿಂದ 620.20 ಕೋಟಿ ಆದಾಯ ಗಳಿಸಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 171.54 ಕೋಟಿ ಹೆಚ್ಚುವರಿ ಆದಾಯವನ್ನು ಗಳಿಸಿದೆ. ನವೆಂಬರ್ 2023ರಲ್ಲಿ ವಿಭಾಗವು 1.029 ದಶಲಕ್ಷ ಟನ್​​ ಸರಕು ಸಾಗಣೆಯನ್ನು ಮಾಡಿದ್ದು, ಕಳೆದ ವರ್ಷಕ್ಕಿಂತ ಶೇ 53.13ರಷ್ಟು ಹೆಚ್ಚಳ ಕಂಡಿದೆ. ಜೊತೆಗೆ ಸರಕು ಸಾಗಣೆಯಿಂದ 79.88 ಕೋಟಿ ರೂ ಹೆಚ್ಚುವರಿ ಆದಾಯ ಬಂದಿದ್ದು, 2022ರ ನವೆಂಬರ್​ಗಿಂತ ಶೇ. 29.68ರಷ್ಟು ಹೆಚ್ಚು ಆದಾಯವನ್ನು ಗಳಿಸಿದೆ.

ವಿವಿಧ ಸರಕು ಸಾಗಾಟದ ವಿವರ : ಮೈಸೂರು ವಿಭಾಗದಲ್ಲಿ 2023ರ ನವೆಂಬರ್‌ ತಿಂಗಳಲ್ಲಿ ವಿವಿಧ ರೀತಿಯ ಸರಕುಗಳನ್ನು ದೇಶದ ವಿವಿಧೆಡೆಗೆ ರವಾನಿಸಲಾಗಿದೆ. ಇದರಲ್ಲಿ ಕಬ್ಬಿಣದ ಅದಿರು 0.830 ದಶಲಕ್ಷ ಟನ್​ (MT), ಖನಿಜ ತೈಲದಲ್ಲಿ 0.163 (MT), ಆಹಾರ ಧಾನ್ಯ 0.003 MT, ಆಟೋಮೊಬೈಲ್‌ 0.006 MT ಮತ್ತು ಇತರ ಸರಕುಗಳು 0.033 ದಶಲಕ್ಷ ಟನ್​​ ಸಾಗಾಟವಾಗಿವೆ.

ಈ ಬಗ್ಗೆ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀಮತಿ ಶಿಲ್ಪಿ ಅಗರ್ವಾಲ್ ಅವರು ಪ್ರತಿಕ್ರಿಯಿಸಿ, ವಿಭಾಗದ ಅತ್ಯುತ್ತಮ ಕಾರ್ಯಕ್ಷಮತೆಗೆ ಶ್ಲಾಘನೆ ವ್ಯಕ್ತಪಡಿಸಿದರು. "ಈ ಸಾಧನೆಯು ವಿಭಾಗದ ಕಾರ್ಯಾಚರಣೆ ಮತ್ತು ಗ್ರಾಹಕರ ತೃಪ್ತಿಯ ಕಡೆಗಿನ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ನಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ನಾವೀನ್ಯತೆ ಮತ್ತು ದಕ್ಷತೆಯತ್ತ ಹೆಚ್ಚು ಗಮನ ಹರಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ : ಶಿವಮೊಗ್ಗ: ಆನೆ ಮೇಲಿಂದ ಕೆಳಗೆ ಬಿದ್ದ ಮಾವುತ.. ವಿಡಿಯೋ ವೈರಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.