ETV Bharat / state

ದೆವ್ವ ಕರೆಯುತ್ತಿದೆ ಎಂದು ದೇವಸ್ಥಾನಕ್ಕೆ ಹೋಗಲು ಆಗುತ್ತದೆಯೇ: ಸುಮಲತಾ ವಿರುದ್ಧ ಶಾಸಕ ರವೀಂದ್ರ ತಿರುಗೇಟು - ಸಂಸದೆ ಸುಮಲತಾ ವಿರುದ್ದ ರವೀಂದ್ರ ಶ್ರೀಕಂಠಯ್ಯ ತಿರುಗೇಟು

ಸಂಸದೆ ಸುಮಲತಾ, ಜೆಡಿಎಸ್ ಶಾಸಕರನ್ನು ಅಣೆ ಮಾಡಲು ದೇವಾಲಯಕ್ಕೆ ಕರೆದ ವಿಚಾರಕ್ಕೆ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರತಿಕ್ರಿಯೆ ನೀಡಿ ದೆವ್ವ ಕರೆಯುತ್ತೆ ಎಂದು ದೇವಾಲಯಕ್ಕೆ ಹೋಗುವುದಕ್ಕೆ ಆಗುತ್ತಾ ಎಂದು ತಿರುಗೇಟು ನೀಡಿದ್ದಾರೆ.

KN_MYS_
ಶಾಸಕ ರವೀಂದ್ರ ಶ್ರೀಕಂಠಯ್ಯ
author img

By

Published : Oct 19, 2022, 1:46 PM IST

ಮೈಸೂರು: ಜೆಡಿಎಸ್ ಶಾಸಕರನ್ನು ಆಣೆ ಮಾಡಲು ದೇವಸ್ಥಾನಕ್ಕೆ ಕರೆದ ಸಂಸದೆ ಸುಮಲತಾ ಹೇಳಿಕೆಗೆ ಶ್ರೀರಂಗಪಟ್ಟಣದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ತಿರುಗೇಟು ನೀಡಿದ್ದಾರೆ.

ಸಂಸದೆ ಸುಮಲತಾ, ಜೆಡಿಎಸ್ ಶಾಸಕರನ್ನು ಆಣೆ ಮಾಡಲು ದೇವಾಲಯಕ್ಕೆ ಕರೆದ ವಿಚಾರವಾಗಿ ತಿರುಗೇಟು ನೀಡಿರುವ ಅವರು, ದೆವ್ವ ಕರೆಯುತ್ತದೆ ಎಂದು ದೇವಾಲಯಕ್ಕೆ ಹೋಗೋಕೆ ಆಗುತ್ತದಾ, ಜೆಡಿಎಸ್ ಶಾಸಕರು ದೇವರನ್ನು ನಂಬುವವರು ದಿನ ಬೆಳಗಾದರೆ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ನಮ್ಮನ್ನು ಆಣೆ ಪ್ರಮಾಣಕ್ಕೆ ಕರೆಯೊದಕ್ಕೆ ಇವರು ಯಾರು, ಇದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಆಗುತ್ತಿದೆ. ದೆವ್ವ ಕರೆದರೆ ನಾವು ಹೋಗಲು ಸಾಧ್ಯವೇ ಎಂದು ತಿರುಗೇಟು ನೀಡಿದ್ದಾರೆ.

ಇನ್ನು ಬೆಂಗಳೂರು ಮೈಸೂರು ಹೈವೇ ಕಾಮಗಾರಿಯಲ್ಲಿ ನೂರಾರು ಕೋಟಿ ಅಕ್ರಮ ನಡೆಸಿರುವವರು ಸುಮಲತಾ ಬೆಂಬಲಿಗರು. ಬೆಂಗಳೂರಿನ ಏಟ್ರಿಯಾ ಹೋಟೆಲ್​ಗೆ ಸುಮಲತಾ ಏಕೆ ಹೋಗಿದ್ದರು ಅಲ್ಲಿ ಏನನ್ನು ಡೀಲ್ ಮಾಡಿದರು ಎಂಬ ವಿಡಿಯೋ ದಾಖಲೆ ನಮ್ಮ ಬಳಿಯಿದೆ. ಅದನ್ನು ಸೂಕ್ತ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು. ಈಗಾಗಲೇ ಸಂಸದೆ ಸುಮಲತಾ ವಿರುದ್ಧ ಮಂಡ್ಯ ಜನರು ತಿರುಗಿ ಬಿದ್ದಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಶಾಸಕ ರವೀಂದ್ರ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಮಂಡ್ಯ ಬಾಲಕಿಯ ಅತ್ಯಾಚಾರ ಕೊಲೆ ಪ್ರಕರಣ: ಸಂತ್ರಸ್ತೆಯ ಕುಟುಂಬಕ್ಕೆ ₹10 ಲಕ್ಷ ಪರಿಹಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.