ETV Bharat / state

ರಾಜ್ಯದಲ್ಲಿದೆ 75 ಲಕ್ಷ ಅಲೆಮಾರಿ ಜನ, ಇಲಾಖೆ ಲೆಕ್ಕ 29 ಲಕ್ಷ! - Information of Nomadic and semi nomadic population

ಅಲೆಮಾರಿ ಜನಾಂಗದ ಸಾಂಸ್ಕೃತಿಕ ಚಟುವಟಿಕೆ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸಲಾಗುವುದು. ಮತ್ತು ಅವರ ಆಚಾರ-ವಿಚಾರಗಳ ಬಗ್ಗೆ ಡಾಕ್ಯುಮೆಂಟರಿ ಮಾಡಲಾಗುವುದು ಎಂದು ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ತಿಳಿಸಿದರು..

ರವೀಂದ್ರ ಶೆಟ್ಟಿ
ರವೀಂದ್ರ ಶೆಟ್ಟಿ
author img

By

Published : Jun 24, 2022, 6:05 PM IST

ಮೈಸೂರು : ರಾಜ್ಯದಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಜನಸಂಖ್ಯೆ 29 ಲಕ್ಷ ಇದೆ ಎಂದು ಅಧಿಕೃತ ಮಾಹಿತಿಗಳು ತಿಳಿಸಿವೆ. ಆದರೆ, ಸಮಾಜದ ಮುಖಂಡರ ಪ್ರಕಾರ, ಈ ಸಂಖ್ಯೆ ಸುಮಾರು 75 ಲಕ್ಷ ಇರುತ್ತದೆ ಎನ್ನುವ ಮಾಹಿತಿ ನೀಡಿದ್ದಾರೆ ಎಂದು ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ತಿಳಿಸಿದರು.

ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಮಾತನಾಡಿರುವುದು..

ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಲೆಮಾರಿ ಮತ್ತು ಅರೆ ಅಲೆಮಾರಿ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸಲು ಚಿಂತನೆ ನಡೆಸಲಾಗಿದೆ. ವಸತಿ ಸಚಿವ ವಿ. ಸೋಮಣ್ಣ ಅವರು ಕೂಡ ಸರ್ವೇ ಮಾಡಿ ವರದಿ ಕೊಟ್ಟರೆ ವಸತಿ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ನಿಗಮದಲ್ಲಿ ಕಳೆದ ವರ್ಷ 2. 8 ಕೋಟಿ ಉಳಿದಿದೆ. ಸರ್ಕಾರ ಪ್ರಸಕ್ತ ವರ್ಷ 16 ಕೋಟಿ ಬಿಡುಗಡೆ ಮಾಡಿದೆ. ಒಟ್ಟಾರೆ 18 ಕೋಟಿ ಹಣ ನಿಗಮದಲ್ಲಿದೆ. ಇದನ್ನು ಅಲೆಮಾರಿ ಜನಾಂಗದ ಶಿಕ್ಷಣ, ವಸತಿ ಶಿಕ್ಷಣ, ವಸತಿ ಮತ್ತು ಸ್ವಯಂ ಉದ್ಯೋಗದ ಅಭಿವೃದ್ಧಿಗೆ ಬಳಸಲಾಗುವುದು. ಗ್ರಾಮಮಟ್ಟದಿಂದ ಅಲೆಮಾರಿ ಹಾಗೂ ಅರೆ ಅಲೆಮಾರಿ ಕುಟುಂಬಗಳ ಸರ್ವೇ ಮಾಡಿ, ವರದಿ ನೀಡುವಂತೆ ಇಲಾಖೆಯ ಜಿಲ್ಲಾ ಅಧಿಕಾರಿ ಹಾಗೂ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಸಂಪೂರ್ಣವಾಗಿ ಸರ್ವೇ ಮಾಡಲಾಗುವುದು. ಅಲೆಮಾರಿ ಜನಾಂಗದ ಸಾಂಸ್ಕೃತಿಕ ಚಟುವಟಿಕೆ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸಲಾಗುವುದು. ಅಷ್ಟೇ ಅಲ್ಲ, ಅವರ ಆಚಾರ-ವಿಚಾರಗಳ ಬಗ್ಗೆ ಡಾಕ್ಯುಮೆಂಟರಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಓದಿ: ಸಿಬಿಐನಿಂದ ಹೊಸ ನೋಟಿಸ್ : ಜುಲೈ 1ಕ್ಕೆ ನ್ಯಾಯಾಲಯಕ್ಕೆ ಹಾಜರಾಗುತ್ತೇನೆ ಎಂದ ಡಿಕೆಶಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.