ETV Bharat / state

ಬಿಜೆಪಿಗೆ ಹೋಗಿರುವ ವಿಶ್ವನಾಥ್ ಯಾರ ಮಗು? ಜೆಡಿಎಸ್ ವಕ್ತಾರ ಕಿಡಿ - JDS Press meet

ಜೆಡಿಎಸ್​ ಎಂಬ ಮಗು ಮಿಠಾಯಿ ತೋರಿಸಿದವರ ಕಡೆ ಹೋಗುತ್ತದೆ ಎಂಬ ವಿಶ್ವನಾಥ್​ ಹೇಳಿಕೆಗೆ ಜೆಡಿಎಸ್​ನ ರಾಜ್ಯ ವಕ್ತಾರ ರವಿಚಂದ್ರೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.

pressmeet
ಸುದ್ದಿಗೋಷ್ಠಿ
author img

By

Published : Dec 17, 2020, 4:46 PM IST

ಮೈಸೂರು: ವಿಶ್ವನಾಥ್ ಕಾಂಗ್ರೆಸ್​ನಲ್ಲಿದ್ದಾಗ ಕಾಂಗ್ರೆಸ್ ನಮ್ಮ ತಾಯಿ ಎನ್ನುತ್ತಿದ್ದರು, ಜೆಡಿಎಸ್​ಗೆ ಬಂದಾಗ ದೇವೇಗೌಡರು ನಮ್ಮ ತಂದೆ ಸಮಾನ ಎನ್ನುತ್ತಿದ್ದರು. ಈಗ ಬಿಜೆಪಿಗೆ ಹೋಗಿರುವ ವಿಶ್ವನಾಥ್ ಯಾರ ಮಗು ಎಂದು ತಿಳಿಸಲಿ ಎಂದು ಜೆಡಿಎಸ್​ನ ರಾಜ್ಯವಕ್ತಾರ ರವಿಚಂದ್ರೇಗೌಡ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್​ನ ರಾಜ್ಯವಕ್ತಾರ ರವಿಚಂದ್ರೇಗೌಡ

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಿಠಾಯಿ ತೋರಿಸಿದವರ ಕಡೆ ಹೋಗುವ ಮಗು ಜೆಡಿಎಸ್ ಎಂದು ವಿಶ್ವನಾಥ್ ಹೇಳುತ್ತಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ಇದ್ದು ಬಿಜೆಪಿಗೆ ಹೋಗಿದ್ದಿರಾ.? ಈಗ ನರೇಂದ್ರ ಮೋದಿ ಏನಾಗಬೇಕು..? ಬಿಜೆಪಿಯವರು ಬಾಂಬೆಗೆ ಕರೆದುಕೊಂಡು ಹೋದಾಗ ಯಾವ ಮಿಠಾಯಿ ತಿನ್ನಿಸಿದರು ಎಂಬುದನ್ನು ತಿಳಿಸಿ ಎಂದು ಲೇವಡಿ ಮಾಡಿದರು.

ಓದಿ...ಜೆಡಿಎಸ್​ ಎಂಬ ಮಗು ಮಿಠಾಯಿ ತೋರಿಸಿದವರ ಕಡೆ ಹೋಗುತ್ತೆ: ಹೆಚ್​.ವಿಶ್ವನಾಥ್

ನೀವೂ ಒಬ್ಬ ವಕೀಲರಾಗಿದ್ದು, ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಮೇಲ್ಮನೆಗೆ ನಾಮ ನಿರ್ದೇಶನಗೊಂಡಿದ್ದೀರಿ. ನಿಮ್ಮನ್ನು ಅನರ್ಹ ಶಾಸಕನೆಂದು ಹೈಕೋರ್ಟ್ ತೀರ್ಪು ನೀಡಿದೆ. ನಿಮಗೆ ಮಾನ ಮರ್ಯಾದೆ ಇದ್ರೆ ಮೇಲ್ಮನೆ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ. ಇಲ್ಲವಾದಲ್ಲಿ ಕಾನೂನು ಹೋರಾಟ ಮಾಡಿ ನಿಮ್ಮನ್ನು ವಜಾಗೊಳಿಸುತ್ತೇವೆ ಎಂದು ಸವಾಲು ಹಾಕಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.