ಮೈಸೂರು: ಲಾಕ್ಡೌನ್ನಿಂದಾಗಿ ಮನೆ ಬಾಗಿಲಿಗೆ ಪಡಿತರ ವಿತರಿಸಲು ಚಾಲನೆ ನೀಡಲಾಗಿದ್ದು, ನಾಳೆಯಿಂದ ಆರಂಭವಾಗಲಿದೆ ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಶಿವಣ್ಣ ತಿಳಿಸಿದರು.
ಇಲ್ಲಿನ ಜಿಲ್ಲಾಡಳಿತದ ವತಿಯಿಂದ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಜೆ.ಕೆ ಮೈದಾನದಲ್ಲಿ ಇದಕ್ಕೆ ಚಾಲನೆ ನೀಡಲಾಗಿದ್ದು, ಪಡಿತರ ಕಾರ್ಡ್ ಹೊಂದಿರುವವರಿಗೆ 2 ತಿಂಗಳ ರೇಷನ್ ನೀಡಲಾಗುತ್ತಿದೆ.
ಸುಮಾರು 40 ವಾಹನಗಳ ಮೂಲಕ ಪಡಿತರ ಪದಾರ್ಥಗಳನ್ನು ಸಾಗಿಸಲಾಗುತ್ತಿದ್ದು, ನಾಳೆಯಿಂದ ಜಿಲ್ಲೆಯಲ್ಲಿರುವ 7.95 ಲಕ್ಷ ಅಂತ್ಯೋದಯ, ಬಿಪಿಎಲ್ ಹಾಗೂ ಎಪಿಎಲ್ ಸೇರಿದಂತೆ ವಿವಿಧ ಫಲಾನುಭವಿಗಳಿಗೆ ವಿತರಿಸಲಾಗುವುದು.
ಬಯೋಮೆಟ್ರಿಕ್ ಬದಲಿಗೆ ಒಟಿಪಿ: ಮುಂಚೆ ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಬಳಸಿ ಫಲಾನುಭವಿಗಳಿಗೆ ರೇಷನ್ ನೀಡಲಾಗುತ್ತಿತ್ತು. ಈಗ ಅವರ ಮೊಬೈಲ್ಗೆ ಬರುವ ಒಟಿಪಿಯನ್ನು ಪಡೆದು ಪಡಿತರ ವಿತರಿಸಲಾಗುವುದು ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶಿವಣ್ಣ ತಿಳಿಸಿದರು.