ETV Bharat / state

ಮದುವೆಯಾಗುವುದಾಗಿ ಯುವತಿ ಮೇಲೆ ಅತ್ಯಾಚಾರ : ಸಂತ್ರಸ್ತೆಯ ಸಂಬಂಧಿಕರಿಗೆ ಬೆತ್ತಲೆ ಫೋಟೊ ಕಳಿಸಿದ ಕೀಚಕ - mysore college girl Rape case

ಯುವಕನೋರ್ವ ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದಲ್ಲದೆ, ಆಕೆಯ ಬೆತ್ತಲೆ ಫೋಟೋಗಳನ್ನು ಸಂಬಂಧಿಕರಿಗೆ ಕಳಿಸಿರುವ ಪ್ರಕರಣ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ..

rape-on-young-woman-in-mysore
ಮದುವೆಯಾಗುವುದಾಗಿ ಯುವತಿ ಮೇಲೆ ಅತ್ಯಾಚಾ
author img

By

Published : May 27, 2022, 6:06 PM IST

ಮೈಸೂರು : ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವಕನೋರ್ವ ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೆ, ತನ್ನ ಬೆತ್ತಲೆ ಫೋಟೋಗಳನ್ನು ಸಂಬಂಧಿಕರಿಗೆ ರವಾನಿಸಿರುವ ಆರೋಪಿ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಸಂತ್ರಸ್ತ ಯುವತಿ ಮೈಸೂರು ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಹೆಚ್.​ಡಿ ಕೋಟೆ ತಾಲೂಕಿನ ಗ್ರಾಮವೊಂದರ ಯುವತಿ ಕೋಲಾರದ ಕೆಜಿಎಫ್​ನ ಕಾಲೇಜಿನಲ್ಲಿ ಓದುತ್ತಿದ್ದಾಗ 2021ರಲ್ಲಿ ಫೇಸ್​​ಬುಕ್​ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಾಗರಾಜು ಎಂಬಾತ ಪರಿಚಯವಾಗಿದ್ದಾನೆ. ಬಳಿಕ ಇವರ ಪರಿಚಯ ಪ್ರೇಮಕ್ಕೆ ತಿರುಗಿದ್ದು, ಆತ ವಿದ್ಯಾರ್ಥಿನಿಯನ್ನು ಕೆಜಿಎಫ್ ಬಸ್ ನಿಲ್ದಾಣಕ್ಕೆ ಕರೆಸಿಕೊಂಡು ನಂತರ ಅಂತರಗಂಗೆ ಬಳಿಯಿರುವ ಅರಣ್ಯಕ್ಕೆ ಕರೆದೊಯ್ದು ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರವೆಸಗಿದ್ದಾನೆ ಎಂದು ಈ ದೂರಿನಲ್ಲಿ ತಿಳಿಸಲಾಗಿದೆ.

ಅತ್ಯಾಚಾರದ ವೇಳೆ ಯುವತಿಯ ಬೆತ್ತಲೆ ಫೋಟೋಗಳನ್ನು ತೆಗೆದುಕೊಂಡಿದ್ದು, ಬಳಿಕ ಅವುಗಳನ್ನು ಬಳಸಿಕೊಂಡು ಬ್ಲಾಕ್​ಮೇಲ್​ ಮಾಡಿ ಹಲವು ಬಾರಿ ಕರೆಯಿಸಿಕೊಂಡು ಅತ್ಯಾಚಾರ ಮಾಡಿದ್ದಾನೆ. ಅಲ್ಲದೆ, ಮದುವೆಯಾಗುವುದಾಗಿ ಪದೇಪದೆ ಹೇಳುತ್ತಿದ್ದ. ಅನಾರೋಗ್ಯದ ಕಾರಣದಿಂದ ವಿದ್ಯಾರ್ಥಿನಿ ಗ್ರಾಮಕ್ಕೆ ಹಿಂದಿರುಗಿದಾಗ ಆಕೆಗೆ ಕರೆ ಮಾಡಿದ ಯುವಕ ಮದುವೆ ಮಾಡಿಕೊಳ್ಳುತ್ತೇನೆ ಬಾ ಎಂದು ಕರೆದಿದ್ದಾನೆ. ಆದರೆ, ಯುವತಿ ಆತನ ಕರೆಗೆ ಸ್ಪಂದಿಸಿಲ್ಲ.

ಬಳಿಕ ಕಳೆದ ಏಪ್ರಿಲ್ 29ರಂದು ವಿದ್ಯಾರ್ಥಿನಿಯ ಗ್ರಾಮಕ್ಕೆ ಬಂದಿದ್ದ ಯುವಕ ತನ್ನ ಜೊತೆ ಬರುವಂತೆ ಕರೆದನಾದರೂ ಇವನ ಚಾಳಿ ಗೊತ್ತಿದ್ದರಿಂದ ಆಕೆ ಹೋಗಲು ನಿರಾಕರಿಸಿದ್ದಾಳೆ. ಈ ಸಂದರ್ಭದಲ್ಲಿ ಗ್ರಾಮದಲ್ಲಿ ಕೆಲವರ ಮೊಬೈಲ್ ನಂಬರ್​​ ಪಡೆದುಕೊಂಡಿದ್ದ ಆರೋಪಿ ಕೆಲದಿನಗಳ ನಂತರ ಆಕೆಯ ತಾಯಿ, ಸಂಬಂಧಿಕರಿಗೆ ವಾಟ್ಸ್ಆ್ಯಪ್​​ ಮೂಲಕ ಯುವತಿಯ ಬೆತ್ತಲೆ ಫೋಟೋಗಳನ್ನು ಕಳುಹಿಸಿದ್ದಾನೆ. ನಂತರ ಮದುವೆಯಾಗುವುದಾಗಿ ಕೇಳಿದಾಗ ಜಾತಿಯ ಕಾರಣ ಮುಂದಿಟ್ಟು ಮದುವೆಗೆ ನಿರಾಕರಿಸಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ. ಈ ಸಂಬಂಧ ಮೈಸೂರು ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 2 ವರ್ಷದಲ್ಲಿ 15 ಮದುವೆ; ಇಬ್ಬರು ಮಕ್ಕಳ ತಾಯಿ: ಹನಿಮೂನ್​ ಹೆಸರಲ್ಲಿ ವಂಚಿಸುತ್ತಿದ್ದವಳ ಬಂಧನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.