ಮೈಸೂರು: ಕೊರೊನಾ ಎರಡನೇ ಅಲೆ ಹಿನ್ನೆಲೆ ಸರ್ಕಾರದ ಆದೇಶಗಳನ್ನು ಪಾಲಿಸಿ, ಮನೆ ಮಹಡಿ ಮೇಲೆ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ರಂಜಾನ್ ಹಬ್ಬವನ್ನು ಸರಳವಾಗಿ ಆಚರಿಸಿದರು.
ಮೈಸೂರಿನಲ್ಲಿ ಯಾವುದೇ ಮಸೀದಿಗಳು ಬಾಗಿಲು ತೆರೆಯದೇ, ಸರ್ಕಾರ ಆದೇಶ ಪಾಲನೆ ಮಾಡಿದ್ದಾರೆ. ಅಗ್ರಹಾರದ ಸಮೀಪ ಅಕ್ಕಪಕ್ಕದ ನಿವಾಸಿಗಳು ಸೇರಿ ಮನೆಯ ಮಹಡಿ ಮೇಲೆ ಪ್ರಾರ್ಥನೆ ಸಲ್ಲಿಸಿ, ಕೊರೊನಾ ತೊಲಗಲಿ ಎಂದು ಬೇಡಿಕೊಂಡಿದ್ದಾರೆ.