ETV Bharat / state

ಮೈಸೂರಿಗೆ ಬಂದ ಸೂಪರ್​ ಸ್ಟಾರ್ ರಾಮ್​ ಚರಣ್:​ 'ಗೇಮ್ ಚೇಂಜರ್' ಶೂಟಿಂಗ್​​ ಚುರುಕು - Actor Ram Charan Tej

Actor Ram Charan Tej: 'ಗೇಮ್ ಚೇಂಜರ್' ಶೂಟಿಂಗ್​​ ಸಲುವಾಗಿ ಸೌತ್​ ಸೂಪರ್ ಸ್ಟಾರ್ ರಾಮ್​ ಚರಣ್ ಮೈಸೂರಿಗೆ ಆಗಮಿಸಿದ್ದಾರೆ.

Ram Charan came to Mysore
ಮೈಸೂರಿಗೆ ಬಂದ 'ಗೇಮ್ ಚೇಂಜರ್' ನಟ ರಾಮ್​ ಚರಣ್
author img

By ETV Bharat Karnataka Team

Published : Nov 23, 2023, 3:56 PM IST

Updated : Nov 23, 2023, 4:12 PM IST

ಮೈಸೂರು: ದಕ್ಷಿಣ ಚಿತ್ರರಂಗದ ಖ್ಯಾತ ನಿರ್ದೇಶಕ ಶಂಕರ್ ಆ್ಯಕ್ಷನ್​ ಕಟ್​​ ಹೇಳುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಗೇಮ್ ಚೇಂಜರ್'. ಬ್ಲಾಕ್​​ಬಸ್ಟರ್ ಆರ್​ಆರ್​ಆರ್ ಬಳಿಕ ಬರುತ್ತಿರುವ ರಾಮ್​​ ಚರಣ್​ ಅವರ ಬಹು ನಿರೀಕ್ಷಿತ ಚಿತ್ರವಿದು. ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಶೂಟಿಂಗ್​ ಸಲುವಾಗಿ ಬಹುಬೇಡಿಕೆ ನಟ ರಾಮ್ ಚರಣ್ ಸೇರಿದಂತೆ ತಂಡ ಮೈಸೂರಿಗೆ ಆಗಮಿಸಿದೆ. ನಟ ರಾಮ್​ಚರಣ್​​ ಇಂದು ಹೈದರಾಬಾದ್​ನಿಂದ ಖಾಸಗಿ ಜೆಟ್​​​ನಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ನಟನನ್ನು ಚಿತ್ರತಂಡ ಸ್ವಾಗತಿಸಿ, ಶೂಟಿಂಗ್ ಲೊಕೇಶನ್​ಗೆ ಕರೆದುಕೊಂಡು ಹೋದರು.

ಸೌತ್​ ಸ್ಟಾರ್ ಹೀರೋ ರಾಮ್ ಚರಣ್ ಹಾಗೂ ಕಿಯಾರಾ ಅಡ್ವಾಣಿ ಜೋಡಿಯಾಗಿ ನಟಿಸುತ್ತಿರುವ ಗೇಮ್ ಚೇಂಜರ್ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಇಂದು ಮಹಾರಾಜ ಕಾಲೇಜಿನಲ್ಲಿ ಚಿತ್ರೀಕರಣ ನಡೆಯಲಿದೆ. ಇನ್ನೂ ಎರಡು-ಮೂರು ದಿನಗಳ ಕಾಲ ಮೈಸೂರಿನ ವಿವಿಧ ಭಾಗಗಳಲ್ಲಿ ಶೂಟಿಂಗ್​​ ನಡೆಯಲಿದೆ. ರಾಮ್ ಚರಣ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಆದ್ರೆ ಚಿತ್ರೀಕರಣದ ಬಗ್ಗೆ ಚಿತ್ರತಂಡ ಗುಟ್ಟುಬಿಟ್ಟುಕೊಟ್ಟಿಲ್ಲ.

2022ರ ಮಾರ್ಚ್​​ನಲ್ಲಿ ತೆರೆಕಂಡ ಆರ್​ಆರ್​ಆರ್​ ಅಭೂತಪೂರ್ವ ಯಶಸ್ಸು ಗಳಿಸಿತು. ನಿರೀಕ್ಷೆಗಳನ್ನೂ ಮೀರಿ, ಗಡಿ ದಾಟಿ, ಸಾಗರೋತ್ತರ ಪ್ರದೇಶಗಳಲ್ಲೂ ಸಖತ್​ ಸದ್ದು ಮಾಡಿತು. ಸೂಪರ್​ ಹಿಟ್​ 'ನಾಟು ನಾಟು' ಹಾಡು ವಿಶ್ವದ ಪ್ರತಿಷ್ಠಿತ 'ಆಸ್ಕರ್​' ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ಸು ಕಂಡಿತ್ತು. ಬಾಹುಬಲಿ ಖ್ಯಾತಿಯ ಎಸ್​ ಎಸ್​ ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ರಾಮ್​ ಚರಣ್​ ಮತ್ತು ಜೂನಿಯರ್​ ಎನ್​ಟಿಆರ್​ ಪಾತ್ರ ಅದ್ಭುತವಾಗಿ ಮೂಡಿ ಬಂದಿದೆ. ವಿಶ್ವದ ಹಲವೆಡೆ ಸಂಚರಿಸಿ ಭಾರತೀಯ ಚಿತ್ರರಂಗದ ಕೀರ್ತಿ ಪತಾಕೆಯನ್ನು ಹಾರಿಸಿ ಬಂದಿದ್ದಾರೆ. ಆರ್​ಆರ್​​ಆರ್​ ಸಿನಿಮಾ ಬಳಿಕ ರಾಮ್​ ಚರಣ್​ ಮತ್ತು ಜೂನಿಯರ್​ ಎನ್​ಟಿಆರ್ ಜನಪ್ರಿಯತೆ ನೂರು ಪಟ್ಟು ಹೆಚ್ಚಾಗಿದೆ. ಈ ಹಿನ್ನೆಲೆ ಅವರ ಮುಂದಿನ ಸಿನಿಮಾಗಳ ಮೇಲೆ ಕುತೂಹಲ ಹೆಚ್ಚೇ ಇರುತ್ತದೆ.

ಇದನ್ನೂ ಓದಿ: ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಬರ್ತಡೇ: ರೂಮರ್​ ಗರ್ಲ್​​ಫ್ರೆಂಡ್​ ಸುಹಾನಾ ಖಾನ್​ ಜೊತೆ ಸೆಲೆಬ್ರೇಶನ್

ಆರ್​ಆರ್​ಆರ್​ ಬಿಡುಗಡೆಗೊಂಡ ಬಳಿಕ ಕೆಲ ಸಮಯ ನಟ ರಾಮ್​ ಚರಣ್ ತೇಜ್​​ ಸಂಭ್ರಮಾಚರಣೆಯಲ್ಲೇ ಬ್ಯುಸಿಯಾಗಿದ್ದರು. ಹಲವು ದೇಶಗಳಿಗೆ ಹೋಗಿ ಈವೆಂಟ್​, ಸಂದರ್ಶನಗಳಲ್ಲಿ ಭಾಗಿಯಾಗಿದ್ದರು. ಹೀಗೆ ಕೆಲ ಸಮಯ ಬ್ಯುಸಿಯಾಗಿದ್ದ ನಟ ಸದ್ಯ ಗೇಮ್​ ಚೇಂಜರ್​ ಸಲುವಾಗಿ ಸುದ್ದಿಯಲ್ಲಿದ್ದಾರೆ. ಶಂಕರ್​​ ನಿರ್ದೇಶನದ ಗೇಮ್​​ ಚೇಂಜರ್​ ಸಿನಿಮಾದಲ್ಲಿ ಬಾಲಿವುಡ್​ ಬಹುಬೇಡಿಕೆ ನಟಿ ಅಭಿನಯಿಸುತ್ತಿದ್ದಾರೆ. ಎಸ್​ ಜೆ ಸೂರ್ಯ, ಶ್ರೀಕಾಂತ್​, ಅಂಜಲಿ, ಸುನೀಲ್​ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ದಕ್ಷಿಣ ಚಿತ್ರರಂಗದ ಖ್ಯಾತ ನಿರ್ಮಾಪಕ ದಿಲ್​ ರಾಜು ಬಿಗ್​ ಬಜೆಟ್​ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ತಮನ್​ ಸಂಗೀತ ಸಂಯೋಜಿಸುತ್ತಿದ್ದಾರೆ.

ಇದನ್ನೂ ಓದಿ: ಆ್ಯಕ್ಷನ್​​​ ಸೀನ್​​​ ಶೂಟಿಂಗ್ ವೇಳೆ ನಟ ಸೂರ್ಯಗೆ ಗಾಯ: ಆಸ್ಪತ್ರೆಗೆ ದಾಖಲು

Last Updated : Nov 23, 2023, 4:12 PM IST

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.