ETV Bharat / state

ರೈಲ್ವೆ ನಿಲ್ದಾಣವೇ ಇವರ ಟಾರ್ಗೆಟ್, ಕೊನೆಗೂ ಖೆಡ್ಡಕ್ಕೆ ಬಿದ್ರು ಕಳ್ಳಿಯರು - ವಿಶೇಷ ತಂಡ

ರೈಲ್ವೆ ನಿಲ್ದಾಣಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳಿಯರನ್ನು ಬಂಧಿಸಿ, 4 ಲಕ್ಷ ರೂ.ಮೌಲ್ಯದ ಚಿನ್ನಾಭರಣವನ್ನು ರೈಲ್ವೆ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ರೈಲ್ವೆ ನಿಲ್ದಾಣವೇ ಇವರ ಟಾರ್ಗೆಟ್, ಕೊನೆಗೂ ಖೆಡ್ಡಕ್ಕೆ ಬಿದ್ರು ಕಳ್ಳಿಯರು
author img

By

Published : Aug 30, 2019, 11:02 PM IST

ಮೈಸೂರು: ರೈಲ್ವೆ ನಿಲ್ದಾಣಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳಿಯರನ್ನು ಬಂಧಿಸಿ, 4 ಲಕ್ಷ ರೂ.ಮೌಲ್ಯದ ಚಿನ್ನಾಭರಣವನ್ನು ರೈಲ್ವೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದ ನಿವಾಸಿಯರಾದ ಶಾರದ(39), ಈರನಾಗಮ್ಮ(55) ಬಂಧಿತರು. ಆಗಸ್ಟ್.30ರ ಶುಕ್ರವಾರ ಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್ ರೈಲು, ಅರಸೀಕೆರೆ ರೈಲು ನಿಲ್ದಾಣಕ್ಕೆ ರೈಲು ಗಾಡಿ ಬಂದಾಗ ಅನುಮಾನಸ್ಪಾದವಾಗಿ ತಿರುಗಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದ ರೈಲ್ವೆ ಪೊಲೀಸರು ವಿಚಾರಣೆ ನಡೆಸಿದ್ದಾರೆ, ತನಿಖೆ ನಂತರ ಎರಡು ಪ್ರಕರಣಗಳು ಪತ್ತೆಯಾಗಿವೆ.

ಬೆಂಗಳೂರಿನ ಕೆಂಗೇರಿ ನಿವಾಸಿ ಎಸ್.ಕಮಲ ಅವರು 2019ರ ಫೆಬ್ರವರಿ 8ರಂದು ಬೀರೂರು ರೈಲ್ವೆ ನಿಲ್ದಾಣದಲ್ಲಿ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲುಗಾಡಿಯನ್ನು ಹತ್ತುವಾಗ 2ಲಕ್ಷ ರೂ.ಮೌಲ್ಯದ ಚಿನ್ನಾಭರಣವನ್ನು ಕಳ್ಳರು ಕದ್ದಿದ್ದಾರೆಂದು ಅರಸೀಕರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಅಲ್ಲದೇ ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿ ವಿಜಯ ಎಂಬ ಮಹಿಳೆ 2019ರ ಫೆಬ್ರವರಿ 14ರಂದು ದಾದರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಡೂರುನಿಂದ ಸೇಲಂಗೆ ಪ್ರಯಾಣ ಮಾಡಿಕೊಂಡು ಅರಸೀಕೆರೆ ರೈಲ್ವೆ ನಿಲ್ದಾಣಕ್ಕೆ ಬಂದಾಗ 40 ಸಾವಿರ ರೂ. ನಗದು ಹಾಗೂ 3.20 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳರು ಕದ್ದಿರುವುದಾಗಿ ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ಪ್ರಕರಣ ದಾಖಲಿಸಿದ್ದರು.

ರೈಲ್ವೆ ಪೊಲೀಸ್ ಅಧೀಕ್ಷಕರಾದ ಡಾ.ಎಂ.ಬಿ.ಬೋರಲಿಂಗಯ್ಯ ಅವರು ಈ ಪ್ರಕರಣವನ್ನು ಬೇಧಿಸಲು ವಿಶೇಷ ತಂಡವನ್ನು ರಚನೆ ಮಾಡಿದ್ದರು. ಈ ತಂಡವು ಇಂದು ಇಬ್ಬರು ಕಳ್ಳಿಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Intro:ಕಳ್ಳಿಯರ ಬಂಧನBody:ರೈಲ್ವೆ ನಿಲ್ದಾಣವೇ ಇವರ ಟಾರ್ಗೆಟ್, ಕೊನೆಗೂ ಖೆಡ್ಡಕ್ಕೆ ಬಿದ್ರು ಕಳ್ಳಿಯರು
ಮೈಸೂರು: ರೈಲ್ವೆ ನಿಲ್ದಾಣಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳಿಯರನ್ನು ಬಂಧಿಸಿ, ೪ ಲಕ್ಷ ರೂ.ಮೌಲ್ಯದ ಚಿನ್ನಾಭರಣವನ್ನು ರೈಲ್ವೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರವತಿ ಪಟ್ಟಣದ ನಿವಾಸಿಯರಾದ ಶಾರದ(೩೯), ಈರನಾಗಮ್ಮ(೫೫) ಬಂಧಿತ ಕಳ್ಳಿಯರು. ಆ.೩೦ರ ಶುಕ್ರವಾರ ಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್ ರೈಲು ಅರಸೀಕೆರೆ ರೈಲು ನಿಲ್ದಾಣಕ್ಕೆ ರೈಲು ಗಾಡಿ ಬಂದಾಗ ಅನುಮಾನಸ್ಪಾದವಾಗಿ ತಿರುಗಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದ ರೈಲ್ವೆ ಪೊಲೀಸರು ವಿಚಾರಣೆ ನಡೆಸಿದಾಗ, ಎರಡು ಪ್ರಕರಣಗಳು ಪತ್ತೆಯಾಗಿವೆ.
ಬೆಂಗಳೂರಿನ ಕೆಂಗೇರಿ ನಿವಾಸಿ ಎಸ್.ಕಮಲ ಅವರು ೨೦೧೯ರ ಫೆಬ್ರವರಿ ೮ರಂದು ಬೀರೂರು ರೈಲ್ವೆ ನಿಲ್ದಾಣದಲ್ಲಿ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲುಗಾಡಿಯನ್ನು ಹತ್ತುವಾಗ ೨ ಲಕ್ಷ ರೂ.ಮೌಲ್ಯದ ಚಿನ್ನಾಭರಣವನ್ನು ಕಳ್ಳರು ಕದಿದ್ದಾರೆ ಎಂದು ಅರಸೀಕರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿ ವಿಜಯ ಎಂಬ ಮಹಿಳೆ ೨೦೧೯ರ ಫೆಬ್ರವರಿ ೧೪ರಂದು ದಾದರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಡೂರುನಿಂದ ಸೇಲಂಗೆ ಪ್ರಯಾಣ ಮಾಡಿಕೊಂಡು ಅರಸೀಕೆರೆ ರೈಲ್ವೆ ನಿಲ್ದಾಣಕ್ಕೆ ಬಂದಾಗ ೪೦ಸಾವಿರ ರೂ. ನಗದು ಹಾಗೂ ೩.೨೦ ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳರು ಕದ್ದಿರುವುದಾಗಿ ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ಪ್ರಕರಣ ದಾಖಲಿಸಿದ್ದರು.
ರೈಲ್ವೆ ಪೊಲೀಸ್ ಅಧೀಕ್ಷಕರಾದ ಡಾ.ಎಂ.ಬಿ.ಬೋರಲಿಂಗಯ್ಯ ಅವರು ಈ ಪ್ರಕರಣವನ್ನು ಬೇಧಿಸಲು ವಿಶೇಷ ತಂಡವನ್ನು ರಚನೆ ಮಾಡಿದ್ದರು. ಈ ತಂಡವು ಇಂದು ಇಬ್ಬರು ಕಳ್ಳಿಯರನ್ನು ಬಂಧಿಸಿದೆ. Conclusion:ಕಳ್ಳಿಯರ ಬಂಧನ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.