ETV Bharat / state

ಬಳಕೆಯಾಗದೆ ಹಾಗೆಯೇ ಉಳಿದ ಮೈಸೂರು ವಿಭಾಗದ ರೈಲ್ವೆ ಬೋಗಿ ಕೋವಿಡ್ ಸೆಂಟರ್ - ರೈಲ್ವೆ ಕೋವಿಡ್ ಸೆಂಟರ್

ಇವುಗಳನ್ನು ಮೈಸೂರು ರೈಲ್ವೆ ವಿಭಾಗ ವ್ಯಾಪ್ತಿಯಲ್ಲಿ ಬರುವ ಹಾಸನ, ಶಿವಮೊಗ್ಗ ಟೌನ್, ಅರಸಿಕೆರೆ, ಹಾಗೂ ಮೈಸೂರು ಫ್ಲಾಟ್ ಫಾರಂನಲ್ಲಿ ಇಡಲು ಪ್ಲಾನ್ ಮಾಡಲಾಗಿತ್ತು. ಆದರೆ ಸರ್ಕಾರದಿಂದ ಪ್ರೋತ್ಸಾಹ ಸಿಗದೆ ಈ ಯೋಜನೆ ಮೂಲೆಗುಂಪಾಗಿದೆ.

railway-coach-covid-center-unused-in-mysore-division
ಮೈಸೂರು ವಿಭಾಗದ ರೈಲ್ವೆ ಬೋಗಿ ಕೋವಿಡ್ ಸೆಂಟರ್
author img

By

Published : Nov 9, 2020, 5:16 PM IST

ಮೈಸೂರು: ಕೋವಿಡ್ ಮಹಾಮಾರಿ ಜಗತ್ತನ್ನೇ ತಲ್ಲಣಗೊಳಿಸಿದ ಸಂದರ್ಭದಲ್ಲಿ ತುರ್ತು ಚಿಕಿತ್ಸೆಗಾಗಿ ಹಳೆಯ ರೈಲ್ವೆ ಬೋಗಿಗಳಲ್ಲಿ ನಿರ್ಮಾಣವಾದ ಕೋವಿಡ್ ಸೆಂಟರ್​​ಗಳು ರೋಗಗಳ ಸೇವೆಗೆ ಲಭ್ಯವಾಗದೆ ತುಕ್ಕು ಹಿಡಿದಿವೆ.

ಮೈಸೂರು ನೈಋತ್ಯ ರೈಲ್ವೆ ವಿಭಾಗದಲ್ಲಿ ಕಷ್ಟಪಟ್ಟು ನಿರ್ಮಾಣ ಮಾಡಿದ್ದ ರೈಲು ಬೋಗಿ ಕೋವಿಡ್ ಸೆಂಟರ್​​ಗಳ ಬಳಕೆಗಾಗಿ ರಾಜ್ಯ ಸರ್ಕಾರ ಯಾವುದೇ ಮನವಿ ಸಲ್ಲಿಸದ ಹಿನ್ನೆಲೆಯಲ್ಲಿ ಕೋವಿಡ್​​​ಗಾಗಿ ನಿರ್ಮಾಣವಾಗಿದ್ದ ರೈಲ್ವೆ ಬೋಗಿ ಕೋವಿಡ್ ವಾರ್ಡ್​​ಗಳು ಬಳಕೆಯಾಗದೆ ಮೂಲೆಗುಂಪಾಗಿವೆ.

ಬಳಕೆಯಾಗದೆ ಹಾಗೆಯೇ ಉಳಿದ ಮೈಸೂರು ವಿಭಾಗದ ರೈಲ್ವೆ ಬೋಗಿ ಕೋವಿಡ್ ಸೆಂಟರ್

ಇನ್ನು ಮೈಸೂರು ರೈಲ್ವೆ ವಿಭಾಗದ ವತಿಯಿಂದ ಕೋವಿಡ್ ತುರ್ತು ಚಿಕಿತ್ಸೆಗಾಗಿ 20 ವರ್ಷ ಸರ್ವಿಸ್ ಮುಗಿಸಿದ ಕೋಚ್​​ಗಳನ್ನು ಕೋವಿಡ್ ಸೆಂಟರ್​ಗಳಾಗಿ ಪರಿವರ್ತನೆ ಮಾಡಲಾಗಿತ್ತು. ಇದರಲ್ಲಿ ಮೈಸೂರು ರೈಲ್ವೆ ವಿಭಾಗದಿಂದ 32 ಕೋಚ್, ಅಶೋಕಪುರಂ ವರ್ಕ್ ಶಾಪ್​​ನಿಂದ 96 ಕೋಚ್ ಸೇರಿ ಒಟ್ಟು ಮೈಸೂರು ಡಿವಿಜನ್​​ನಿಂದ 128 ರೈಲ್ವೆ ಕೋಚ್​​ಗಳನ್ನು ಕೋವಿಡ್ ಸೆಂಟರ್​​ಗಳಾಗಿ ಪರಿವರ್ತನೆ ಮಾಡಲಾಗಿತ್ತು.

ಇವುಗಳನ್ನು ಮೈಸೂರು ರೈಲ್ವೆ ವಿಭಾಗ ವ್ಯಾಪ್ತಿಯಲ್ಲಿ ಬರುವ ಹಾಸನ, ಶಿವಮೊಗ್ಗ ಟೌನ್, ಅರಸಿಕೆರೆ, ಹಾಗೂ ಮೈಸೂರು ಫ್ಲಾಟ್ ಫಾರಂನಲ್ಲಿ ಇಡಲು ಪ್ಲಾನ್ ಮಾಡಲಾಗಿದ್ದು, ಆ ರೀತಿಯಲ್ಲಿ ಪ್ರತಿಯೊಂದು ಬೋಗಿಯ ಕೋವಿಡ್ ಸೆಂಟರ್​​ನಲ್ಲಿ 9 ಮಂದಿ ಕೋವಿಡ್ ಸೋಂಕಿತರು ಹಾಗೂ ಮೆಡಿಕಲ್ ಸ್ಟಾಫ್ ಇರಲು ಇದರ ಜೊತೆಗೆ ಆಕ್ಸಿಜನ್ ಸಿಲಿಂಡರ್ ಇಡಲು ಎಲ್ಲಾ ರೀತಿಯ ಡಿವೈಸ್ ಅನ್ನು ಇಡಲಾಗಿತ್ತು.

ಒಂದೊಂದು ರೈಲ್ವೆ ಬೋಗಿಯನ್ನು ಕೋವಿಡ್ ಸೆಂಟರ್​ ಆಗಿ ಪರಿವರ್ತಿಸಲು 35 ರಿಂದ 36 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ ಸೋಂಕು ಕಡಿಮೆಯಾಗುತ್ತಿರುವುದರಿಂದ ಕೋವಿಡ್​​ಗಾಗಿ ಪರಿವರ್ತನೆಯಾಗಿದ್ದ ಹಳೆಯ ರೈಲ್ವೆ ಬೋಗಿಗಳು ಒಂದು ಸಹ ಬಳಕೆಯಾಗಿಲ್ಲ ಎಂದು ರೈಲ್ವೆ ಇಲಾಖೆಯ ವರ್ಕ್ ಶಾಪ್ ಮ್ಯಾನೇಜರ್ ಶಾಂತಿಬಾಬು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.