ETV Bharat / state

ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರಕ್ಕೆ ರಾಹುಲ್​ ಗಾಂಧಿ ಒತ್ತಡ ಹೇರಿಕೆ ಸರಿಯಲ್ಲ.. ಸಚಿವ ಸಿ ಸಿ ಪಾಟೀಲ್ - ವಯನಾಡು ಸಂಸದ ರಾಹುಲ್ ಗಾಂಧಿ

ಕೇರಳದಲ್ಲಿ ರಾತ್ರಿ ಸಂಚಾರವನ್ನು ಬಂಡೀಪುರದ ಭಾಗದಿಂದ ಮುಕ್ತಗೊಳಿಸುವಂತೆ ಒತ್ತಡ ಹೇರುತ್ತಿರುವುದರ ಜೊತೆಗೆ ಕೇರಳದವರ ಪರವಾಗಿ ರಾಹುಲ್ ಗಾಂಧಿ ಮಾತನಾಡಿದ್ದು ಸರಿಯಲ್ಲ.‌ ಯಾಕೆಂದರೆ, ಪ್ರಾಣಿಗಳಿಗೂ ವೈಯ್ಯಕ್ತಿಕ ಬದುಕು ಇರುತ್ತದೆ ಎಂದು ಅರಣ್ಯ ಖಾತೆ ಸಚಿವ ಸಿ ಸಿ ಪಾಟೀಲ್ ಹೇಳಿದ್ದಾರೆ.

ಸಿ.ಸಿ.ಪಾಟೀಲ್
author img

By

Published : Oct 2, 2019, 5:14 PM IST

ಮೈಸೂರು: ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರಕ್ಕೆ ಸಂಸದ ರಾಹುಲ್ ಗಾಂಧಿ ಒತ್ತಡ ಹೇರುವುದು ಸರಿಯಲ್ಲ ಎಂದು ಅರಣ್ಯ ಸಚಿವ ಸಿ ಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ.

ಮೈಸೂರು ಮೃಗಾಲಯದಲ್ಲಿ ಸಿಂಗಾಪುರದಿಂದ ಆಗಮಿಸಿದ್ದ ಬಿಳಿ‌ ಘೇಂಡಾಮೃಗವನ್ನು ಪ್ರವಾಸಿಗರಿಗೆ ನೋಡಲು ಮುಕ್ತಗೊಳಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಾಣಿಗಳ ರಕ್ಷಣೆ ಹಾಗೂ ಪ್ರಾಣಿಗಳು ಸ್ವಚ್ಛಂದವಾಗಿ ಸಂಚಾರ ಮಾಡಲು ನಾವು ಯಾವುದೇ ಅಡಚಡಣೆ ಮಾಡಬಾರದು ಎಂದರು.

ಸಚಿವ ಸಿ ಸಿ ಪಾಟೀಲ್..

ಕೇರಳದಲ್ಲಿ ರಾತ್ರಿ ಸಂಚಾರವನ್ನು ಬಂಡೀಪುರದ ಭಾಗದಿಂದ ಮುಕ್ತಗೊಳಿಸುವಂತೆ ಒತ್ತಡ ಹೇರುತ್ತಿರುವುದರ ಜೊತೆಗೆ ಕೇರಳದವರ ಪರವಾಗಿ ರಾಹುಲ್ ಗಾಂಧಿ ಮಾತನಾಡಿದ್ದು ಸರಿಯಲ್ಲ.‌ ಯಾಕೆಂದರೆ, ಪ್ರಾಣಿಗಳಿಗೂ ವೈಯಕ್ತಿಕ ಬದುಕು ಇರುತ್ತದೆ. ಬಂಡೀಪುರ ಭಾಗದಲ್ಲಿ ಪ್ರಾಣಿಗಳು ಹೆಚ್ಚು ಇದ್ದು ಅವುಗಳ ರಾತ್ರಿ ಓಡಾಟ ಹೆಚ್ಚಾಗಿರುವ ಕಾರಣ ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಡುವುದು ಸರಿಯಲ್ಲ ಎಂದರು.

ರಾಹುಲ್ ಗಾಂಧಿ ಒಂದು ಕ್ಷೇತ್ರದ ಸಂಸದರಾಗಿ ಯೋಚನೆ ಮಾಡುವುದುಕ್ಕಿಂತ ಕಾಂಗ್ರೆಸ್​ನ ಮಾಜಿ‌ ರಾಷ್ಟ್ರೀಯ ಅಧ್ಯಕ್ಷನಾಗಿ ಯೋಚಿಸುವುದು ಒಳ್ಳೆಯದು. ಅಲ್ಲದೇ ಬಂಡಿಪುರ ಪ್ರದೇಶದಲ್ಲಿ ರಾತ್ರಿ ಸಂಚಾರಕ್ಕೆ ಕೋರ್ಟ್ ಕೂಡ ಅನುಮತಿ ನೀಡಿಲ್ಲ ಎಂದು ಅರಣ್ಯ ಸಚಿವ ಸಿ ಸಿ ಪಾಟೀಲ್ ಹೇಳಿದರು.

Intro:ಮೈಸೂರು: ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರಕ್ಕೆ ಒತ್ತಡ ಹೇರುತ್ತಿರುವ ಕೇರಳದ ಪರವಾಗಿ ಸಂಸದ ರಾಹುಲ್ ಗಾಂಧಿ, ಒತ್ತಡ ಹೇರುವುದು ಸರಿಯಲ್ಲ ಎಂದು ಅರಣ್ಯ ಸಚಿವ ಸಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.

Body:ಇಂದು ಮೃಗಾಲಯದಲ್ಲಿ ಸಿಂಗಾಪುರದಿಂದ ಆಗಮಿಸಿದ್ದ ಬಿಳಿ‌ ಘೇಂಡಾಮೃಗವನ್ನು ಪ್ರವಾಸಿಗರರಿಗೆ ಮುಕ್ತ ಗೊಳಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು,
ಪ್ರಾಣಿಗಳ ರಕ್ಷಣೆ ಹಾಗೂ ಸ್ವಚ್ಚಂಧವಾಗಿ ಸಂಚಾರ ಮಾಡಲು ನಾವು ಯಾವುದೇ ಅಡಚಡಣೆ ಮಾಡಬಾರದು ನೆನ್ನೆ ರಾಹುಲ್ ಗಾಂಧಿಯವರು ಕೇರಳದಲ್ಲಿ ರಾತ್ರಿ ಸಂಚಾರವನ್ನು ಬಂಡೀಪುರದ ಭಾಗದಿಂದ ಮುಕ್ತ ಗೊಳಿಸುವಂತೆ ಒತ್ತಡ ಹೇರುತ್ತಿರುವ ಪರವಾಗಿ ರಾಹುಲ್ ಗಾಂಧಿ ಮಾತನಾಡಿದ್ದು ಸರಿಯಲ್ಲ.‌ಏಕೆಂದರೆ ಪ್ರಾಣಿಗಳಿಗೂ ವಯಕ್ತಿಕ ಬದುಕು ಇರುತ್ತದೆ. ಬಂಡಿಪುರ ಭಾಗದಲ್ಲಿ ಪ್ರಾಣಿಗಳು ಅತಿ ಹೆಚ್ಚು ಇದ್ದು ಅವುಗಳ ರಾತ್ರಿ ಓಡಾಟ ಹೆಚ್ಚಾಗಿದ್ದು, ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಡುವುದು ಸರಿಯಲ್ಲ.
ರಾಹುಲ್ ಗಾಂಧಿ ಒಂದು ಕ್ಷೇತ್ರದ ಸಂಸದರಾಗಿ ಯೋಚನೆ ಮಾಡುವುದುಕ್ಕಿಂತ ಮಾಜಿ‌ ರಾಷ್ಟ್ರೀಯ ಅಧ್ಯಕ್ಷನಾಗಿ ಯೋಚಿಸುವುದು ಒಳ್ಳೆಯದು. ಅಲ್ಲದೇ ಬಂಡಿಪುರ ಪ್ರದೇಶದಲ್ಲಿ ರಾತ್ರಿ ಸಂಚಾರಕ್ಕೆ ಕೋರ್ಟ್ ಕೂಡ ಅನುಮತಿ ನೀಡಿಲ್ಲ ಎಂದು ಸಿ.ಸಿ.ಪಾಟೀಲ್.
ಬಿಜೆಪಿ ಸರ್ಕಾರದ ಆಯಸ್ಸು ಕೇವಲ ೨ ತಿಂಗಳು ಕುಮಾರಸ್ವಾಮಿ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಕೈ ಮುಗಿದರು.‌
ನಂತರ ಫೋನ್ ಕದ್ದಾಲಿಕೆ ಅಕ್ಷಮ್ಯ ಅಪರಾಧ ಇದು, ಜನಪ್ರತಿನಿಧಿಗಳಿಗೆ ಶೋಭೆ ತರುವುದಲ್ಲ ಎಂದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.