ಮೈಸೂರು: ರಾಜ್ಯ ಬಿಜೆಪಿ ಸಂಸದರೇ ನಿಮಗೆ ತಾಕತ್ತು, ಧಮ್ ಇದ್ಯಾ? ಇದ್ದರೆ ಪ್ರಧಾನಿ ಮೋದಿ ಮುಂದೆ ಹೋಗಿ ರಾಜ್ಯಕ್ಕಾಗಿರುವ ಅನ್ಯಾಯ ತಪ್ಪಿಸಿ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ. ಪುಷ್ಪ ಅಮರನಾಥ್ ಸವಾಲು ಹಾಕಿದರು.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಾಕತ್ತು, ಧಮ್ಮು ಇದ್ದರೆ ಕೇಂದ್ರದಿಂದ ಹೆಚ್ಚಿನ ಆಕ್ಸಿಜನ್ ತರಿಸಿಕೊಳ್ಳಿ. ಕೊರೊನಾ ನಿಯಂತ್ರಣ ವಿಚಾರವಾಗಿ ಕೇಂದ್ರಕ್ಕೆ ಮನವರಿಕೆ ಮಾಡಿ, ಹೆಚ್ಚಿನ ಪರಿಹಾರದ ಜೊತೆಗೆ ಅಗತ್ಯ ಕ್ರಮಗಳನ್ನ ಪೂರೈಸುವುದಕ್ಕೆ ಒತ್ತಡ ಹೇರಿ,ರಾಜ್ಯದ ಪರಿಸ್ಥಿತಿ ನೋಡಿ,ನಿಮ್ಮ ಜನ್ಮಕ್ಕೆ ನಿಮಗೆಲ್ಲಾ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು.
ಕೊರೊನಾ ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸಂಪೂರ್ಣ ವಿಫಲವಾಗಿದೆ. ಬಿಪಿಎಲ್ ಕಾರ್ಡುದಾರ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಿ. ನಿಮಗೆ ತಾಕತ್ತು ಇದ್ದರೆ ಈ ಕೆಲಸ ಮಾಡಿ,ಇಲ್ಲವಾದಲ್ಲಿ ರಾಜೀನಾಮೆ ನೀಡಿ ಮನಗೆ ಹೋಗಿ ಎಂದು ಕಿಡಿಕಾರಿದರು.
ಪಿಎಂ ಕೇರ್ ಹಾಗೂ ಸಿಎಂ ಕೇರ್ ಫಂಡ್ಗಳಿಗೆ ದಾನಿಗಳು ಹಣ ನೀಡಬೇಡಿ. ಅದೇ ಹಣವನ್ನು ಚಿಕಿತ್ಸೆಗಾಗಿ ಪರದಾಡುತ್ತಿರುವ ರೋಗಿಗಳಿಗೆ ನೀಡಿ. ಕಳೆದ ವರ್ಷ ಸಾವಿರಾರು ಕೋಟಿ ರೂ. ಪಿಎಂ ಹಾಗೂ ಸಿಎಂ ಕೇರ್ಗೆ ಹೋಗಿದೆ, ಅದರ ಲೆಕ್ಕವನ್ನು ಕೊಟ್ರಾ? ಎಂದು ಪ್ರಶ್ನಿಸಿದರು.