ETV Bharat / state

ಅಪ್ಪು ಅಭಿಮಾನಿಯಿಂದ ₹10 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣ

ಮೈಸೂರಿನಲ್ಲಿ ಅಪ್ಪು (ಪುನೀತ್ ರಾಜ್‌ಕುಮಾರ್) ಅಭಿಮಾನಿಯೊಬ್ಬರು ಗ್ರಂಥಾಲಯವನ್ನು ನಿರ್ಮಿಸಿ ಅಭಿಮಾನ ಮೆರೆದಿದ್ದಾರೆ.

author img

By

Published : Jun 21, 2023, 4:17 PM IST

Updated : Jun 21, 2023, 6:16 PM IST

Etv Bharat
Etv Bharat
ಅಪ್ಪು ಅಭಿಮಾನಿಯಿಂದ ₹10 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣ

ಮೈಸೂರು : ದಿ. ಪುನೀತ್​ ರಾಜ್‌ಕುಮಾರ್​ ಅವರು ಇಹಲೋಕ ತ್ಯಜಿಸಿ ಒಂದೂವರೆ ವರ್ಷ ಕಳೆಯುತ್ತಿದೆ. ನಟನ ಅಭಿಮಾನಿಗಳು ಒಂದಲ್ಲೊಂದು ರೀತಿಯ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಈ ಮೂಲಕ ಅಪ್ಪು ಅಮರ ಎಂದು ಜಗತ್ತಿಗೆ ಸಾರುತ್ತಿದ್ದಾರೆ.

ಮೈಸೂರಿನ ಗ್ರಾಮವೊಂದರಲ್ಲಿ ನಟನ ಅಭಿಮಾನಿಯೊಬ್ಬರು ಸ್ವಂತ ಖರ್ಚಿನಲ್ಲಿ ಗ್ರಂಥಾಲಯ ನಿರ್ಮಿಸಿದ್ದಾರೆ. ಈ ಮೂಲಕ ಅಕ್ಷರ ದಾಸೋಹಕ್ಕೆ ಮುಂದಾಗಿದ್ದಾರೆ. ಅಪ್ಪು ಪುತ್ಥಳಿಯನ್ನೂ ನಿರ್ಮಾಣ ಮಾಡಿದ್ದಾರೆ.

ಟಿ. ನರಸೀಪುರ ಬಳಿಯ ಮೇದಿನಿ ಗ್ರಾಮದ ಎಂ.ಎನ್.ಕುಮಾರ್ ಎಂಬವರು ಗ್ರಂಥಾಲಯ ನಿರ್ಮಿಸಿ ಬಡ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ. ಅಪ್ಪುವಿನ ಅಪ್ಪಟ ಅಭಿಮಾನಿಯಾಗಿರುವ ಇವರು ಅವರ ನೆನಪಿಗೋಸ್ಕರ 10 ಲಕ್ಷ ರೂಪಾಯಿ ಖರ್ಚಿನಲ್ಲಿ ಗ್ರಂಥಾಲಯ ಕಟ್ಟಿದ್ದಾರೆ.

ಇದನ್ನೂ ಓದಿ : ಸಾವಿನಲ್ಲೂ ಸಾರ್ಥಕತೆ ಮೆರೆದ ದಾವಣಗೆರೆಯ ಅಪ್ಪು ಅಭಿಮಾನಿ.. ನೇತ್ರದಾನ ಮಾಡಿದ ಮಾರ್ಕೆಟ್​ ರವಿ

ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ಎಂ.ಎನ್.ಕುಮಾರ್, "ನನಗೆ ಪುನೀತ್ ಎಂದರೆ ಪ್ರಾಣ. ಅವರ ನೆನಪು ಸದಾ ನಮ್ಮ ಜೊತೆಗಿರಬೇಕೆಂಬ ಉದ್ದೇಶದಿಂದ ಗ್ರಂಥಾಲಯ ನಿರ್ಮಾಣ ಮಾಡಿದ್ದೇನೆ. ಅವರ ಪುತ್ಥಳಿಯನ್ನೂ ನಿರ್ಮಿಸಿದ್ದೇನೆ. ಗ್ರಂಥಾಲಯದಿಂದ ಬಡ ವಿದ್ಯಾರ್ಥಿಗಳು ಹಾಗೂ ಉದ್ಯೋಗ ಹುಡುಕುವ ಯುವಕರಿಗೆ ಅನುಕೂಲ ಆಗಲಿದೆ" ಎಂದು ಹೇಳಿದರು.

ಕುಮುಟಾದಲ್ಲಿ ಪ್ರಯಾಣಿಕರ ತಂಗುದಾಣದಲ್ಲೇ ಗ್ರಂಥಾಲಯ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸ್ಕೇರಿ ಗ್ರಾಮದ ಪ್ರಯಾಣಿಕ ತಂಗುದಾಣವು ಗ್ರಂಥಾಲಯವಾಗಿಯೂ ಮಾರ್ಪಡಾಗಿದೆ. ಇಲ್ಲಿನ ಪುನೀತ್​ ಅಭಿಮಾನಿ ಬಳಗವು ಪ್ರಯಾಣಿಕರ ತಂಗುದಾಣವನ್ನು ಜನರಿಗೆ ಉಪಯುಕ್ತವಾಗುವ ರೀತಿಯಲ್ಲಿ ಗ್ರಂಥಾಲಯವನ್ನಾಗಿ ಮಾಡಿದ್ದಾರೆ.

ಪುನೀತ್​ ಅಭಿಮಾನಿ ಬಳಗದಿಂದ ವಿನೂತನ ಕಾರ್ಯ : ಪುನೀತ್​ ರಾಜಕುಮಾರ್ ಅವರ ಸಾಮಾಜಿಕ ಕಾರ್ಯಗಳಿಂದ ಸ್ಪೂರ್ತಿ ಪಡೆದ ಹೊಸ್ಕೇರಿ ಗ್ರಾಮದ ಯುವಕರ ತಂಡ ಅವರ ಹೆಸರಿನಲ್ಲಿ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದರು. ಅವರ ಪುಣ್ಯಸ್ಮರಣೆಗೆ ಏನಾದ್ರೂ ಒಂದು ಒಳ್ಳೆ ಕಾರ್ಯ ಮಾಡಬೇಕೆಂದು ನಿರ್ಧರಿಸಿದಾಗ ಊರಿನಲ್ಲಿ ಗ್ರಂಥಾಲಯ ಮಾಡಬೇಕು ಎನ್ನುವ ಯೋಚನೆ ಬಂದಿದೆ. ಗ್ರಂಥಾಲಯಕ್ಕೆ ಸರಿಯಾದ ಸ್ಥಳ ಹುಡುಕಾಟ ನಡೆಸುವಾಗ ಗ್ರಾಮದಲ್ಲಿದ್ದ ಪ್ರಯಾಣಿಕ ತಂಗುದಾಣ ಇವರ ಕಣ್ಣಿಗೆ ಬಿದ್ದಿದೆ. ಇದನ್ನು ಆಯ್ಕೆ ಮಾಡಿಕೊಂಡ ತಂಡ ಗ್ರಾಮದ ಹಿರಿಯರ ಜೊತೆ ಚರ್ಚೆ ನಡೆಸಿ ಪ್ರಯಾಣಿಕರ ತಂಗುದಾಣದಲ್ಲಿ ಗ್ರಂಥಾಲಯವನ್ನು ನಿರ್ಮಾಣ ಮಾಡಿದ್ದಾರೆ.

ಈ ಗ್ರಾಮದಿಂದ ಪ್ರತಿನಿತ್ಯ ಕುಮಟಾ ಪಟ್ಟಣ ಸೇರಿದಂತೆ ಶಾಲಾ, ಕಾಲೇಜಿಗೆ ಹೋಗುವ ಎಲ್ಲ ಪ್ರಯಾಣಿಕರು ಈ ತಂಗುದಾಣದಿಂದ ಪ್ರಯಾಣ ಮಾಡುತ್ತಾರೆ. ಈ ತಂಗುದಾಣದಲ್ಲಿ ಗ್ರಂಥಾಲಯ ಪ್ರಾರಂಭಿಸಲಾಗಿದ್ದು, ಪ್ರಯಾಣಿಕರು ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದತೊಡಗಿದ್ದಾರೆ. ಇಲ್ಲಿ ಕೇವಲ ಕಥೆ, ಕಾದಂಬರಿ, ಚುಟುಕು ಪುಸ್ತಕಗಳಷ್ಟೇ ಅಲ್ಲದೆ ಜ್ಞಾನಪೀಠ ಪುರಸ್ಕೃತರ ಹಾಗೂ ಸಾಧಕರ ಪುಸ್ತಕವನ್ನು ಇಡಲಾಗಿದೆ. ವಿದ್ಯಾರ್ಥಿಗಳಿಗೆ ಬೇಕಾದ ಪುಸ್ತಕಗಳನ್ನು ಇಲ್ಲಿ ಇರಿಸಲಾಗಿದೆ.

ಇದನ್ನೂ ಓದಿ : ಪುನೀತ್​​​ ಸಮಾಧಿ ದರ್ಶನಕ್ಕೆ ವಿಶೇಷ ಪಾದಯಾತ್ರೆ ಆರಂಭಿಸಿದ ಅಪ್ಪು ಅಭಿಮಾನಿ ಕುಟುಂಬ

Last Updated : Jun 21, 2023, 6:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.