ETV Bharat / state

ಮೈಸೂರು ನಗರದ ಪೊಲೀಸ್​​​ ಠಾಣೆಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ: ಡಿಸಿಪಿ - Mysore Police Station News

ಮೈಸೂರು ನಗರದ ಎಲ್ಲ ಠಾಣೆಗಳಿಗೂ ಸಾರ್ವಜನಿಕರನ್ನ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಡಿಸಿಪಿ ಡಾ.ಎ.ಎನ್.ಪ್ರಕಾಶಗೌಡ ತಿಳಿಸಿದ್ದಾರೆ.

Public restrictions on Mysore city police stations : DCP
ಮೈಸೂರು ನಗರ ಠಾಣೆಗಳಿಗೆ ಸಾರ್ವಜನಿಕರಿಗೆ ತಾತ್ಕಲಿಕ ನಿರ್ಬಂಧ: ಡಿಸಿಪಿ
author img

By

Published : Jul 3, 2020, 12:36 PM IST

ಮೈಸೂರು: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ನಗರದ ಎಲ್ಲ ಠಾಣೆಗಳಿಗೂ ಸಾರ್ವಜನಿಕರನ್ನ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಡಾ. ಎ.ಎನ್.ಪ್ರಕಾಶಗೌಡ ತಿಳಿಸಿದ್ದಾರೆ.

ಮೈಸೂರು ನಗರ ಠಾಣೆಗಳಲ್ಲಿ ಸಾರ್ವಜನಿಕರಿಗೆ ತಾತ್ಕಾಲಿಕ ನಿರ್ಬಂಧ: ಡಿಸಿಪಿ

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲ ಠಾಣೆಗಳಲ್ಲಿ ಹೆಲ್ಪ್ ಡೆಸ್ಕ್​ಗಳನ್ನು ತೆರೆಯಲಾಗಿದೆ. ಅಗತ್ಯವಾಗಿ ದೂರು ನೀಡುವವರು ಹೋದರೆ ಸಾಕು. ಅನಗತ್ಯವಾಗಿ ಠಾಣೆ ಮೆಟ್ಟಿಲು ಹತ್ತಬಾರದು ಎಂದು ಸಲಹೆ ನೀಡಿದ್ದಾರೆ. ಮೈಸೂರು ನಗರದಲ್ಲಿ 28 ಕಂಟೇನ್​ಮೆಂಟ್ ಝೋನ್​ಗಳಿವೆ. ನಿಯಮ ಉಲ್ಲಂಘನೆ ಮಾಡಿದ 44 ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗಿದೆ. ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದರು.

ಕೊರೊನಾ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಅಲ್ಲದೇ 55 ವರ್ಷ ಮೀರಿದ ಸಿಬ್ಬಂದಿಗಳನ್ನು ಕೊರೊನಾ ಕರ್ತವ್ಯಕ್ಕೆ ಬಳಸಿಕೊಳ್ಳುತ್ತಿಲ್ಲ. ಗೃಹರಕ್ಷಣಾ ಸಿಬ್ಬಂದಿ ಹಾಗೂ ಸ್ವಯಂ ಸೇವಕರನ್ನು ಅಗತ್ಯವಾಗಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.